ತಮಿಳುನಾಡಿನ ಕಾರ್ತಿಕಸ್ವಾಮಿ ಮಂದಿರ ಪ್ರಕರಣದಲ್ಲಿ ಮದ್ರಾಸ ಉಚ್ಚ ನ್ಯಾಯಾಲಯದ ಮದುರೈ ವಿಭಾಗೀಯ ಪೀಠದ ನಿರ್ಣಯ !

ಮಾನ್ಯ ಉಚ್ಚ ನ್ಯಾಯಾಲಯದ ಅಭಿಪ್ರಾಯದಲ್ಲಿ ‘ಆಡಳಿತದವರು ನೀಡಿರುವ ಸ್ಪಷ್ಟೀಕರಣವು ಯೋಗ್ಯವಾಗಿದೆ. ಸರಕಾರ ಮಂದಿರ ಪುನರ್ನಿರ್ಮಾಣಕ್ಕಾಗಿ ೩೦೦ ಕೋಟಿ ರೂಪಾಯಿಗಳನ್ನು ಘೋಷಣೆ ಮಾಡಿದೆ. ಅದು ವಿವೇಕಪೂರ್ಣವಾಗಿ ಖರ್ಚಾಗಬೇಕು’, ಎಂಬ ಇಚ್ಛೆಯನ್ನೂ ನ್ಯಾಯಾಲಯ ವ್ಯಕ್ತಪಡಿಸಿದೆ.

ಶಬರಿಮಲೆ ದೇವಸ್ಥಾನ ಪರಿಸರದಲ್ಲಿ ನಟ, ರಾಜಕೀಯ ಮುಖಂಡರು ಮುಂತಾದವರ ಛಾಯಾಚಿತ್ರಗಳನ್ನು ಕೊಂಡೊಯ್ಯುವ ಬಗ್ಗೆ ಕೇರಳ ಉಚ್ಚ ನ್ಯಾಯಾಲಯದ ಆಕ್ಷೇಪ

ಶಬರಿಮಲೆ ದೇವಸ್ಥಾನದ ಯಾತ್ರಿಕರು ದೇವಸ್ಥಾನದ ಪರಿಸರದಲ್ಲಿ ಚಲನಚಿತ್ರ ನಟ, ರಾಜಕೀಯ ಮುಖಂಡರು ಮತ್ತು ಪ್ರತಿಷ್ಠಿತರ ಛಾಯಾಚಿತ್ರಗಳು ಇರುವ ಫಲಕಗಳನ್ನು ಕೊಂಡೊಯ್ಯುತ್ತಾರೆ. ಇದರ ಕಡೆ ಗಮನ ನೀಡಬೇಕೆಂದು ಕೇರಳ ಉಚ್ಚ ನ್ಯಾಯಾಲಯ ತ್ರಾವಣ ಕೋರ್ ದೇವಸ್ವಂ ಬೋರ್ಡಗೆ ಆದೇಶ ನೀಡಿದೆ.

ನ್ಯಾಯವಾದಿಗಳ ಕೊರತೆಯಿಂದಾಗಿ ದೇಶದಲ್ಲಿ 63 ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ಬಾಕಿ – ಮುಖ್ಯ ನ್ಯಾಯಮೂರ್ತಿ

ಜಿಲ್ಲಾ ನ್ಯಾಯಾಲಯಗಳನ್ನು ಕನಿಷ್ಟವೆಂದು ತಿಳಿಯುವ ಮಾನಸಿಕತೆಯನ್ನು ಬದಲಾಯಿಸುವಂತೆ ನಾಗರಿಕರಿಗೆ ಕರೆ

ಸಮಾನ ನಾಗರಿಕ ಕಾನೂನಿನ ಅವಶ್ಯಕತೆ ಏನು ?

ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ೭೫ವರ್ಷಗಳಾದವು. ಕಾನೂನುಗಳನ್ನು ಕೇವಲ ಹಿಂದೂಗಳು ಮತ್ತು ಇತರ ಪಂಥದವರು ಪಾಲಿಸಬೇಕು ಮತ್ತು ಮತಾಂಧರಿಗೆ ಸೌಲಭ್ಯಗಳು ಸಿಗಬೇಕು. ಇದಕ್ಕೆ ಸಂವಿಧಾನದ ಆಧಾರ ಇದೆಯೇ ? ಮಹಿಳೆ ಮತ್ತು ಮಕ್ಕಳ ಅಧಿಕಾರದ ರಕ್ಷಣೆಗಾಗಿ ಹೋರಾಡುವವರು ಮತಾಂಧರ ವಿಷಯದಲ್ಲಿ ಶಾಂತವಾಗಿ ನೋಡುತ್ತಿರುತ್ತಾರೆ.

ವಿವಾದಗ್ರಸ್ತ ಪಠಾಣ್ ಚಲನಚಿತ್ರದ ವಿರುದ್ಧ ಶ್ರೀರಾಮಪುರ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು!

ಪಠಾಣ್ ಚಲನಚಿತ್ರದ ಸಂಕ್ಷಿಪ್ತ ಭಾಗ (ಟೀಸರ್) ಮತ್ತು ‘ಬೇಶರಮ ರಂಗ ಈ ಹಾಡನ್ನು ತೋರಿಸುವಾಗ ಇದರ ಪ್ರಮಾಣಪತ್ರ ತೋರಿಸಲಾಗಿಲ್ಲ. ಆದ್ದರಿಂದ ಈ ಚಲನಚಿತ್ರವನ್ನು ಯಾವುದೇ ಸಾಮಾಜಿಕ ಮಾಧ್ಯಮದಲ್ಲಿ ಟೀಸರ್, ಟ್ರೈಲರ್, ಹಾಡುಗಳು, ದೃಶ್ಯಗಳು, ಜಾಹೀರಾತು, ಹೋರ್ಡಿಂಗ್, ಪೋಸ್ಟರ್ ‘ಯು /ಎ ಪ್ರಮಾಣಪತ್ರವಿಲ್ಲದೇ ಪ್ರಸಾರ ಮಾಡಬಾರದು, ಇದಕ್ಕಾಗಿ ಈ ಮೊಕದ್ದಮೆ ಹೂಡಲಾಗಿದೆ.

ಮಥುರಾದಲ್ಲಿನ ಶ್ರೀಕೃಷ್ಣಜನ್ಮಭೂಮಿಯ ಸಮೀಕ್ಷೆಯನ್ನೂ ನಡೆಸಲಾಗುವುದು !

ಮಥುರಾದ ದಿವಾಣಿ ನ್ಯಾಯಾಲಯದ ಆದೇಶ
20 ಜನವರಿ 2023 ರೊಳಗೆ ಸಮೀಕ್ಷೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಆದೇಶ

ಅಮೇರಿಕಾದ `ಮರಿನ್’ ಸೈನ್ಯದಲ್ಲಿ ನೇಮಕಗೊಳ್ಳುವ ಸಿಖ್ಕರಿಗೆ ಗಡ್ಡ ಮತ್ತು ಪಗಡಿಗೆ ಅನುಮತಿ

ಅಮೇರಿಕಾದ `ಮರಿನ್’ (ನೌಕಾದಳದ ಹಾಗೆ ಕಾರ್ಯ ಮಾಡುವ) ಸೈನ್ಯದಲ್ಲಿ ನೇಮಕಗೊಳ್ಳುವ ಸಿಖ್ಕರಿಗೆ ಗಡ್ಡ ಹಾಗೂ ಪಗಡಿಗೆ ಒಂದು ನ್ಯಾಯಾಲಯವು ಅನುಮತಿ ನೀಡಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಬಾರದು; ಎಂದು ಹಚ್ಚಿದ್ದ ದೇವತೆಗಳ ಚಿತ್ರ ತೆಗೆಯುವಂತೆ ಸಲ್ಲಿಸಲಾದ ಅರ್ಜಿ ದೆಹಲಿ ಉಚ್ಚ ನ್ಯಾಯಾಲಯದಿಂದ ವಜಾ

ಹಿಂದೂ ದೇಶಗಳ ಹಿಂದೂಗಳ ದೇವತೆಗಳ ಈ ರೀತಿ ಆಗುವ ಅಪಮಾನವನ್ನು ತಡೆಗಟ್ಟಲು ಭಾಜಪ ಆಡಳಿತವಿರುವ ರಾಜ್ಯಗಳಾದರೂ ಮುಂದಾಳತ್ವ ವಹಿಸಿ ಆವಶ್ಯಕವಿದೆ, ಎಂದೇ ಹಿಂದೂಗಳಿಗೆ ಅನಿಸುತ್ತದೆ.

ಪಕ್ಷದ ಪ್ರಚಾರಕ್ಕಾಗಿ ಸರಕಾರಿ ಹಣದಿಂದ ಜಾಹೀರಾತು ನೀಡಿರುವ ಬಗ್ಗೆ ಆಮ ಆದ್ಮಿ ಪಕ್ಷದಿಂದ 97 ಕೋಟಿ ರೂಪಾಯಿಗಳನ್ನು ವಸೂಲು ಮಾಡಿರಿ.

ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜರಿವಾಲರು ಪಕ್ಷದ ಪ್ರಚಾರಕ್ಕಾಗಿ ಸರಕಾರಿ ಹಣವನ್ನು ಉಪಯೋಗಿಸಿರುವ ಬಗ್ಗೆ ದೆಹಲಿಯ ಉಪರಾಜ್ಯಪಾಲರಾದ ವ್ಹಿ.ಕೆ.ಸಕ್ಸೇನಾ ಇವರು ಆಮ ಆದ್ಮಿ ಪಕ್ಷದಿಂದ 97 ಕೋಟಿ ರೂಪಾಯಿಗಳನ್ನು ವಸೂಲು ಮಾಡುವಂತೆ ಸರಕಾರಕ್ಕೆ ಆದೇಶಿಸಿದ್ದಾರೆ.

ವರ್ಗಾಯಿಸಲಾಗಿರುವ ಆಸ್ತಿಯನ್ನು ಪೋಷಕರು ಹಿಂಪಡೆಯಲು ಸಾಧ್ಯವಿಲ್ಲ ! – ಮದ್ರಾಸ ಉಚ್ಚ ನ್ಯಾಯಾಲಯ

ಜನ್ಮ ಕೊಟ್ಟ ತಂದೆ-ತಾಯಿಯ ಆಸ್ತಿಯನ್ನು ಕಬಳಿಸಿ ಅವರನ್ನು ಗಾಳಿಗೆ ತೂರುವ ಮಕ್ಕಳು ಹುಟ್ಟುವುದು ಸಮಾಜದ ನೈತಿಕತೆಯ ಅವನತಿಯ ಸಂಕೇತ !