ಧರ್ಮರಕ್ಷಣೆಗಾಗಿ ಒಕ್ಕೊರಲಿನಿಂದ ಒಟ್ಟಾದ ಬಜಾಲ್ ನ ಹಿಂದೂ ಬಾಂಧವರು !

ಬಜಾಲ್ (ಮಂಗಳೂರು) : ದೇಶವನ್ನು ಆಳಿದ ಮುಘಲರು, ಬ್ರಿಟಿಷರು , ಪೋರ್ಚುಗೀಸರು, ಪ್ರತಿಯೊಬ್ಬರೂ ಧರ್ಮವನ್ನು ಗುರಿಯಾಗಿಸಿ ಹಿಂದೂ ಧರ್ಮವನ್ನು ನಾಶ ಮಾಡಲು ಪ್ರಯತ್ನಿಸಿದರು. ಸದ್ಯದ ಸ್ಥಿತಿಯಲ್ಲಿಯೂ ಕೂಡ ಹಿಂದೂ ಧರ್ಮದ ಮೇಲೆ ನಿರಂತರ ಆಘಾತ ನಡೆಯುತ್ತಿದೆ. ವಕ್ಫ್ ಕಾಯ್ದೆ, ಲವ್ ಜಿಹಾದ್ ನಂತಹ ಸಮಸ್ಯೆ ಹಿಂದೂಗಳು ಎದುರಿಸಬೇಕಾಗಿದೆ. ಧರ್ಮ ಉಳಿದರೆ ರಾಷ್ಟ್ರ ಉಳಿಯುವುದು, ರಾಷ್ಟ್ರ ಉಳಿದರೆ ನಾವು ಬದುಕಿರಲು ಸಾಧ್ಯ ಇದನ್ನು ಅರಿತುಕೊಳ್ಳುವ ಅವಶ್ಯಕತೆ ಇದೆ. ಹಿಂದೂ ರಾಷ್ಟ್ರ ಸಧ್ಯದ ಕಾಲದ ಅವಶ್ಯಕತೆಯಾಗಿದೆ. ಹಿಂದೂ ರಾಷ್ಟ್ರ ನಮಗೆ ಯಾರೂ ಉಡುಗೊರೆಯಾಗಿ ಕೊಡುವುದಿಲ್ಲ. ಇದಕ್ಕಾಗಿ ಸಂಘರ್ಷ ಮಾಡಬೇಕಾಗುತ್ತದೆ.

ಛತ್ರಪತಿ ಶಿವಾಜಿ ಮಹಾರಾಜರು ಸರ್ವಸ್ವವನ್ನು ತ್ಯಾಗ ಮಾಡಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಬಹುಸಂಖ್ಯಾತ ಇರುವ ಹಿಂದೂಗಳು ಶಿವಾಜಿಯವರನ್ನು ಆದರ್ಶ ಇಟ್ಟುಕೊಂಡು ಪ್ರತಿದಿನ ಒಂದು ಗಂಟೆಯಾದರೂ ರಾಷ್ಟ್ರ ಮತ್ತು ಧರ್ಮಕ್ಕಾಗಿ ತನು, ಮನ, ಧನದ ತ್ಯಾಗ ಮಾಡಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಡಾ. ಪ್ರಣವ್ ಮಲ್ಯ ಇವರು ಕರೆ ನೀಡಿದರು. ಅವರು 24 ನವೆಂಬರ್ ರವಿವಾರ ದಂದು ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಗೃಹ, ಕಾವು, ಬಜಾಲ್, ಮಂಗಳೂರಿನಲ್ಲಿ ಹಿಂದೂ ರಾಷ್ಟ್ರ-ಜಾಗೃತಿ ಸಭೆಯನ್ನು ಆಯೋಜಿಸಲಾಗಿತ್ತು. ಸುಮಾರು 250 ಕೂ ಅಧಿಕ ಹಿಂದೂ ಬಾಂಧವರು ಈ ಸಭೆಯಲ್ಲಿ ಉಪಸ್ಥಿತರಿದ್ದರು. 250ಕ್ಕೂ ಹೆಚ್ಚು ಹಿಂದೂ ಬಾಂಧವರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಹಿಂದೂ ಯುವ ಸೇನೆ ಮತ್ತು ಹಿಂದೂ ಸೇವಾ ಸಮಿತಿಯ ಕಾರ್ಯಕರ್ತರು, ಕಾವು ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಶ್ರೀ. ರಾಮಚಂದ್ರ ಆಳ್ವಾ, ಮಾಜಿ ಅಧ್ಯಕ್ಷರಾದ ಕಿರಣ್ ರೈ, ಸೂರ್ಯ ನಾರಾಯಣ ದೇವಸ್ಥಾನದ ಅಧ್ಯಕ್ಷರಾದ ಗಣೇಶ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಶೋಭಾ ಪೂಜಾರಿ ಮತ್ತು ವೀಣಾ ಮಂಗಲ ಇವರು ಉಪಸ್ಥಿತರಿದ್ದರು.
ಹಿಂದೂ ಜನಜಾಗೃತಿ ಸಮಿತಿಯ ಪರಿಚಯವನ್ನು ಶ್ರೀ. ವಿವೇಕ್ ಪೈ ಮಾಡಿ ಸಮಿತಿಯ ಅವಿರತ ಪ್ರಯತ್ನಕ್ಕೆ ಸಿಕ್ಕಿದ ಯಶಸ್ಸನ್ನು ಹೇಳಿದರು.
ಜಾತಿಗಳನ್ನು ಮೀರಿ ನಾವೆಲ್ಲರೂ ‘ಹಿಂದೂ’ ಎಂದು ಸಂಘಟಿತರಾಗಬೇಕಾಗಿದೆ – ಶ್ರೀ ನಟರಾಜ ಭಟ್,ಉಡುಪಿ
ಸನಾತನ ಧರ್ಮ ಅನಾದಿಕಾಲದಿಂದ ಇದೆ. ವೇದಕಾಲದಿಂದ ಜಾತಿಯ ವರ್ಣನೆ ಇಲ್ಲ, ಹಿಂದೂ ಧರ್ಮದಲ್ಲಿ ಯಾವುದೇ ಜಾತಿಯವರಿದ್ದರೂ ಅವರು ಸನಾತನಿಯರು. ಜಾತಿಯ ಹೆಸರಿನಲ್ಲಿ ಬೇರೆ ಆಗುವ ಬದಲು ಹಿಂದೂ ಧರ್ಮದ ಅಡಿಯಲ್ಲಿ ಸಂಘಟಿರಾಗಿ ಧರ್ಮಾಚರಣೆಯನ್ನು ಮಾಡಬೇಕು ಮತ್ತು ಧರ್ಮದ ಇತಿಹಾಸ, ಮಹತ್ವವನ್ನು ತಿಳಿದುಕೊಳ್ಳಬೇಕು. ಹಿಂದೂ ರಾಷ್ಟ್ರ ಸಾಕಾರಗೊಳಿಸಲು ಹಿಂದೂ ಬಾಂಧವರಿಗೆ ಸಂಘಟಿತರಾಗಲು ಆಧ್ಯಾತ್ಮಿಕ ಪ್ರಚನಕಾರರಾದ ಉಡುಪಿಯ ಶ್ರೀ. ನಟರಾಜ ಭಟ್ ಇವರು ಕರೆ ನೀಡಿದರು.
ಹಿಂದುಗಳು ಧರ್ಮಶಿಕ್ಷಣ ಪಡೆದು ಧರ್ಮರಕ್ಷಣೆಗಾಗಿ ಒಟ್ಟಾಗಬೇಕಾಗಿದೆ – ಸೌ. ಲಕ್ಷ್ಮಿ ಪೈ, ಸನಾತನ ಸಂಸ್ಥೆ

ಸನಾತನ ಸಂಸ್ಥೆಯ ವಕ್ತಾರರಾದ ಸೌ. ಲಕ್ಷ್ಮಿ ಪೈಯವರು ತಮ್ಮ ಪ್ರವಚನದಲ್ಲಿ ಸನಾತನ ಧರ್ಮದ ವೈಜ್ಞಾನಿಕತೆಯ ಬಗ್ಗೆ ಹಾಗೂ ಶ್ರೇಷ್ಠತ್ವದ ಬಗ್ಗೆ ವಿವರಿಸಿದರು. ಹಿಂದೂ ಧರ್ಮದಲ್ಲಿ ಹೇಳಲಾದ ಪ್ರತಿಯೊಂದು ಆಚರಣೆಗಳ ಹಿಂದೆ ವಿಜ್ಞಾನವಿದೆ, ಅಧ್ಯಾತ್ಮವಿದೆ ಮತ್ತು ಈಶ್ವರನ ಅಧಿಷ್ಠಾನವಿದೆ, ಎಲ್ಲರಿಗೂ ಮಂಗಳವಾಗಲಿ ಎಂಬ ಆಶಯ ಇದೆ. ವರ್ತಮಾನ ಕಾಲದಲ್ಲಿ ಹಿಂದೂಗಳು ಧರ್ಮದಿಂದ ದೂರ ಹೋಗಿರುವುದರಿಂದಲೇ ಅನೇಕ ಸಂಕಟಗಳನ್ನು ಮತ್ತು ಆಘಾತಗಳನ್ನು ಎದುರಿಸಬೇಕಾಗಿದೆ. ಮುಂಬರುವ ಭೀಕರ ಆಪತ್ಕಾಲವನ್ನು ಎದುರಿಸಲು ಪ್ರತಿಯೊಬ್ಬರೂ ಆಧ್ಯಾತ್ಮಿಕ ಸಾಧನೆಯನ್ನು ಮಾಡಿ ಆಧ್ಯಾತ್ಮಿಕ ಬಲವನ್ನು ಹೆಚ್ಚಿಸುವುದರ ಅವಶ್ಯಕತೆ ಇದೆ. ನಾವೆಲ್ಲರೂ ಈ ಕ್ಷಣದಿಂದ ಧರ್ಮಪಾಲನೆಯನ್ನು ಮಾಡಿ ಸಾಧನೆಯನ್ನು ಪ್ರಾರಂಭಿಸಿ ಸನಾತನ ಧರ್ಮರಕ್ಷಣೆಯ ದಿವ್ಯ ಸಂಕಲ್ಪ ಮಾಡೋಣ ಎಂದು ಉಪಸ್ಥಿತರಿಗೆ ಕರೆ ನೀಡಿದರು.
ಕ್ಷಣಚಿತ್ರ : ಸಂಘಟನೆಯ ಕಾರ್ಯಕರ್ತರು, ಗಣ್ಯ ವ್ಯಕ್ತಿಗಳು ಎಲ್ಲರು ಏಕಚಿತ್ತರಾಗಿ ಕೊನೆ ತನಕ ವಕ್ತಾರಾರ ಮಾರ್ಗದರ್ಶನ ಕೇಳುತ್ತಿದ್ದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”