ತಿರುವನಂತಪುರಂ (ಕೇರಳ) – 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿ ಪೊಲೀಸ್ ಅಧಿಕಾರಿಗೆ ಕೇರಳ ಹೈಕೋರ್ಟ್ ಜಾಮೀನು ನಿರಾಕರಿಸಿದೆ. ಬಾಲಕಿ ಪರಿಶಿಷ್ಟ ಜಾತಿಗೆ ಸೇರಿದವಳು ಎನ್ನಲಾಗಿದೆ.
ನ್ಯಾಯಮೂರ್ತಿ ಕೆ. ಬಾಬು ಅವರು, ಪ್ರಾಥಮಿಕ ತನಿಖೆಯಲ್ಲಿ ಸಾಕ್ಷಿ ಸಿಕ್ಕಿರುವ ಇಂತಹ ಗಂಭೀರ ಅಪರಾಧಗಳಲ್ಲಿ ಜಾಮೀನು ನೀಡಬಾರದು, ಈ ಅಪರಾಧದ ಸ್ವರೂಪವು ಜನರ ನಂಬಿಕೆಗೆ ಘಾಸಿಗೊಳಿಸಿದಷ್ಟು ಗಂಭೀರವಾಗಿದೆ. ಗಂಭೀರ ಅಪರಾಧಗಳಲ್ಲಿ ಜಾಮೀನು ವಿನಾಯಿತಿಯಾಗಿದ್ದರೆ, ಸಾಮಾನ್ಯವಾಗಿ ಜಾಮೀನು ನಿಯಮವಾಗಿದೆ. ಪರಿಸ್ಥಿತಿ ಬದಲಾದಾಗ ಮಾತ್ರ ಆರೋಪಿಗೆ ಜಾಮೀನು ನೀಡಬಹುದು. ಆರೋಪಿ ಅಧಿಕಾರಿ ಬಾಲಕಿಯನ್ನು ಆಕೆಯ ಮೊಬೈಲ್‌ನಲ್ಲಿ ಸಂಪರ್ಕಿಸಿ ತನ್ನ ಮನೆಗೆ ಕರೆಸಿಕೊಂಡು ನವೆಂಬರ್ 14, 2022 ರಂದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು2022ರಲ್ಲಿ ನಡೆದ ಈ ಪ್ರಕರಣ ಇಷ್ಟೊತ್ತಿಗೆ ಬಗೆಹರಿಯಬೇಕಿತ್ತು ಎಂದು ಜನ ಭಾವಿಸಿದ್ದಾರೆ. ರಕ್ಷಕರೇ ಪರಭಕ್ಷಕಗಳಾಗಿದ್ದರೆ ಅವರನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಬೇಕು ಮತ್ತು ಕಠಿಣ ಶಿಕ್ಷೆ ವಿಧಿಸಬೇಕು! |