ಪೊಲೀಸರು ಪೆಟ್ಟಿಗೆಯಲ್ಲಿ ಸಣ್ಣ ಸ್ಫೋಟವನ್ನು ಸ್ಫೋಟಿಸಿದರು
ಲಂಡನ್ (ಬ್ರಿಟನ್) – ನೈನ್ ಎಲ್ಮ್ಸ್ ಪ್ರದೇಶದ ಅಮೇರಿಕಾ ರಾಯಭಾರ ಕಚೇರಿಯ ಬಳಿ ಅನುಮಾನಾಸ್ಪದ ಪೆಟ್ಟಿಗೆ ಕಂಡುಬಂದಿದ ನಂತರ ಕೋಲಾಹಲ ಉಂಟಾಯಿತು. ಘಟನೆಯ ನಂತರ, ಮೆಟ್ರೋಪಾಲಿಟನ್ ಪೊಲೀಸರು ಪೆಟ್ಟಿಗೆಯ ನಿಯಂತ್ರಿತ ಸ್ಫೋಟವನ್ನು ನಡೆಸಿದರು. ಈ ಘಟನೆಯ ನಂತರ, ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ಪ್ರದೇಶದಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಸ್ಥಳೀಯ ಆಡಳಿತ ಈ ಬಗ್ಗೆ ತನಿಖೆ ನಡೆಸುತ್ತಿದೆ. ಮೆಟ್ರೋಪಾಲಿಟನ್ ಪೋಲಿಸ್ ಪ್ರಕಾರ, ಪ್ರಾಥಮಿಕ ತನಿಖೆಯಲ್ಲಿ ಅನುಮಾನಾಸ್ಪದ ಪೆಟ್ಟಿಗೆಯಲ್ಲಿ ಸಲಕರಣೆ ಇದೆ ಎಂದು ತಿಳಿದುಬಂದಿದೆ. ಅಮೇರಿಕಾದ ರಾಯಭಾರ ಕಚೇರಿಯು ಸ್ಥಳೀಯ ಆಡಳಿತಕ್ಕೆ ತ್ವರಿತ ಕ್ರಮಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದೆ ಮತ್ತು ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ ಎಂದು ಹೇಳಿದೆ.