ಸಮಾನ ನಾಗರಿಕ ಕಾನೂನಿನ ಅವಶ್ಯಕತೆ ಏನು ?

೧. ಮುಸಲ್ಮಾನ ಪತಿಯು ತನ್ನ ಪತ್ನಿಯನ್ನು ತನಗೆ ಒಪ್ಪಿಸಬೇಕೆಂದು ಪಂಜಾಬ್ ಮತ್ತು ಹರ್ಯಾಣಾ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸುವುದು

ಜಾವೇದ ಎಂಬ ಒಬ್ಬ ೨೬ ವರ್ಷದ ಮುಸಲ್ಮಾನ ಯುವಕನು ಪಂಜಾಬ್ ಮತ್ತು ಹರ್ಯಾಣಾ ಉಚ್ಚ ನ್ಯಾಯಾಲಯದಲ್ಲಿ ‘ಹೆಬಿಯಸ್ ಕಾರ್ಪಸ್’ ಅರ್ಜಿಯನ್ನು ಸಲ್ಲಿಸಿದನು. (‘ಹೆಬಿಯಸ್ ಕಾರ್ಪಸ್’ ಅಂದರೆ ಯಾವುದಾದರೊಬ್ಬ ವ್ಯಕ್ತಿಯನ್ನು ಕಾನೂನುಬಾಹಿರವಾಗಿ ಬಲವಂತದಿಂದ ಇಟ್ಟುಕೊಂಡಿದ್ದರೆ, ಉಚ್ಚ ನ್ಯಾಯಾಲಯವು ಸಂವಿಧಾನದ ಕಲಮ್ ೨೨೬ಕ್ಕನುಸಾರ ಹೆಬಿಯಸ್ ಕಾರ್ಪಸ್ ಅರ್ಜಿಯನ್ನು ದಾಖಲಿಸಿಕೊಳ್ಳುತ್ತದೆ.) ಇದರಲ್ಲಿ ಅವನು ನನ್ನ ಪತ್ನಿ, ವಯಸ್ಸು ೧೬ ವರ್ಷ, ಇವಳನ್ನು ಸೆಕ್ಟರ್ ೧೬, ಪಂಚಕುಲದಲ್ಲಿನ ಸುಧಾರಣಾಗೃಹದಲ್ಲಿ ಇಡಲಾಗಿದೆ. ೨೭.೭.೨೦೨೨ ರಂದು ಅವನು ಅವಳೊಂದಿಗೆ ವಿವಾಹವಾಗಿದ್ದು ಅವಳು ಅವನ ಪತ್ನಿಯಾಗಿದ್ದಾಳೆ; ಆದುದರಿಂದ ಅವಳನ್ನು ತನ್ನ ಬಳಿ ಕಳುಹಿಸಬೇಕು ಎಂದು ವಿನಂತಿಸಿದ್ದನು.

 

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

ಇವರಿಬ್ಬರೂ ಮುಸಲ್ಮಾನರಾಗಿದ್ದಾರೆ. ವಯಸ್ಸಿನ ಪುರಾವೆಯೆಂದು ಅವನು ಅವರಿಬ್ಬರ ಆಧಾರ ಕಾರ್ಡ್‌ಗಳನ್ನು ನ್ಯಾಯಾಲಯದಲ್ಲಿ ಸಲ್ಲಿಸಿದ್ದನು. ಅವರ ‘ಮುಸ್ಲಿಮ್ ಪರ್ಸನಲ್ ಲಾ’ಗನುಸಾರ ಹುಡುಗಿ ವಯಸ್ಸಿಗೆ ಬಂದ ನಂತರ (ಪ್ರಜೋತ್ಪಾದನಾ ಕ್ಷಮತೆ ಪ್ರಾಪ್ತವಾದ ನಂತರ) ಅವಳು ತನ್ನ ಇಚ್ಛೆಗನುಸಾರ ವಿವಾಹವಾಗಬಹುದು. ಅವಳ ತಾಯಿ-ತಂದೆ ಅವಳ ವಿವಾಹವನ್ನು ಅವಳ ಚಿಕ್ಕಪ್ಪನ ಜೊತೆಗೆ ಮಾಡಿ ಕೊಡುವವರಿದ್ದರು; ಆದರೆ ಆ ವಿವಾಹ ಅವಳಿಗೆ ಒಪ್ಪಿಗೆಯಿರಲಿಲ್ಲ. ಅವಳಿಗೆ ಜಾವೇದನ ಮೇಲೆ ಪ್ರೇಮವಿದೆ. ಅವರು ವಿವಾಹವಾಗಿದ್ದು ಅವರು ಪತಿಪತ್ನಿಯರಾಗಿದ್ದಾರೆ ಎಂದು ಹೇಳಿದಳು. ಹುಡುಗಿಯ ತಂದೆಯ ದೂರಿಗನುಸಾರ ಹುಡುಗಿಯನ್ನು ನ್ಯಾಯ ದಂಡಾಧಿಕಾರಿಗಳ ಎದುರಿಗೆ ಉಪಸ್ಥಿತಗೊಳಿಸಲಾಯಿತು. ಆಗ ಅವಳು ಸಾಕ್ಷಿಯನ್ನು ನೀಡುವಾಗ ‘ನನ್ನ ಇಚ್ಛೆಗನುಸಾರವೇ ಈ ವಿವಾಹವಾಗಿದೆ, ಆದ್ದರಿಂದ ನನ್ನನ್ನು ಸುಧಾರಣಾಗೃಹದಲ್ಲಿಡದೆ ನನ್ನ ಪತಿಯ ಜೊತೆಗೆ ಕಳುಹಿಸಬೇಕು’, ಎಂದು ಹೇಳಿದಳು.

೨. ವಿವಾಹ ಕಾನೂನುಬದ್ಧ ಎಂದು ತೋರಿಸಲು ಅರ್ಜಿದಾರನು ‘ಮುಸ್ಲಿಮ್ ಪರ್ಸನಲ್ ಲಾ’ದ ಆಧಾರ ಪಡೆಯುವುದು

ಪಂಜಾಬ್ ಮತ್ತು ಹರ್ಯಾಣಾ ಉಚ್ಚ ನ್ಯಾಯಾಲಯದಲ್ಲಿ ಯುಕ್ತಿವಾದದ ಪ್ರಕಾರ ‘ಮುಸ್ಲಿಮ್ ಪರ್ಸನಲ್ ಲಾ’ದ ಲೇಖಕ ಸರ್ ದಿನಶಾ ಮುಲ್ಲಾ ಇವರ ಪುಸ್ತಕದಲ್ಲಿನ ಕಲಮ್ ೧೯೫ ರ ಆಧಾರವನ್ನು ತೆಗೆದುಕೊಳ್ಳಲಾಯಿತು. ಅದರಲ್ಲಿ ಅವರು ಬರೆದಂತೆ ಮುಸಲ್ಮಾನ ಮಹಿಳೆ ಅಥವಾ ಪುರುಷ ಪ್ಯೂಬರ್ಟಿ (ಪ್ರಜನನಕ್ಕಾಗಿ ಸಕ್ಷಮ) ಆಗಿದ್ದರೆ ಆ ವ್ಯಕ್ತಿ ತನ್ನ ಇಚ್ಛೆಗನುಸಾರ ವಿವಾಹವನ್ನು ಮಾಡಿಕೊಳ್ಳಬಹುದು. ಅನಂತರ ಹಿದಾಯತುಲ್ಲಾ ಇವರ ಮುಸಲ್ಮಾನ ಕಾನೂನಿನ ಪುಸ್ತಕದ ಕಲಮ್ ೨೦೧ ಮತ್ತು ಫೈಜ ಬದ್ರುದ್ದೀನ ಇವರ ಪುಸ್ತಕದಲ್ಲಿನ ಕಲಮ್‌ನ ಆಧಾರ ಪಡೆದು ಯುಕ್ತಿವಾದವನ್ನು ಮಾಡಲಾಗಿದ್ದು ಮುಸಲ್ಮಾನ ಹುಡುಗಿಯ ವಯಸ್ಸು ೯ ರಿಂದ ೧೫ ವರ್ಷ ಮತ್ತು ಹುಡುಗನ ವಯಸ್ಸು ೧೫ ಆಗಿದ್ದರೆ ಅವರು ತಮ್ಮ ಇಚ್ಛೆಗನುಸಾರ ವಿವಾಹವನ್ನು ಮಾಡಿಕೊಳ್ಳಬಹುದು ಎಂದಿತ್ತು. ಈ ವಿವಾಹವು ‘ಮುಸ್ಲಿಮ್ ಪರ್ಸನಲ್ ಲಾ’ಕ್ಕನುಸಾರ ಅಧಿಕೃತವಾಗುತ್ತದೆ.

೩. ಉಚ್ಚ ನ್ಯಾಯಾಲಯವು ‘ಮುಸ್ಲಿಮ್ ಪರ್ಸನಲ್ ಲಾ’ದ ಆಧಾರದಲ್ಲಿ ನಿರ್ಣಯ ನೀಡಿ ಹುಡುಗಿಯನ್ನು ಅರ್ಜಿದಾರನಿಗೆ ಒಪ್ಪಿಸಬೇಕು ಎಂದು ಆದೇಶಿಸಿತು

‘ಭಾರತದಲ್ಲಿ ಬಾಲವಿವಾಹಗಳನ್ನು ತಡೆಯಲು ‘ಬಾಲವಿವಾಹ ಪ್ರತಿಬಂಧ ಕಾನೂನು, ೨೦೦೬’ ರನ್ನು ಮಾಡಲಾಗಿದೆ. ಅದರಂತೆ ವಿವಾಹಕ್ಕಾಗಿ ಹುಡುಗನ ವಯಸ್ಸು ೨೧ ವರ್ಷ ಹಾಗೂ ಹುಡುಗಿಯ ವಯಸ್ಸು ೧೮ ವರ್ಷ ಎಂದು ನಿರ್ಧರಿಸಲಾಗಿದೆ. ಆದ್ದರಿಂದ ಈ ಕಾನೂನಿನ ಕಲಮ್ ೧೨ ಕ್ಕನುಸಾರ ಈ ವಿವಾಹ ಕಾನೂನುಬಾಹಿರವಾಗುತ್ತದೆ; ಆದರೆ ಇದೇ ವಿವಾಹ ‘ಮುಸ್ಲಿಮ್ ಪರ್ಸನಲ್ ಲಾ’ಗನುಸಾರ ಅಧಿಕೃತವಾಗುತ್ತದೆ. ಆದ್ದರಿಂದ ಮುಸ್ಲಿಮ್ ಕಾನೂನಿನ ಆಧಾರ ಪಡೆದು ಉಚ್ಚ ನ್ಯಾಯಾಲಯವು ಹುಡುಗಿಯನ್ನು ಸುಧಾರಣಾಗೃಹದಿಂದ ಹೊರ ತಂದು ಅರ್ಜಿದಾರ ಜಾವೇದನ ಜೊತೆಗೆ ಕಳುಹಿಸಬೇಕೆಂದು ಆದೇಶ ನೀಡಿತು.

ಈ ನಿರ್ಣಯವನ್ನು ನೀಡುವಾಗ ಉಚ್ಚ ನ್ಯಾಯಾಲಯವು ಮುಸಲ್ಮಾನರ ಬಗೆಗಿನ ಅನೇಕ ಹಳೆಯ ತೀರ್ಪುಪತ್ರಗಳ ಉದಾಹರಣೆ ನೀಡಿತು. ಮುಸಲ್ಮಾನರ ಸಂದರ್ಭದಲ್ಲಿ ಕಡಿಮೆ (ಅಪ್ರಾಪ್ತ) ವಯಸ್ಸಿನ ಹುಡುಗಿಯು ತಾಯಿ-ತಂದೆಯರ ಇಚ್ಛೆಯ ವಿರುದ್ಧ ವಿವಾಹ ಮಾಡಿಕೊಂಡಿದ್ದರೂ ಅದಕ್ಕೆ ಮುಸ್ಲಿಮ್ ಪರ್ಸನಲ್ ಲಾ’ಗನುಸಾರ ಅನುಮತಿ ಸಿಗುತ್ತದೆ. ಈ ಕಾನೂನಿನಡಿ ಅವರ ಅರ್ಜಿಯನ್ನು ಸಮ್ಮತಿಸಲಾಯಿತು. ಇಲ್ಲಿ ಒಂದು ವಿಷಯ ಗಮನಿಸಬೇಕು, ಭಾರತೀಯ ಸಂವಿಧಾನಕ್ಕನುಸಾರ ಇರುವ ಕಾನೂನು ಎಲ್ಲ ನಾಗರಿಕರಿಗೆ ಬಂಧನಕಾರಿಯಾಗಿದೆ. ಇನ್ನೊಂದೆಡೆ ಮುಸಲ್ಮಾನರಿಗೆ ‘ಮುಸ್ಲಿಮ್ ಪರ್ಸನಲ್ ಲಾ’ಮೂಲಕ ಭಾರತೀಯ ಕಾನೂನಿನಲ್ಲಿ ರಿಯಾಯತಿ ನೀಡಲಾಗುತ್ತದೆ.

೪. ಬಾಲವಿವಾಹವನ್ನು ತಡೆಯಲು ಕೇಂದ್ರ ಸರಕಾರ ‘ಬಾಲವಿವಾಹ ಪ್ರತಿಬಂಧ ಕಾನೂನು ೨೦೦೬’ ನ್ನು ಮಾಡಿದೆ

ಸ್ವಾತಂತ್ರ್ಯಪೂರ್ವದಲ್ಲಿ ಅಂದರೆ ೧೯೨೯ ರಲ್ಲಿ ‘ಬಾಲವಿವಾಹ ಪ್ರತಿಬಂಧ ಕಾನೂನು’ನನ್ನು ರೂಪಿಸಲಾಗಿತ್ತು. ೨೦೦೭ ರಲ್ಲಿ ಆ ಕಾನೂನನ್ನು ರದ್ದುಪಡಿಸಿ ಹೆಚ್ಚು ಕಠಿಣ ‘ಬಾಲವಿವಾಹ ಪ್ರತಿಬಂಧ ಕಾನೂನು ೨೦೦೬’ನ್ನು ಮಾಡಲಾಯಿತು.

೧೯೯೫-೯೬ ರಲ್ಲಿ ಭಾರತದಲ್ಲಿ ಬಾಲ್ಯವಿವಾಹದ ರೂಢಿ ದೊಡ್ಡ ಪ್ರಮಾಣದಲ್ಲಿ ಆರಂಭವಾಯಿತು. ಆದ್ದರಿಂದ ಅದನ್ನು ತಡೆಯಬೇಕೆಂದು ಮಹಿಳಾ ಆಯೋಗಗಳು ಸೂಚನೆಯನ್ನು ನೀಡಿದ್ದವು. ಸಾಮಾಜಿಕ ಸಂಘಟನೆಗಳೂ ಇದರ ವಿರುದ್ಧ ಧ್ವನಿಯೆತ್ತಿದ್ದವು. ಈ ಕಾನೂನು ಪ್ರಕಾರ ಹುಡುಗಿಯರ ವಯಸ್ಸು ೧೮ ವರ್ಷ, ಹುಡುಗನ ವಯಸ್ಸು ೨೧ ವರ್ಷ ಎಂದು ನಿರ್ಧರಿಸಲಾಗಿದೆ. ೧೮ ವರ್ಷಕ್ಕಿಂತ ಹೆಚ್ಚು ವಯಸ್ಸಿನ ವ್ಯಕ್ತಿ ಬಾಲವಧುವಿನೊಂದಿಗೆ ವಿವಾಹವನ್ನು ಮಾಡಿಕೊಂಡರೆ ಆರೋಪಿಗೆ ೨ ವರ್ಷಗಳ ಕಠಿಣ ಶಿಕ್ಷೆ ಮತ್ತು ೧ ಲಕ್ಷ ರೂಪಾಯಿ ದಂಡ ವಿಧಿಸಬಹುದು ಹಾಗೂ ಬಾಲವಿವಾಹಕ್ಕೆ ಹೊಣೆಯಾಗಿರುವ ಜನರಿಗೂ ೨ ವರ್ಷ ಸಶ್ರಮ ಶಿಕ್ಷೆ ಹಾಗೂ ೧ ಲಕ್ಷ ರೂಪಾಯಿಯ ದಂಡವನ್ನು ವಿಧಿಸಬಹುದು. ಬಾಲ್ಯವಿವಾಹಗಳು ಆಗಬಾರದೆಂದು ಇಂತಹ ನಿರ್ಬಂಧದ ಆದೇಶವನ್ನು ನೀಡುವ ನಿಯಮವನ್ನು ೧೩ ರಲ್ಲಿ ನಮೂದಿಸಲಾಗಿದೆ. ಇವೆಲ್ಲ ವಿಷಯಗಳನ್ನು ಹಿಂದೂ ವಿವಾಹ ಕಾನೂನು ೧೯೯೫ ರಲ್ಲಿ ಉಲ್ಲೇಖಿಸಲಾಗಿದೆ ಹಾಗೂ ಅದರಲ್ಲಿನ ನಿಯಮ ೧೮ ರಲ್ಲಿ ಈ ವ್ಯವಸ್ಥೆ ಇದೆ. ಇಲ್ಲಿ ಉದ್ದೇಶಪೂರ್ವಕವಾಗಿ ಹಿಂದೂ ವಿವಾಹ ಕಾನೂನಿನ ಉಲ್ಲೇಖಿಸಲಾಗಿದೆ ಮತ್ತು ಸರಕಾರ ಅಥವಾ ಕಾನೂನು ಮಂಡಳಿಗಳು ಮತಾಂಧರಿಗೆ ಆದಷ್ಟು ಹೆಚ್ಚು ಸೌಲಭ್ಯಗಳನ್ನು ನೀಡಿವೆ. ಈ ಸ್ಥಿತಿ ಬದಲಾಯಿಸುವುದು ಆವಶ್ಯಕವಾಗಿದೆ.

೫. ಸಮಾನ ನಾಗರಿಕ ಕಾನೂನನ್ನು ಮಾಡಲು ಹಿಂದೂಗಳು ಸಂಘಟಿತರಾಗಿ ಪ್ರಯತ್ನ ಮಾಡಬೇಕು !

ಅನೇಕ ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ವಿವಾಹ, ವಿವಾಹ ವಿಚ್ಛೇದನೆ, ಆಸ್ತಿ ವಿವಾದ, ಜನ್ಮ-ಮೃತ್ಯುವಿನ ವಿಷಯದಲ್ಲಿನ ವಾದವಿವಾದಗಳು ಬರುತ್ತವೆ. ಆಗ ಪ್ರತಿಬಾರಿಯೂ ಮುಸ್ಲಿಮರು ‘ಮುಸ್ಲಿಮ್ ಪರ್ಸನಲ್ ಲಾ’ವನ್ನು ಶಸ್ತ್ರವೆಂದು ಉಪಯೋಗಿಸುತ್ತಾರೆ. ಕೆಲವೊಮ್ಮೆ ಅದಕ್ಕನುಸಾರ ನ್ಯಾಯಾಲಯಗಳು ನಿರ್ಣಯವನ್ನೂ ಕೊಡುತ್ತವೆ. ಇತರ ಸಮಯದಲ್ಲಿ ಹುಡುಗಿ ಅಪ್ರಾಪ್ತಳಾಗಿದ್ದರಿಂದ ಅವಳನ್ನು ಅಪಹರಿಸಿ ವಿವಾಹವಾಗಿದ್ದರಿಂದ ಅದು ಕಾನೂನುಬಾಹಿರ ಆಗಬಹುದಿತ್ತು. ಅಪಹರಿಸುವವನ ವಿರುದ್ಧ ‘ಪೊಕ್ಸೋ’ ಮತ್ತು ಇತರ ಕಾನೂನುಗಳು ಹಾಗೂ ಭಾರತೀಯ ದಂಡವಿಧಾನದಲ್ಲಿನ ಕಲಮ್‍ಗನುಸಾರ ಕ್ರಿಮಿನಲ್ ಅಪರಾಧವನ್ನು ದಾಖಲಿಸಬಹುದಾಗಿತ್ತು; ಆದರೆ ಇಲ್ಲಿ ಮತಾಂಧರಿಗಾಗಿ ಪ್ರತ್ಯೇಕ ನ್ಯಾಯವನ್ನು ನೀಡಲಾಯಿತು.

‘ಮುಸ್ಲಿಮ್ ಪರ್ಸನಲ್ ಲಾ’ದ ಆಧಾರದಲ್ಲಿ ಯುಕ್ತಿವಾದ ಮಾಡಿದಾಗ ಅವರು ತಮಗೆ ಬೇಕಾದ ಆದೇಶವನ್ನು ಪಡೆಯುತ್ತಾರೆ. ಆದ್ದರಿಂದ ಪ್ರತಿ ಬಾರಿ ಭಾರತ ಕಾನೂನುಗಳನ್ನು ಪಾಲಿಸಲು ಅವರಿಗೆ ಅನುಕೂಲ ಅನಿಸುವುದಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ೭೫ವರ್ಷಗಳಾದವು. ಕಾನೂನುಗಳನ್ನು ಕೇವಲ ಹಿಂದೂಗಳು ಮತ್ತು ಇತರ ಪಂಥದವರು ಪಾಲಿಸಬೇಕು ಮತ್ತು ಮತಾಂಧರಿಗೆ ಸೌಲಭ್ಯಗಳು ಸಿಗಬೇಕು. ಇದಕ್ಕೆ ಸಂವಿಧಾನದ ಆಧಾರ ಇದೆಯೇ ? ಮಹಿಳೆ ಮತ್ತು ಮಕ್ಕಳ ಅಧಿಕಾರದ ರಕ್ಷಣೆಗಾಗಿ ಹೋರಾಡುವವರು ಮತಾಂಧರ ವಿಷಯದಲ್ಲಿ ಶಾಂತವಾಗಿ ನೋಡುತ್ತಿರುತ್ತಾರೆ. ಮಾಧ್ಯಮಗಳೂ ಅವರನ್ನು ಬೆಂಬಲಿಸುತ್ತವೆ. ಇದನ್ನು ತಕ್ಷಣ ತಡೆಯಬೇಕು. ಅದಕ್ಕಾಗಿ ಭಾರತದಲ್ಲಿ ಸಮಾನ ನಾಗರಿಕ ಕಾನೂನು ಬರುವ ಅವಶ್ಯಕತೆಯಿದೆ. ಈ ದೃಷ್ಟಿಯಿಂದ ಕೇಂದ್ರ ಸರಕಾರ ತಕ್ಷಣ ಹೆಜ್ಜೆಗಳನ್ನಿಡಬೇಕು. ಎಲ್ಲ ಹಿಂದೂಗಳು ಸಂಘಟಿತರಾಗಿ ಸಮಾನ ನಾಗರಿಕ ಕಾನೂನನ್ನು ತಕ್ಷಣ ಜ್ಯಾರಿಯ ಬೇಡಿಕೆಯನ್ನು ಇಡಬೇಕು. ಸಂಕ್ಷಿಪ್ತದಲ್ಲಿ, ಪ್ರತಿಯೊಂದು ನ್ಯಾಯಾಲಯ ಬೇರೆ ಬೇರೆ ನಿರ್ಣಯಗಳನ್ನು ನೀಡುತ್ತವೆ. ಪೊಲೀಸ್ ಮತ್ತು ಆಡಳಿತದವರಿಗೆ ಅವರ ಮನಸ್ಸಿನಂತೆ ಯಾವ ನಿರ್ಣಯವನ್ನು ಪಾಲಿಸಬೇಕು, ಎಂಬುದರ ಸ್ವಾತಂತ್ರ್ಯ ಸಿಗುತ್ತದೆ. ಆದ್ದರಿಂದ ಸಮಾನ ನಿರ್ಣಯ ಸಿಗಲು ನ್ಯಾಯಾಂಗದಲ್ಲಿ ಕೆಲವು ಬದಲಾವಣೆ ಅವಶ್ಯಕತೆಯಿದೆ.’

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ನ್ಯಾಯವಾದಿಗಳು, ಮುಂಬಯಿ ಉಚ್ಚ ನ್ಯಾಯಾಲಯ. (೧೬.೧೧.೨೦೨೨)

ಅಪ್ರಾಪ್ತ ಹುಡುಗಿಗೆ ನ್ಯಾಯ ನೀಡುವ ಕೇರಳ ಉಚ್ಚ ನ್ಯಾಯಾಲಯದ ನಿರ್ಣಯ !

೧. ಮತಾಂಧನು ಅಪ್ರಾಪ್ತ (ಮೈನರ್) ಹುಡುಗಿಯನ್ನು ಅಪಹರಿಸಿ ಬಂಗಾಲದಿಂದ ಕೇರಳಕ್ಕೆ ತಂದು ಅವಳ ಮೇಲೆ ಅತ್ಯಾಚಾರ ಮಾಡುವುದು

ಇತ್ತೀಚೆಗಷ್ಟೆ ಕೇರಳ ಉಚ್ಚ ನ್ಯಾಯಾಲಯದ ಒಂದು ನಿರ್ಣಯ ಬಂದಿದೆ. ಮತಾಂಧನು ೧೪-೧೫ ವರ್ಷದ ಅಪ್ರಾಪ್ತ ಹುಡುಗಿಯನ್ನು ಅಪಹರಿಸಿ ಬಂಗಾಲದಿಂದ ಕೇರಳಕ್ಕೆ ತಂದನು. ಅನಂತರ ೩೧ ವರ್ಷದ ಖಾಲೆದೂರ ರಹೆಮಾನನು ಅವಳ ಮೇಲೆ ಅನೇಕ ದಿನ ಶಾರೀರಿಕ ಅತ್ಯಾಚಾರ ಮತ್ತು ಬಲಾತ್ಕಾರವನ್ನು ಮಾಡಿದನು. ಅವಳು ಗರ್ಭವತಿಯಾದ ನಂತರ ಮುಂದಿನ ಉಪಚಾರಕ್ಕಾಗಿ ಅವಳನ್ನು ಆಸ್ಪತ್ರೆಗೆ ಒಯ್ಯಲಾಯಿತು. ಆಗ ಈ ಹುಡುಗಿಯ ವಯಸ್ಸು ತುಂಬಾ ಕಡಿಮೆಯಿರುವುದು ಆಧುನಿಕ ವೈದ್ಯರ ಗಮನಕ್ಕೆ ಬಂದಿತು. ಅವರು ತಕ್ಷಣ ಪೊಲೀಸರನ್ನು ಕರೆದರು. ೩೧.೮.೨೦೨೨ ರಂದು ಪೊಲೀಸರ ವಿಚಾರಣೆಯಲ್ಲಿ ಮತಾಂಧನು, ‘ಮುಸ್ಲಿಮ್ ಪರ್ಸನಲ್ ಲಾ’ಕ್ಕನುಸಾರ ೧೪.೩.೨೦೨೧ ರಂದು ಅವರ ವಿವಾಹವಾಗಿದ್ದು ಅವರು ಪತಿ-ಪತ್ನಿಯರಾಗಿದ್ದಾರೆ, ಎಂದರು. ಬಂಗಾಲದಿಂದ ಅಪಹರಿಸಿ ತರುವಾಗ ಹುಡುಗಿಯ ವಯಸ್ಸು ೧೪ ವರ್ಷ ೪ ತಿಂಗಳಾಗಿತ್ತು ಹಾಗೂ ಈಗ ಅವಳು ಕೇವಲ ೧೫ ವರ್ಷದವಳಾಗಿದ್ದಳು. ಈ ಪ್ರಕರಣದಲ್ಲಿ ಪೊಲೀಸರು ಥಿರುವಿಲಾ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ (ಫೌಜದಾರಿ) ಅಪರಾಧವನ್ನು ದಾಖಲಿಸಿ ‘ಪೊಕ್ಸೋ’ ಹಾಗೂ ಭಾರತೀಯ ದಂಡ ವಿಧಾನಗಳಲ್ಲಿನ ಕಲಂಮ್‌ಗಳನ್ನು ಹೇರಿ ಅವನನ್ನು ಸೆರೆಮನೆಗೆ ತಳ್ಳಿದರು.

೨. ಮತಾಂಧನು ಜಾಮೀನು ಪಡೆಯಲು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದು

ಮತಾಂಧನು ಜಾಮೀನು ಪಡೆಯಲು ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದನು, ಆದರೆ ಅದನ್ನು ಜಿಲ್ಲಾಸತ್ರ ನ್ಯಾಯಾಲಯವು ತಿರಸ್ಕರಿಸಿತು. ಅನಂತರ ಅವನು ಜಾಮೀನಿಗಾಗಿ ಕೇರಳ ಉಚ್ಚ ನ್ಯಾಯಾಲಯಕ್ಕೆ ಹೋದನು. ಅಲ್ಲಿ ‘ಮುಸ್ಲಿಮ್ ಪರ್ಸನಲ್ ಲಾ’ದ ಡಂಗುರ ಬಾರಿಸತೊಡಗಿದನು. ಅದನ್ನು ಸರಕಾರಿ ನ್ಯಾಯವಾದಿಗಳು ವಿರೋಧಿಸಿದರು. ಸರಕಾರಿ ನ್ಯಾಯವಾದಿಗಳು ವಿರೋಧಿಸುತ್ತಾ, “ಆರೋಪಿ ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಅವಳ ತಾಯಿ-ತಂದೆಯ ಅನುಮತಿಯಿಲ್ಲದೆ ಬಂಗಾಲದಿಂದ ಅಪಹರಿಸಿದ್ದಾನೆ. ಇಂತಹ ‘ಪೊಕ್ಸೋ’ ಕಾನೂನಿಗೆ ಒಪ್ಪಿಗೆಯಿಲ್ಲದ ವಿವಾಹವನ್ನು ಹೇಗೆ ಸ್ವೀಕರಿಸಬಹುದು ? ‘ಪೊಕ್ಸೋ’ ಇದು ವಿಶೇಷ ಕಾನೂನಾಗಿದೆ ಮತ್ತು ‘ಮುಸ್ಲಿಮ್ ಪರ್ಸನಲ್ ಲಾ’ ಇದು ಸಾಧಾರಣ ಕಾನೂನವಾಗಿದೆ. ಆದ್ದರಿಂದ ‘ಪೊಕ್ಸೋ’ ಕಾನೂನನ್ನು ಕಾಲಿನಡಿ ತುಳಿಯಲು ಆಗುವುದಿಲ್ಲ’, ಎಂದರು.

೩. ಕೇರಳ ಉಚ್ಚ ನ್ಯಾಯಾಲಯವು ಆರೋಪಿಗೆ ಜಾಮೀನು ನಿರಾಕರಿಸುವುದು

ಎರಡೂ ಬದಿಯ ಎಲ್ಲ ಯುಕ್ತಿವಾದಗಳನ್ನು ಕೇಳಿದ ನಂತರ ಹಾಗೂ ವಿವಿಧ ಉಚ್ಚ ನ್ಯಾಯಾಲಯಗಳ ಮತ್ತು ಸರ್ವೋಚ್ಚ ನ್ಯಾಯಾಲಯದ ನಿರ್ಣಯಗಳ ಸಂದರ್ಭವನ್ನು ಗಮನಿಸಿದ ನಂತರ ಕೇರಳ ಉಚ್ಚ ನ್ಯಾಯಾಲಯವು ವಾಸನಾಂಧ ಪತಿಯ ಜಾಮೀನು ಅರ್ಜಿಯನ್ನು ತಳ್ಳಿಹಾಕಿತು. ಈ ಪ್ರಕರಣದ ಬಗ್ಗೆ ಉಚ್ಚ ನ್ಯಾಯಾಲಯ ಹೇಳುತ್ತಾ, ‘ವಿಶೇಷ ಕಾನೂನು (ಪೊಕ್ಸೊ), ಬಾಲವಿವಾಹ ಪ್ರತಿಬಂಧಕ ಕಾನೂನು ಮತ್ತು ಸಾಧಾರಣ ಕಾನೂನು (ಮುಸ್ಲಿಮ್ ವೈಯಕ್ತಿಕ ಕಾನೂನು) ಇದರಲ್ಲಿ ಅತೀ ಹೆಚ್ಚು ಮಹತ್ವವನ್ನು ‘ಪೊಕ್ಸೋ’ ಕಾನೂನಿಗೆ ನೀಡಬೇಕು. ವಿಶೇಷ ಕಾನೂನಿನ ಬಿಕ್ಕಟ್ಟಿನಿಂದ ಬಿಡಿಸಿಕೊಳ್ಳಲು ‘ಮುಸ್ಲಿಮ್ ಪರ್ಸನಲ್ ಲಾ’ದ ಆಧಾರವನ್ನು ಪಡೆಯುವಾಗ ಮುಷ್ಟಿಯಷ್ಟು ಜನರ ವಿಚಾರ ಮಾಡದೆ ವಿಶೇಷ ಕಾನೂನಿನ ವಿಚಾರವಾಗಬೇಕು’, ಎಂದಿತು.

ಇಲ್ಲಿ ನ್ಯಾಯಾಲಯ ಏನು ಹೇಳುವಂತೆ, ‘ಪಾಕ್ಸೋ’ ಕಾನೂನಿನ ಕಲಮ್ ೪೨ ಅ ಇದು, ‘ಪೊಕ್ಸೋ’ ಕಾನೂನನ್ನು ಇತರ ಕಾನೂನುಗಳನ್ನು ಬಿಟ್ಟು ಹೆಚ್ಚಿನ ಕಾನೂನನ್ನು ಮಾಡಲಾಗಿದೆ ಎಂದರೆ ಅದರಲ್ಲಿನ ಕಲಂಮ್‌ಗಳು ಮತ್ತು ‘ಪೊಕ್ಸೋ’ದ ಹೊಸ ಕಲಮ್‌ಗಳನ್ನು ಹೆಚ್ಚಿಸಿ ಅಪರಾಧವನ್ನು ದಾಖಲಿಸಬೇಕು’, ಎಂದಿದೆ. ಇಲ್ಲಿ ಕೇರಳ ಉಚ್ಚ ನ್ಯಾಯಾಲಯವು ಪಂಜಾಬ್ ಮತ್ತು ಹರ್ಯಾಣಾ ಉಚ್ಚ ನ್ಯಾಯಾಲಯ ಹಾಗೂ ಇತರ ಉಚ್ಚ ನ್ಯಾಯಾಲಯಗಳ ಧರ್ಮದ ಬದಿಯಲ್ಲಿನ ನಿರ್ಣಯಗಳನ್ನು ಸ್ವೀಕರಿಸದಿರಲು ಯೋಗ್ಯ ಕಾರಣಗಳನ್ನು ಕೊಟ್ಟಿತು. ಅದರಲ್ಲಿ ಸರ್ವೋಚ್ಚ ನ್ಯಾಯಾಲಯದ ‘ಜೆ.ಕೆ. ಕಾಟನ್ ಸ್ಪಿನ್ನಿಂಗ್ ಎಂಡ್ ವೀವಿಂಗ್ ಮಿಲ್ ಕಂಪನಿ ಲಿಮಿಟೆಡ್ ವಿರುದ್ಧ ಉತ್ತರಪ್ರದೇಶ ಎ.ಐ.ಆರ್. ೧೯೬೧ ಸ. ನ್ಯಾ. ೧೧೭೦’ ಮತ್ತು ‘ಪಿ. ಹೇಮಲತಾ ವಿರುದ್ಧ ಕಟ್ಟಮಕಡೀ ಪುಥಿಯಾ ಮಲಾಯಿಕ್ಕಲ ಸಾಹೆಡಾ’ ಮತ್ತು ಇತರ ೨೦೦೨ (೫) ಎಸ್.ಎಸ್.ಸಿ. ೫೪೮ ನಿರ್ಣಯದ ಸಂದರ್ಭವನ್ನು ನೀಡಿ ಕೊನೆಗೆ ಜಾಮೀನನ್ನು ತಳ್ಳಿ ಹಾಕಿತು.

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ