ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಪುರಾಣಗಳ ಪ್ರಕಾರ, ಈ ಮನ್ವಂತರದ ಸಜೀವ ಸೃಷ್ಟಿಯು ಮಹರ್ಷಿ ಕಶ್ಯಪ ಮತ್ತು ಅವರ ಪತ್ನಿಯರ ಸಂತತಿಯಿಂದ ವಿಸ್ತರಿಸಿತು; ಅದಿತಿಯಿಂದ ದೇವತೆಗಳು, ದಿತಿಯಿಂದ ದೈತ್ಯರು ಹಾಗೂ ದನುವಿನಿಂದ ದಾನವರು ಹುಟ್ಟಿದರು.
ಪುರಾಣಗಳ ಪ್ರಕಾರ, ಈ ಮನ್ವಂತರದ ಸಜೀವ ಸೃಷ್ಟಿಯು ಮಹರ್ಷಿ ಕಶ್ಯಪ ಮತ್ತು ಅವರ ಪತ್ನಿಯರ ಸಂತತಿಯಿಂದ ವಿಸ್ತರಿಸಿತು; ಅದಿತಿಯಿಂದ ದೇವತೆಗಳು, ದಿತಿಯಿಂದ ದೈತ್ಯರು ಹಾಗೂ ದನುವಿನಿಂದ ದಾನವರು ಹುಟ್ಟಿದರು.
ಸದ್ಗುರುಗಳ ಆಜ್ಞೆಯನ್ನು ಪಾಲಿಸುತ್ತಾ ಸಾಧಕನಿಗೆ ನಾಮದ ಆಸಕ್ತಿ ಮೂಡುತ್ತದೆ ಮತ್ತು ನಾಮವನ್ನು ಹೊಟ್ಟೆ ತುಂಬುವಷ್ಟೆ ತೆಗೆದುಕೊಂಡರೆ ಅವನ ಆತ್ಮವು ತೃಪ್ತವಾಗುತ್ತದೆ.
ಭಗವಂತನು ಧ್ರುವ ಬಾಲಕನಂತೆ ಸಪ್ತರ್ಷಿಗಳಿಗೂ ನಕ್ಷತ್ರಪುಂಜದಲ್ಲಿ ಸ್ಥಾನ ನೀಡಿದ್ದಾನೆ. ಆದ್ದರಿಂದ ರಾತ್ರಿಯ ಸಮಯದಲ್ಲಿ ನಮಗೆ ಸಪ್ತರ್ಷಿಗಳ ದರ್ಶನ ಸಿಗುತ್ತದೆ. ರಾತ್ರಿ ನಮಗೆ ೭ ನಕ್ಷತ್ರಗಳ ಒಂದು ಸಮೂಹವೂ ಕಾಣಿಸುತ್ತದೆ. ಇದರ ಆಕಾರವು ಆಕಾಶದಲ್ಲಿ ಗಾಳಿಪಟ ಹಾರುತ್ತಿರುವಂತೆ ಕಾಣಿಸುತ್ತದೆ. ಈ ನಕ್ಷತ್ರಪುಂಜಕ್ಕೆ ‘ಸಪ್ತರ್ಷಿ ತಾರಾಸಮೂಹ ಎಂದೂ ಕರೆಯಲಾಗುತ್ತದೆ.
ವಿಶ್ವಾಮಿತ್ರನು ಸಂಪೂರ್ಣವಾಗಿ ಬದಲಾಗಿ ವಸಿಷ್ಠರ ಆಶ್ರಮಕ್ಕೆ ಬಂದು ಅವರ ಪಾದಗಳಿಗೆ ಶರಣಾದಾಗ, ಮಹರ್ಷಿ ವಸಿಷ್ಠರು ಪ್ರೀತಿಯಿಂದ ಅವನನ್ನು ಅಪ್ಪಿಕೊಂಡು ಬ್ರಹ್ಮರ್ಷಿ ಎಂದು ಮನ್ನಣೆ ನೀಡಿದರು.
ಮಹರ್ಷಿ ಭರದ್ವಾಜರು ವೈದಿಕ ಯುಗದ ಮಹಾನ್ ಋಷಿಯಾಗಿದ್ದು, ವ್ಯಾಕರಣ, ಆಯುರ್ವೇದ, ಧನುರ್ವೇದ, ರಾಜನೀತಿ ಸೇರಿದಂತೆ ಅನೇಕ ಶಾಸ್ತ್ರಗಳಲ್ಲಿ ಅಪಾರ ಕೊಡುಗೆ ನೀಡಿದ ಬಹುಮುಖ ಜ್ಞಾನಿಯಾಗಿದ್ದರು.
ಮಹರ್ಷಿ ಗೌತಮರು ನ್ಯಾಯಶಾಸ್ತ್ರದ ಪ್ರವರ್ತಕರಾಗಿದ್ದು, ತಪಸ್ಸು, ತ್ಯಾಗ ಮತ್ತು ಕರುಣೆಯಿಂದ ಸಮಾಜಕ್ಕೆ ಆದರ್ಶ ಜೀವನದ ಮಾರ್ಗವನ್ನು ತೋರಿದರು. ಅವರ ಆಧ್ಯಾತ್ಮಿಕ ತೇಜಸ್ಸಿನಿಂದ ಬರಗಾಲದ ಸಮಯದಲ್ಲೂ ಆಶ್ರಮವು ಸಮೃದ್ಧಿಯ ಕೇಂದ್ರವಾಗಿತ್ತು.
ಸ್ಥಾಪಿತವಾದ ನಂತರ ಸದ್ಗುರುಗಳೇ ಕನ್ನಡಿಯಾಗುತ್ತಾರೆ ಮತ್ತು ಅದರಲ್ಲಿ ಶಿಷ್ಯನು ತನ್ನನ್ನು ನೋಡಲಾರಂಭಿಸುತ್ತಾನೆ.
ಭಗವಾನ್ ಶ್ರೀವಿಷ್ಣುವಿನ ಪ್ರಥಮ ಅವತಾರವೇ ಮತ್ಸ್ಯ ಅವತಾರ ! ಸಾಕ್ಷಾತ್ ಭಗವಂತನ ವಿಶಾಲ ಮತ್ಸ್ಯಾವತಾರವು ಸಪ್ತರ್ಷಿಗಳನ್ನು ಮತ್ತು ಮನುವನ್ನು ಪ್ರಳಯಕಾಲದಲ್ಲಿ ಆ ವಿಶಾಲ ನೌಕೆಯಲ್ಲಿ ವಿಹಾರ ಮಾಡಿಸಿ ಅವರನ್ನು ರಕ್ಷಿಸಿತು. ಪ್ರಳಯ ಮುಗಿದ ನಂತರ ಅದೇ ಸೃಷ್ಟಿಯ ಬೀಜಗಳ ಆಧಾರದಲ್ಲಿ ಸಪ್ತರ್ಷಿಗಳು ಮತ್ತು ಮನು ಪುನಃ ಸೃಷ್ಟಿಯನ್ನು ವಿಸ್ತರಿಸಿದರು.
ಮಹರ್ಷಿ ಜಮದಗ್ನಿಯವರು ಋಚಿಕ ಋಷಿ ಮತ್ತು ಸತ್ಯವತಿಯ ಪುತ್ರರಾಗಿದ್ದು, ಜನ್ಮತಃ ತೇಜಸ್ವಿ, ಜ್ಞಾನಿ ಹಾಗೂ ಧನುರ್ವೇದದಲ್ಲಿ ಪರಿಣತರಾಗಿ ತಮ್ಮ ತಪಸ್ಸು ಮತ್ತು ಸಾಧನೆಯಿಂದ ಖ್ಯಾತಿ ಪಡೆದರು. ಅವರ ಪುತ್ರ ಪರಶುರಾಮರು ಅಧರ್ಮದ ವಿರುದ್ಧ ಹೋರಾಡಿದ ಮಹಾವೀರರಾಗಿ ಪ್ರಸಿದ್ಧರಾದರು.
ಭಗವಂತನ ಪ್ರೇರಣೆಯಿಂದಲೇ ಇವರು ವಿಶ್ವದ ವ್ಯವಹಾರಗಳನ್ನು ನಡೆಸುತ್ತಾರೆ. ನಾಲ್ಕೂ ಯುಗಗಳ ಅಂತ್ಯದಲ್ಲಿ ಕಾಲವು ವೇದಗಳನ್ನು ನುಂಗಿದಾಗ, ಋಷಿಗಳೇ ತಪೋಬಲದಿಂದ ಮತ್ತೊಮ್ಮೆ ಅವುಗಳ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾರೆ ! ಅವರಿಂದಲೇ ಸನಾತನ ಧರ್ಮದ ರಕ್ಷಣೆಯಾಗುತ್ತದೆ. ಹಾಗಾಗಿ ವೇದಗಳಲ್ಲಿ ಈ ೭ ಋಷಿಗಳನ್ನು ವೈದಿಕ ಧರ್ಮದ ಸಂರಕ್ಷಕರು ಎನ್ನಲಾಗುತ್ತದೆ.