ಇಸ್ಲಾಂ ಮತ್ತು ಮಹಮದ್ ಪೈಗಂಬರರನ್ನು ಅವಮಾನಿಸುವವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಬಾಂಗ್ಲಾದೇಶ ಉಚ್ಚ ನ್ಯಾಯಾಲಯದಿಂದ ಸರಕಾರಕ್ಕೆ ಮನವಿ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಉಚ್ಚ ನ್ಯಾಯಾಲಯವು ಇಸ್ಲಾಂ ಅಥವಾ ಮಹಮದ್ ಪೈಗಂಬರರನ್ನು ಅವಮಾನಿಸಿದರೆ ಗಲ್ಲು ಶಿಕ್ಷೆ ನೀಡುವಂತೆ ಶಿಫಾರಸು ಮಾಡಿದೆ. ಇದೇ ವೇಳೆ ಯೂನಸ ಸರಕಾರದಲ್ಲಿ ಭಾಗಿಯಾಗಿರುವ ಮೌಲಾನರೊಬ್ಬರು ಸೌದಿ ಅರೇಬಿಯಾದ ಮಸೀದಿಗಳಂತೆ ದೇಶದಲ್ಲಿ ಮಸೀದಿಗಳನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿದ್ದಾರೆ. ಈ ಮೂಲಕ ಬಾಂಗ್ಲಾದೇಶವನ್ನು ಇಸ್ಲಾಮೀಕರಣಗೊಳಿಸುತ್ತಿರುವುದು ಕಂಡು ಬರುತ್ತಿದೆ.

1. ಬಾಂಗ್ಲಾದೇಶ ಉಚ್ಚ ನ್ಯಾಯಾಲಯವು, ಕುರಾನ ಮತ್ತು ಮಹಮ್ಮದ ಪೈಗಂಬರ ವಿರುದ್ಧ ಅನಗತ್ಯ, ನಾಚಿಕೆಯಿಲ್ಲದ, ಹಠಮಾರಿ, ಪ್ರಚೋದನಕಾರಿ ಭಾಷಣಗಳನ್ನು ಮಾಡಿದವರಿಗೆ ಗಲ್ಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಯಂತಹ ಶಿಕ್ಷೆಯ ನೀಡಬೇಕೆ ಅಥವಾ ನೀಡಬಾರದೇ ಎಂದು ಕೇಳಿದೆ. ಇದನ್ನು ಸಂಸತ್ತಿನಲ್ಲಿ ಚರ್ಚಿಸುವ ಆವಶ್ಯಕತೆಯಿದೆ. ಯಾವುದೇ ಧರ್ಮದ ಜನರನ್ನು ನೋಯಿಸುವುದು ಅಥವಾ ಅವರಲ್ಲಿ ಭಯ, ಹೆದರಿಕೆಯನ್ನು ಉಂಟು ಮಾಡುವ ಯಾವುದೇ ಪ್ರಚೋದನಕಾರಿ ಭಾಷಣ ಅಥವಾ ಅಂತಹ ಕ್ರಮಗಳನ್ನು ನಿಗ್ರಹಿಸಲು ಪ್ರಯತ್ನಿಸಬೇಕು.

2. ಮಹಮ್ಮದ ಯೂನಸ ಸರಕಾರದಲ್ಲಿ ಖಾಲಿದ ಹುಸೇನ ಅವರು ಸೌದಿ ಅರೇಬಿಯಾದ ಮದೀನಾ ಮಸೀದಿಯ ಮಾದರಿಯಲ್ಲಿ ಚಿತ್ತಗಾಂಗ್‌ನಲ್ಲಿ ಮಸೀದಿಯನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದಾರೆ. ಇದಕ್ಕಾಗಿ ಸರಕಾರ 10 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದ ಉಚ್ಚ ನ್ಯಾಯಾಲಯವೇ ಈ ರೀತಿ ಮನವಿ ಮಾಡುತ್ತಿದ್ದರೆ, ಭಾರತದಲ್ಲಿರುವ ಹಿಂದೂಗಳು ತಮ್ಮ ಧರ್ಮವನ್ನು ಅವಮಾನಿಸುವವರಿಗೆ ಅಂತಹ ಶಿಕ್ಷೆಯನ್ನು ನೀಡುವಂತೆ ಕೋರಿದರೆ, ಅದರಲ್ಲಿ ತಪ್ಪೇನು ?