ಭಾಜಪಗೆ ಮತ್ತೆ ಮುಖಭಂಗ !
ರಾಂಚಿ (ಜಾರ್ಖಂಡ್) – ಮಹಾರಾಷ್ಟ್ರ ಸಹಿತ ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಿತು. ಇಲ್ಲಿ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್ ಮೈತ್ರಿಕೂಟ ಬಹುಮತ ಪಡೆಯುವ ಲಕ್ಷಣಗಳಿದ್ದು, ಭಾಜಪವನ್ನು ಮತ್ತೊಮ್ಮೆ ಅಧಿಕಾರದಿಂದ ಕಿತ್ತೊಗೆಯಲಾಗಿದೆ. ಈ 81 ಸ್ಥಾನಗಳಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಅಘಾಡಿ 50 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಭಾಜಪ 30 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಮತ ಏಣಿಕೆಯ ಆರಂಭಿಕ ಹಂತದಲ್ಲಿ ಭಾಜಪಗೆ ಬಹುಮತ ಪಡೆಯುವ ಲಕ್ಷಣ ಕಂಡುಬಂದರೂ ನಂತರದ ಹಂತದಲ್ಲಿ ಭಾಜಪ ನೆಲಕಚ್ಚಿದ್ದರಿಂದ ಮೈತ್ರಿಕೂಟ ಬಹುಮತದತ್ತ ಸಾಗತೊಡಗಿತು.
2019 ರ ವಿಧಾನಸಭಾ ಚುನಾವಣೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ 30 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 16 ಸ್ಥಾನಗಳನ್ನು ಪಡೆದುಕೊಂಡಿದೆ. ಈ ಪಕ್ಷಗಳ ಒಕ್ಕೂಟ ಅಧಿಕಾರಕ್ಕೆ ಬಂದಿತ್ತು.
ಸಂಪಾದಕೀಯ ನಿಲುವುಜಾರ್ಖಂಡ್ನಲ್ಲಿ ಪುನಃ ಸಮ್ಮಿರ್ಶ ಸರಕಾರ ಮರಳುತ್ತದೆ ಎಂದರೆ ನುಸುಳುಕೋರ ಮುಸ್ಲಿಮರಿಗೆ ಮುಕ್ತ ಅವಕಾಶ ಸಿಗುತ್ತದೆ, ಇದು ರಾಷ್ಟ್ರ ಮತ್ತು ಧರ್ಮಕ್ಕೆ ಅಪಾಯಕಾರಿಯಾಗಿದ್ದೂ ಕೇಂದ್ರ ಸರಕಾರ ಇದರ ಮೇಲೆ ನಿಗಾ ಇಡಬೇಕಾಗಿದೆ ! |