(ಎಕ್ಸಿಟ್ ಪೋಲ್ ಎಂದರೆ ಮತದಾನೋತ್ತರ ಸಮೀಕ್ಷೆ)
ಮುಂಬಯಿ (ಮಹಾರಾಷ್ಟ್ರ) / ರಾಂಚಿ (ಜಾರ್ಖಂಡ) – ಅಕ್ಟೋಬರನಲ್ಲಿ, ಅಂದರೆ ಕೇವಲ 2 ತಿಂಗಳ ಹಿಂದೆ, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ‘ಎಕ್ಸಿಟ್ ಪೋಲ್‌ಗಳು’ ಭವಿಷ್ಯ ನುಡಿದ ರೀತಿಯಲ್ಲಿ ಭಾರಿ ತಪ್ಪಾಗಿತ್ತು. ಈ ಬಾರಿಯೂ ಅದೇ ಚಿತ್ರಣ ಕಂಡುಬಂದಿದೆ. ನವೆಂಬರ್ 20 ರ ಚುನಾವಣೆಯ ನಂತರ, ಎಕ್ಸಿಟ್ ಪೋಲ್’ ಸಮೀಕ್ಷೆಗಳು ಮಹಾರಾಷ್ಟ್ರದಲ್ಲಿ ಮೈತ್ರಿ ಕೂಟಕ್ಕೆ ಜಯಶಾಲಿ ಎಂದು ಘೊಷೊಸೊತ್ತು, ಆದರೆ ಹೆಚ್ಚಿನ ಪರೀಕ್ಷಣೆಯಲ್ಲಿ ಮಹಾ ಮೈತ್ರೀಕೂಟಕ್ಕೆ ಹೆಚ್ಚೆಂದರೆ 160-170 ಸ್ಥಾನಗಳು ಸಿಗಬಹುದು ಎಂದು ಅಂದಾಜಿಸಲಾಗಿತ್ತು. ಕೇವಲ ಪೋಲ್ ಡೈರಿ ನಡೆಸಿದ ಸಮೀಕ್ಷೆಯಲ್ಲಿ ಮಾತ್ರ ಮಹಾಮೈತ್ರಿಕೂಟಕ್ಕೆ 186 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿತ್ತು. ವಾಸ್ತವವಾಗಿ, ‘ಪೋಲ್ ಡೈರಿ’ ಯೊಂದಿಗೆ ಹೋಲಿಸಿದಾಗಲೂ, ಮಹಾಮೈತ್ರಿಕೂಟವು 45 ಹೆಚ್ಚು ಸ್ಥಾನಗಳನ್ನು (231 ಸ್ಥಾನಗಳು) ಪಡೆದಿದೆ. ಇದರಿಂದ ಚುನಾವಣೋತ್ತರ ಸಮೀಕ್ಷೆಗಳ ನಿರರ್ಥಕತೆ ಮತ್ತೊಮ್ಮೆ ಬಯಲಾಗಿದೆ. ಲೋಕಸಭೆ ಚುನಾವಣೆಯ ನಂತರದ ಸಮೀಕ್ಷೆಗಳಾಗಲಿ ಅಥವಾ ಯಾವುದೇ ವಿಧಾನ ಸಭೆಯ ಚುನಾವಣೆ ಬಗ್ಗೆ ಮೇಲಿಂದ ಮೇಲೆ, ಕಂಡು ಬರುವ ಈ ವ್ಯತ್ಯಾಸವು ಈಗ ಈ ಸಮೀಕ್ಷೆಗಳ ವಿಶ್ವಾಸಾರ್ಹತೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆಯುತ್ತಿರುವುದು ಕಂಡುಬರುತ್ತಿದೆ.
ಜಾರ್ಖಂಡ್ ಚುನಾವಣೆಯ ವಿಚಾರದಲ್ಲಿಯೂ ಇದೇ ಅನುಭವಕ್ಕೆ ಬಂದಿದೆ. ಇಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್ ಮೈತ್ರಿಕೂಟ 57 ಸ್ಥಾನಗಳನ್ನು ಪಡೆದುಕೊಂಡಿದೆ. ವಾಸ್ತವವಾಗಿ ‘ಆಕ್ಸಿಸ್ ಮೈ ಇಂಡಿಯಾ’ 49-59 ಸೀಟುಗಳನ್ನು ಪಡೆಯಲಿದೆ ಎಂದು ಅನುಮಾನಿಸಲಾಗಿತ್ತು. ಇತರ ಬಹುತೇಕ ‘ಎಕ್ಸಿಟ್ ಪೋಲ್’ಗಳು ಭಾಜಪ ಬಹುಮತ ಪಡೆಯಲಿದೆ ಎಂದು ಹೇಳಿದ್ದವು. ಕೆಲವರು ತ್ರಿಶಂಕು ಸ್ಥಿತಿ ನಿರ್ಮಾಣ ಆಗುತ್ತದೆಯೆಂದು ಹೇಳಿದ್ದರು. ವಾಸ್ತವವಾಗಿ, ಇಲ್ಲಿಯವರೆಗೆ ಪಡೆದ ಅಂಕಿಅಂಶಗಳ ಪ್ರಕಾರ, ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್ ಮೂರನೇ ಎರಡಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿರುವುದು ಕಂಡುಬಂದಿದೆ.