Supreme Court Judgement: ಪ್ರೇಮಸಂಬಂಧದಲ್ಲಿನ ಸಂಬಂಧವು ಮುರಿದು ಬಿದ್ದಾಗ ಪುರುಷನ ಮೇಲೆ ಬಲಾತ್ಕಾರದ ಆರೋಪ ಹೊರಿಸಲಾಗುವುದಿಲ್ಲ ! – ಸರ್ವೋಚ್ಚ ನ್ಯಾಯಾಲಯದ ತೀರ್ಪು

ನವದೆಹಲಿ – ಯಾವ ಸಂಬಂಧಗಳಲ್ಲಿ ಒಮ್ಮತದಿಂದ ಪ್ರೇಮಸಂಬಂಧಗಳನ್ನು ಸ್ಥಾಪಿಸಲಾಗಿದೆ, ಹಾಗೆಯೇ ಶಾರೀರಿಕ ಸಂಬಂಧಗಳನ್ನು ಸ್ಥಾಪಿಸಲಾಗಿರುತ್ತದೆ, ಇಂತಹ ಸಂಬಂಧಗಳು ಮುರಿದಾಗ ಪುರುಷನ ವಿರುದ್ಧ ಬಲಾತ್ಕಾರ ಅಥವಾ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಲು ಸಾಧ್ಯವಿಲ್ಲ. ಇಂತಹ ಪ್ರಕರಣಗಳಿಗೆ ಯಾವುದೇ ರೀತಿಯ ಅಪರಾಧದ ಬಣ್ಣವನ್ನು ನೀಡಲು ಸಾಧ್ಯವಿಲ್ಲ ಎಂಬ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ಒಂದು ಪ್ರಕರಣದಲ್ಲಿ ನೀಡಿದೆ.

1. ದೂರುದಾರ ಮಹಿಳೆಯು 2019 ರಲ್ಲಿ ತನ್ನ ಪ್ರಿಯಕರನು ಮದುವೆಯ ಆಶ್ವಾಸನೆಯನ್ನು ನೀಡಿ ತನ್ನ ಮೇಲೆ ಬಲಾತ್ಕಾರ ಮಾಡಿದ್ದಾನೆ, ಹಾಗೆಯೇ ತನಗೆ ಲೈಂಗಿಕ ದೌರ್ಜನ್ಯ ಮಾಡಿದ್ದಾನೆ ಎಂದು ಆರೋಪಿಸಿದ್ದಳು. ಅವನು ಬಲವಂತವಾಗಿ ಶಾರೀರಿಕ ಸಂಬಂಧವನ್ನು ಇಟ್ಟುಕೊಂಡನು. ‘ಶಾರೀರಿಕ ಸಂಬಂಧವನ್ನು ಇಟ್ಟು ಕೊಳ್ಳದಿದ್ದರೆ ನಿನ್ನ ಕುಟುಂಬದವರಿಗೆ ತೊಂದರೆ ಕೊಡುತ್ತೇನೆ’ ಎಂದು ಅವನು ಬೆದರಿಕೆ ಹಾಕಿದ್ದನು ಎಂದು ತಿಳಿಸಿದ್ದಳು. ಅನಂತರ ಅಪರಾಧವನ್ನು ದಾಖಲಿಸಲಾಗಿತ್ತು. ಆಆನಂತರ ಆರೋಪಿಯು ಅಪರಾಧವನ್ನು ರದ್ದುಗೊಳಿಸುವಂತೆ ಅರ್ಜಿ ದಾಖಲಿಸಿದ್ದನು. ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಈ ಪ್ರಕರಣ ದಾಖಲಾದಾಗ, ನ್ಯಾಯಾಲಯವು ಈ ಬೇಡಿಕೆಯನ್ನು ತಿರಸ್ಕರಿಸಿತು. ನಂತರ ಪ್ರಕರಣವು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಯಿತು.

2. ಸರ್ವೋಚ್ಚ ನ್ಯಾಯಾಲಯವು `ಮಹಿಳೆಯ ಆರೋಪಗಳು ಆಧಾರರಹಿತವಾಗಿವೆ’ ಎಂದು ಹೇಳಿ ಆಕೆಗೆ ‘ “ಒಂದು ವೇಳೆ ಅವನು ನಿನ್ನ ಮೇಲೆ ಬಲಾತ್ಕಾರ ಮಾಡುತ್ತಿದ್ದರೆ, ಲೈಂಗಿಕ ದೌರ್ಜನ್ಯ ಮಾಡುತ್ತಿದ್ದರೆ, ನೀನು ಅವನನ್ನು ಭೇಟಿಯಾಗಲು ಏಕೆ ಹೋಗುತ್ತಿದ್ದೆ ?’ ಎಂದು ಪ್ರಶ್ನಿಸಿತು. ಇಬ್ಬರೂ ಪ್ರಬುದ್ಧರಾಗಿರುವುದರಿಂದ ಅವರಲ್ಲಿ ಒಮ್ಮತದಿಂದ ಶಾರೀರಿಕ ಸಂಬಂಧ ನಡೆದಿದೆ. ವಿವಾಹದ ಆಶ್ವಾಸನೆಯೊಂದಿಗೆ ಇದೆಲ್ಲವೂ ಪ್ರಾರಂಭವಾಗಿದೆಯೆಂದು ಯಾವುದೇ ಸಂಕೇತಗಳು ಕಂಡು ಬಂದಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ಲೈಂಗಿಕ ದೌರ್ಜನ್ಯ ಅಥವಾ ಬಲಾತ್ಕಾರದ ಅಪರಾಧವನ್ನು ದಾಖಲಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.