ವಿವಾದಗ್ರಸ್ತ ಪಠಾಣ್ ಚಲನಚಿತ್ರದ ವಿರುದ್ಧ ಶ್ರೀರಾಮಪುರ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು!

ನ್ಯಾಯಾಲಯವು ಯಶರಾಜ ಪ್ರೊಡಕ್ಷನ್ ಗೆ ಕಾರಣ ಹೇಳಿ ನೋಟಿಸ್ ಜಾರಿ ಮಾಡಿದೆ !

ಶ್ರೀರಾಮಪುರ (ಜಿಲ್ಲಾ ನಗರ) – ನಟ ಶಾರುಖ್ ಖಾನ್ ಮತ್ತು ನಟಿ ದೀಪಿಕಾ ಪಡುಕೋಣೆ ಇವರು ಮುಖ್ಯಪಾತ್ರದಲ್ಲಿ ನಟಿಸಿರುವ ಮುಂಬರಲಿರುವ ಪಠಾಣ್ ಎಂಬ ವಾದಗ್ರಸ್ತ ಚಲನಚಿತ್ರದ ವಿರುದ್ಧ ಶ್ರೀರಾಮಪುರದ ನ್ಯಾಯಾಲಯದಲ್ಲಿ ಸುರೇಶ ಪಾಟೀಲ ಇವರು ಮೊಕದ್ದಮೆ ದಾಖಲಿಸಿದ್ದಾರೆ. ಯಾವುದಾದರೂ ಚಲನಚಿತ್ರದ ಜಾಹೀರಾತು ನೀಡುವಾಗ ಕೇಂದ್ರ ಚಲನಚಿತ್ರ ಪರೀಕ್ಷಣ ಮಂಡಳಿಯಿಂದ (ಸೆನ್ಸಾರ್ ಬೋರ್ಡಿನಿಂದ) ನೀಡಿರುವ ಎಲ್ಲರಿಗಾಗಿ /ಕೇವಲ ಪ್ರೌಢರಿಗಾಗಿ (ಯು/ಎ) ಪ್ರಮಾಣಪತ್ರ ತೋರಿಸುವುದು ಅವಶ್ಯಕವಾಗಿರುತ್ತದೆ; ಆದರೆ ಪಠಾಣ್ ಚಲನಚಿತ್ರದ ಸಂಕ್ಷಿಪ್ತ ಭಾಗ (ಟೀಸರ್) ಮತ್ತು ‘ಬೇಶರಮ ರಂಗ ಈ ಹಾಡನ್ನು ತೋರಿಸುವಾಗ ಇದರ ಪ್ರಮಾಣಪತ್ರ ತೋರಿಸಲಾಗಿಲ್ಲ. ಆದ್ದರಿಂದ ಈ ಚಲನಚಿತ್ರವನ್ನು ಯಾವುದೇ ಸಾಮಾಜಿಕ ಮಾಧ್ಯಮದಲ್ಲಿ ಟೀಸರ್, ಟ್ರೈಲರ್, ಹಾಡುಗಳು, ದೃಶ್ಯಗಳು, ಜಾಹೀರಾತು, ಹೋರ್ಡಿಂಗ್, ಪೋಸ್ಟರ್ ‘ಯು /ಎ ಪ್ರಮಾಣಪತ್ರವಿಲ್ಲದೇ ಪ್ರಸಾರ ಮಾಡಬಾರದು, ಇದಕ್ಕಾಗಿ ಈ ಮೊಕದ್ದಮೆ ಹೂಡಲಾಗಿದೆ. ಈ ಪ್ರಕರಣದಲ್ಲಿ ನ್ಯಾಯಾಲಯವು ಯಶರಾಜ ಪ್ರೊಡಕ್ಷನ್ ಇವರಿಗೆ ಕಾರಣ ಹೇಳಿ ನೋಟಿಸ್ ಜಾರಿ ಮಾಡಿದೆ .