ನವದೆಹಲಿ- ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜರಿವಾಲರು ಪಕ್ಷದ ಪ್ರಚಾರಕ್ಕಾಗಿ ಸರಕಾರಿ ಹಣವನ್ನು ಉಪಯೋಗಿಸಿರುವ ಬಗ್ಗೆ ದೆಹಲಿಯ ಉಪರಾಜ್ಯಪಾಲರಾದ ವ್ಹಿ.ಕೆ.ಸಕ್ಸೇನಾ ಇವರು ಆಮ ಆದ್ಮಿ ಪಕ್ಷದಿಂದ 97 ಕೋಟಿ ರೂಪಾಯಿಗಳನ್ನು ವಸೂಲು ಮಾಡುವಂತೆ ಸರಕಾರಕ್ಕೆ ಆದೇಶಿಸಿದ್ದಾರೆ. ಇದಕ್ಕಾಗಿ ಪಕ್ಷಕ್ಕೆ 15 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.` ಇದು ಸರ್ವೋಚ್ಚ ನ್ಯಾಯಾಲಯದ ಮಾರ್ಗದರ್ಶನದ ಉಲ್ಲಂಘನೆಯಾಗಿದೆ’ ಎಂದು ಉಪರಾಜ್ಯಪಾಲರು ಟಿಪ್ಪಣೆ ಮಾಡಿದ್ದಾರೆ. ಕೇಜರಿವಾಲರು ರಾಜಕೀಯ ಜಾಹೀರಾತು `ಸರಕಾರಿ ಜಾಹೀರಾತು’ ಎಂದು ಪ್ರದರ್ಶಿಸಿರುವ ಕುರಿತಾಗಿಯೂ ಸಕ್ಸೇನಾ ಇವರು ಆರೋಪಿಸಿದ್ದಾರೆ. ಅಗಸ್ಟ 2016 ರಲ್ಲಿ ದೆಹಲಿ ಉಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ತ್ರಿಸದಸ್ಯ ಸಮಿತಿಯನ್ನು ಸ್ಥಾಪಿಸಿತ್ತು. ಸಮಿತಿಗೆ ಜಾಹೀರಾತಿನ ಮೇಲೆ ವೆಚ್ಚ ಮಾಡಲಾಗಿರುವ ಹಣ.