Hindu Votes Mahayuti Wins Maharashtra Elections: ‘ವೋಟ್ ಜಿಹಾದ್’ಗೆ ಹಿಂದೂಗಳ ಪ್ರಬಲ ಪ್ರತ್ಯುತ್ತರ; ಮಹಾರಾಷ್ಟ್ರದಲ್ಲಿ ಮಹಾಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ !

ಮುಂಬಯಿ – ಲೋಕಸಭೆ ಚುನಾವಣೆಯಲ್ಲಿ, ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಮಹಾಮೈತ್ರಿಕೂಟದ ಅಭ್ಯರ್ಥಿಗಳನ್ನು ಸೋಲಿಸಲು ಮುಸ್ಲಿಮರು ಒಟ್ಟಾಗಿ ಮತ ಚಲಾಯಿಸಿದ್ದಾರೆ ಎಂಬುದು ಬಹಿರಂಗವಾಗಿತ್ತು; ಆದರೆ ವಿಧಾನಸಭಾ ಚುನಾವಣೆಯಲ್ಲಿ ‘ವೋಟ್ ಜಿಹಾದ್’ಗೆ ಹಿಂದೂಗಳು ಪ್ರಬಲವಾಗಿ ಪ್ರತ್ಯುತ್ತರ ನೀಡಿದರು. ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ ಮಹಾಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ನೀಡಿದರು. 288 ಕ್ಷೇತ್ರಗಳ ಪೈಕಿ 224 ವಿಧಾನಸಭಾ ಚುನಾವಣೆಯಲ್ಲಿ ಚುನಾಯಿತವಾಗಿದ್ದು, ಇದುವರೆಗಿನ ಮಹಾರಾಷ್ಟ್ರ ರಾಜಕೀಯ ಇತಿಹಾಸದಲ್ಲಿ ಮಹಾಯುತಿಯ ಅತ್ಯಧಿಕ ಬಹುಮತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ‘ಏಕ್ ಹೈ, ತೋ ಸೀಫ್ ಹೈ’ (ಒಟ್ಟಾದರೆ, ಸುರಕ್ಷಿತವಾಗಿರುತ್ತೇವೆ) ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ‘ಬೇಟೆಂಗೆ ತೊ ಕಟೆಂಗೆ’. ಈ ಕರೆಗೆ ಹಿಂದೂಗಳು ಎಥೆಚ್ಛವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಮಹಾವಿಕಾಸ ಮೈತ್ರೀಕೂಟ ರಾಜ್ಯದಲ್ಲಿ ಹೀನಾಯ ಸೋಲು ಕಂಡಿದೆ.

ಮತದಾನದಲ್ಲಿ ಹಿಂದೂ ಮತಗಳ ಪ್ರಭಾವ !

ಲೋಕಸಭೆ ಚುನಾವಣೆಯಲ್ಲಿ, ಮಾಲೆಗಾಂವ್, ಧುಳೆ, ಮುಂಬಯಿ ಇತ್ಯಾದಿ ಜಿಲ್ಲೆಗಳ 14 ಕ್ಷೇತ್ರಗಳಲ್ಲಿ ಮಹಾವಿಕಾಸ್ ಮೈತ್ರೀಕೂಟ ಹೆಚ್ಚಿನ ಮುಸ್ಲಿಂ ಮತಗಳನ್ನು ಪಡೆದಿತ್ತು; ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಿಂದೂ ಮತಗಳ ಪ್ರಭಾವ ಎದ್ದು ಕಾಣುತ್ತಿದೆ.

ಫೇಕ್ ನರೆಟಿವ್ ಮೇಲೆ ‘ಏಕ್ ಹೈ, ತೋ ಸೀಫ್ ಹೈ’ಯ ಗೆಲುವು !

ಮಹಾವಿಕಾಸ ಮೈತ್ರೀಕೂಟ ಲೋಕಸಭೆ ಚುನಾವಣೆಯಲ್ಲಿ ‘ಭಾಜಪಗೆ ದೇಶದಲ್ಲಿ ಬಹುಮತ ಬಂದರೆ ಸಂವಿಧಾನವನ್ನೇ ಬದಲಾಯಿಸಲಾಗುವುದು’ ಎಂಬ ‘ಫೇಕ್ ನರೆಟಿವ್’ಅನ್ನು ಹಬ್ಬಿಸಲಾಗಿತ್ತು. ಅದಕ್ಕೆ ಮಹಾಮೈತ್ರೀ ಕೂಟದ ಮುಖ ಭಂಗವಾಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ಇದರಿಂದ ಧಕ್ಕೆಯಾಗದಿರಲು ಮಹಾಮೈತ್ರೀಕೂಟ ರಾಜ್ಯದಲ್ಲಿ ‘ಸಂವಿಧಾನ ಜಾಗೃತಿ’ ಅಭಿಯಾನ ನಡೆಸಿತು. ಈ ಚುನಾವಣೆಯಲ್ಲಿ ‘ಏಕ್ ಹೈ, ತೋ ಸೀಫ್ ಹೈ’ (ಒಟ್ಟಿಗಿದ್ದರೇ ಸುರಕ್ಷಿತವಾಗಿರುತ್ತೇವೆ) ಮತ್ತು ‘ಬಟೆಂಗೆ ತೊ ಕಟೆಂಗೆ’ ಈ ಕರೆಯನ್ನು ‘ಫೇಕ್ ನರೆಟಿವ್’ಅನ್ನು ಮೆಟ್ಟಿ ನಿಂತಿದೆ.

ಎರಡೂವರೆ ವರ್ಷಗಳ ಕೆಲಸದಿಂದ ಜನ ಯಥೇಚ್ಛವಾಗಿ ಮತ ಹಾಕಿದರು ! – ಏಕನಾಥ್ ಶಿಂದೆ, ಮುಖ್ಯಮಂತ್ರಿ, ಮಹಾರಾಷ್ಟ್ರ

ಮುಂಬಯಿ – ಅಕ್ಕರೆಯ ಸಹೋದರಿಯರು, ಅಕ್ಕರೆಯ ಸಹೋದರರು, ಅಕ್ಕರೆಯ ರೈತರು, ಅಕ್ಕರೆಯ ಹಿರಿಯರು ಹೀಗೆ ಸಮಾಜದ ಎಲ್ಲಾ ವರ್ಗದವರು ಮಹಾಮೈತ್ರಿಗೆ ಮತ ಹಾಕಿದರು. ಇದು ಎರಡೂವರೆ ವರ್ಷಗಳಲ್ಲಿ ಮಹಾಮೈತ್ರಿ ಮಾಡಿದ ಕಾರ್ಯಕ್ಕೆ ಸಂದ ಮನ್ನಣೆಯಾಗಿದೆ. ಸಾರ್ವಜನಿಕ ನಂಬಿಕೆಯಿಂದಾಗಿ ನಮ್ಮ ಹೊಣೆಗಾರಿಕೆ ಹೆಚ್ಚಿದೆ. ಮುಂದಿನ ದಿನಗಳಲ್ಲಿ ನಾವು ಹುರುಪಿನಿಂದ ಶ್ರಮಿಸುತ್ತೇವೆ ಎಂದು ಹೇಳಿದರು.

ನಾವು ಆಧುನಿಕ ಅಭಿಮನ್ಯು; ಚಕ್ರವ್ಐಹವನ್ನು ಭೇಧಿಸಿದೆವು ! – ದೇವೇಂದ್ರ ಫಡನ್ವಿಸ್

ನಾವು ಆಧುನಿಕ ಅಭಿಮನ್ಯುಗಳು ಮತ್ತು ನಾವು ಚಕ್ರವ್ಯೂಹವನ್ನು (ವಿರೋಧಿಗಳಿಂದ ರಚಿಸಲಾಗಿದೆ) ಭೇದಿಸಿದ್ದೇವೆ ಎಂದು ಹೇಳಿದ್ದೇವು. ವಿರೋಧ ಪಕ್ಷದಿಂದ ಆಯ್ಕೆಯಾದವರನ್ನು ಗೌರವಿಸುತ್ತೇವೆ. ಇದು ಲೋಕಸಭೆ ಚುನಾವಣೆಯಲ್ಲಿ ಸಾಬೀತಾಗಿರುವ ಫೇಕ್ ನರೆಟಿವ್ ವಿರುದ್ಧ ಹೋರಾಡುತ್ತಿರುವ ಎಲ್ಲ ಸಂಘಟನೆಗಳಿಗೆ ಸಂದ ಜಯವಾಗಿದೆ ಎಂದು ಹೇಳಿದರು.

‘ರಾಷ್ಟ್ರೀಯ ಸ್ವಯಂಸೇವಕ ಸಂಘ’ ಸಮ್ಮಿಶ್ರ ಸರಕಾರದ ‘ಶಿಲ್ಪಿ’!

ಲೋಕಸಭೆ ಚುನಾವಣೆ ಮತದಾನಕ್ಕೆ 2 ದಿನ ಮುಂಚಿತವಾಗಿ ಭಾಜಪದ ರಾಜ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರು ‘ಈಗ ನಮಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಗತ್ಯವಿಲ್ಲ’ ಎಂದು ಹೇಳಿಕೆ ನೀಡಿದ್ದರು. ಇದರಿಂದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಚುನಾವಣಾ ಪ್ರಚಾರದಲ್ಲಿ ಸಕ್ರಿಯರಾಗಿರಲಿಲ್ಲ. ಆದರೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭಾಜಪ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಡುವೆ ಸಂಯೋಜಕರನ್ನು ನೇಮಿಸಲಾಗಿತ್ತು. ರಾಜ್ಯದಲ್ಲಿ ಹಿಂದುತ್ವನಿಷ್ಠ ಅಭ್ಯರ್ಥಿಗಳಿಗೆ ಮತ ಹಾಕಲು ಸಂಘದ ಸಾವಿರಾರು ಕಾರ್ಯಕರ್ತರು ಕೆಲಸ ಮಾಡುತ್ತಿದ್ದರು. ಹಾಗಾಗಿ ರಾಜ್ಯದಲ್ಲಿ ಮಹಾಮೈತ್ರಿಕೂಟ ಅಧಿಕಾರಕ್ಕೆ ಬರಲು ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ ಶಿಲ್ಪಿ ಎನಿಸಿಕೊಂಡಿದೆ.

ನವೆಂಬರ್ 25 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸಮಾರಂಭ !

ಮುಂಬಯಿ – ಮಹಾರಾಷ್ಟ್ರದಲ್ಲಿ ನೂತನ ಸರಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ನವೆಂಬರ್ 25 ರಂದು ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮದ ಸಿದ್ಧತೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಯಲಾಗಿದೆ.

ಅಭಿವೃದ್ಧಿಯ ಗೆಲುವು ! ಉತ್ತಮ ಆಡಳಿತದ ಗೆಲುವು ! – ಪ್ರಧಾನಿ ಮೋದಿ

‘ಅಭಿವೃದ್ಧಿಯ ವಿಜಯ ! ಉತ್ತಮ ಆಡಳಿತದ ಗೆಲುವು ! ಒಟ್ಟಾಗಿ ನಾವು ದೊಡ್ಡ ಜಿಗಿತವನ್ನು ತೆಗೆದುಕೊಳ್ಳುತ್ತೇವೆ. ನಮಗೆ ಐತಿಹಾಸಿಕ ಜನಾದೇಶವನ್ನು ನೀಡಿದ್ದಕ್ಕಾಗಿ ಮಹಾರಾಷ್ಟ್ರದ ನನ್ನ ಸಹೋದರ ಸಹೋದರಿಯರಿಗೆ, ವಿಶೇಷವಾಗಿ ರಾಜ್ಯದ ಯುವಕರು ಮತ್ತು ಮಹಿಳೆಯರಿಗೆ ಹೃತ್ಪೂರ್ವಕ ಧನ್ಯವಾದಗಳು ! ಈ ಪ್ರೀತಿ ಮತ್ತು ಆತ್ಮೀಯತೆ ಹೋಲಿಸಲಾಗದು. ನಮ್ಮ ಮೈತ್ರಿಯು ಮಹಾರಾಷ್ಟ್ರದ ಪ್ರಗತಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ನಾನು ಸಾರ್ವಜನಿಕರಿಗೆ ಭರವಸೆ ನೀಡುತ್ತೇನೆ ಎಂದು ಹೇಳಿದರು