ಅಮೇರಿಕಾದ `ಮರಿನ್’ ಸೈನ್ಯದಲ್ಲಿ ನೇಮಕಗೊಳ್ಳುವ ಸಿಖ್ಕರಿಗೆ ಗಡ್ಡ ಮತ್ತು ಪಗಡಿಗೆ ಅನುಮತಿ

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ `ಮರಿನ್’ (ನೌಕಾದಳದ ಹಾಗೆ ಕಾರ್ಯ ಮಾಡುವ) ಸೈನ್ಯದಲ್ಲಿ ನೇಮಕಗೊಳ್ಳುವ ಸಿಖ್ಕರಿಗೆ ಗಡ್ಡ ಹಾಗೂ ಪಗಡಿಗೆ ಒಂದು ನ್ಯಾಯಾಲಯವು ಅನುಮತಿ ನೀಡಿದೆ. ಧಾರ್ಮಿಕ ಆಧಾರದಲ್ಲಿ ಈ ರೀತಿಯ ಅನುಮತಿ ನೀಡುವುದು ಸಂಘಟಿತತನಕ್ಕೆ ದುರ್ಬಲಗೊಳಿಸಬಹುದು, ಎಂದು ಆಕ್ಷೇಪ ವ್ಯಕ್ತಪಡಿಸಿರಿವುದು ನ್ಯಾಯಾಲಯ ಈ ಸಮಯದಲ್ಲಿ ತಿರಸ್ಕರಿಸಿದೆ. ಅಮೇರಿಕಾದ ಭೂದಳ, ನೌಕಾದಳ ಮತ್ತು ವಾಯುದಳ ಇದರ ಜೊತೆಗೆ ಗಡಿ ಸುರಕ್ಷಾ ದಳದಲ್ಲಿ ಈ ಮೊದಲು ಸಿಖ್ಕರಿಗೆ ಗಡ್ಡ ಹಾಗೂ ಪಗಡಿಗೆ ಅನುಮತಿ ನೀಡಲಾಗಿದೆ.