ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಬಾರದು; ಎಂದು ಹಚ್ಚಿದ್ದ ದೇವತೆಗಳ ಚಿತ್ರ ತೆಗೆಯುವಂತೆ ಸಲ್ಲಿಸಲಾದ ಅರ್ಜಿ ದೆಹಲಿ ಉಚ್ಚ ನ್ಯಾಯಾಲಯದಿಂದ ವಜಾ

ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ, ಉಗಿಯುವುದು ಅಥವಾ ಕಸ ಎಸೆಯುವುದನ್ನು ತಡೆಯಲು ಗೋಡೆಗಳ ಮೇಲೆ ದೇವತೆಗಳ ಚಿತ್ರಗಳನ್ನು ಅಂಟಿಸುವ ಪದ್ಧತಿ

ನವದೆಹಲಿ- ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ, ಉಗಿಯುವುದು ಅಥವಾ ಕಸ ಎಸೆಯುವುದನ್ನು ತಡೆಯಲು ಗೋಡೆಗಳ ಮೇಲೆ ದೇವತೆಗಳ ಚಿತ್ರಗಳನ್ನು ಅಂಟಿಸುವ ಪದ್ಧತಿಯನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದೂರನ್ನು ದೆಹಲಿ ಉಚ್ಚ ನ್ಯಾಯಾಲಯವು ವಜಾಗೊಳಿಸಿದೆ.

೧. ಈ ದೂರಿನಲ್ಲಿ ಜನರಿಗೆ ಮೂತ್ರ ವಿಸರ್ಜನಿಸುವುದು, ಉಗಿಯುವುದು ಮತ್ತು ಕಸ ಎಸೆಯುವುದರಿಂದ ತಡೆಯಲು ದೇವತೆಗಳ ಚಿತ್ರಗಳನ್ನು ಗೋಡೆಗಳ ಮೇಲೆ ಅಂಟಿಸಲಾಗುತ್ತಿದೆ. ಈ ಪದ್ಧತಿ ರೂಢಿಯಾಗಿದೆ. ಈ ಭಾರತೀಯ ದಂಡ ಸಂಹಿತೆಯ ಕಲಂ 295 ಮತ್ತು 295 ಅ ಗಳ ಉಲ್ಲಂಘನೆಯಾಗಿದೆ; ಕಾರಣ ಇದರಿಂದ ಸರ್ವಸಾಮಾನ್ಯರ ಧಾರ್ಮಿಕ ಭಾವನೆ ನೋಯಿಸಲ್ಪಡುತ್ತದೆ. ಸಮಾಜಕ್ಕೆ ಇದೊಂದು ಗಂಭೀರ ಅಪಾಯವಾಗಿದೆ; ಕಾರಣ ಇಂತಹ ಚಿತ್ರಗಳನ್ನು ಅಂಟಿಸುವುದನ್ನು ನಿಲ್ಲಿಸಲು ಯಾರೂ ಮುಂದಾಗುವುದಿಲ್ಲ, ಬದಲಾಗಿ ಜನರು ಸಾರ್ವಜನಿಕ ಸ್ಥಳಗಳಲ್ಲಿ ಈ ಪವಿತ್ರ ಪ್ರತಿಮೆಗಳ ಮೇಲೆ ಮೂತ್ರ ವಿಸರ್ಜಿಸುತ್ತಾರೆ ಅಥವಾ ಉಗುಳುತ್ತಾರೆ.

೨. ದೂರುದಾರರು ಮತ್ತು ನ್ಯಾಯವಾದಿ ಗೌರಾಂಗ ಗುಪ್ತಾ ಇವರು ಮಾತನಾಡುತ್ತಾ, ಜನರು ಮೂತ್ರ ವಿಸರ್ಜನೆ ಅಥವಾ ಉಗುಳುವುದರಿಂದ ತಡೆಯಲು ಹೆದರಿಸಲಾಗುತ್ತದೆ. ಯಾವುದಾದರೂ ಧರ್ಮದ ಮೇಲಿನ ಶ್ರದ್ಧೆಯಿಂದ ಮೂಡಿರುವ ಭಕ್ತಿ ಮತ್ತು ಅದರ ಪಾಲನೆ ಮಾಡುವ ಸ್ವಾತಂತ್ರ್ಯ ಗಮನಿಸುತ್ತಾ ಇಂತಹ ಕೃತ್ಯಗಳಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

೩. ದೂರುದಾರರು ಉಚ್ಚ ನ್ಯಾಯಾಲಯವು ತಮ್ಮ ದೂರಿನಲ್ಲಿ ಈ ಹಿಂದಿನ ಒಂದು ಪ್ರಕರಣದಲ್ಲಿ ಬಯಲಿನಲ್ಲಿ ಮೂತ್ರ ವಿಸರ್ಜಿಸುತ್ತಿರುವುದನ್ನು ಒಪ್ಪಿಕೊಂಡಿತ್ತು. ನ್ಯಾಯಾಲಯವು ಈ ವಿಷಯದ ಕುರಿತು ನೀಡಿದ ಆದೇಶದಲ್ಲಿ ಗೋಡೆಗಳ ಮೇಲೆ ದೇವತೆಗಳ ಪ್ರತಿಮೆ ಅಂಟಿಸುವ ಪದ್ಧತಿಯಿಂದ ಜನರ ಧಾರ್ಮಿಕ ಭಾವನೆಯನ್ನು ನೋಯಿಸುತ್ತಿದೆಯೆಂದು ಹೇಳಿದ್ದರು ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂ ದೇಶಗಳ ಹಿಂದೂಗಳ ದೇವತೆಗಳ ಈ ರೀತಿ ಆಗುವ ಅಪಮಾನವನ್ನು ತಡೆಗಟ್ಟಲು ಭಾಜಪ ಆಡಳಿತವಿರುವ ರಾಜ್ಯಗಳಾದರೂ ಮುಂದಾಳತ್ವ ವಹಿಸಿ ಆವಶ್ಯಕವಿದೆ, ಎಂದೇ ಹಿಂದೂಗಳಿಗೆ ಅನಿಸುತ್ತದೆ.