ವರ್ಗಾಯಿಸಲಾಗಿರುವ ಆಸ್ತಿಯನ್ನು ಪೋಷಕರು ಹಿಂಪಡೆಯಲು ಸಾಧ್ಯವಿಲ್ಲ ! – ಮದ್ರಾಸ ಉಚ್ಚ ನ್ಯಾಯಾಲಯ

ಚೆನ್ನೈ (ತಮಿಳುನಾಡು) – ಪೋಷಕರು ಅಥವಾ ಹಿರಿಯ ವ್ಯಕ್ತಿಗಳು ಮಕ್ಕಳಿಗೆ ವರ್ಗಾಯಿಸಿದ ಆಸ್ತಿಯನ್ನು ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ’ ಅಡಿಯಲ್ಲಿ ಮರುಸ್ವಾಧೀನಪಡಿಸಿಕೊಳ್ಳಲಾಗುವುದಿಲ್ಲ. ದಾಖಲೆಗಳಲ್ಲಿ ಈ ಷರತ್ತು ಇದ್ದಲ್ಲಿ, ಆಸ್ತಿಯನ್ನು ಪಡೆಯುವವನು ಅವರನ್ನು ನೋಡಿಕೊಳ್ಳಬೇಕು ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ಇತ್ತೀಚೆಗೆ ಮಹತ್ವದ ತೀರ್ಪು ನೀಡಿದೆ.

ಎಸ್. ಸೆಲ್ವರಾಜ ಸಿಂಪ್ಸನ ಅವರು, ಮಗನು ಅವರನ್ನು ನಿರಾಧಾರರನ್ನಾಗಿಸಿದ್ದಾನೆ ಎಂದು ಆರೋಪಿಸಿ ಮಗನ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. (ಜನ್ಮ ಕೊಟ್ಟ ತಂದೆ-ತಾಯಿಯ ಆಸ್ತಿಯನ್ನು ಕಬಳಿಸಿ ಅವರನ್ನು ಗಾಳಿಗೆ ತೂರುವ ಮಕ್ಕಳು ಹುಟ್ಟುವುದು ಸಮಾಜದ ನೈತಿಕತೆಯ ಅವನತಿಯ ಸಂಕೇತ ! – ಸಂಪಾದಕರು) ಒಬ್ಬ ವ್ಯಕ್ತಿಯು ತನ್ನ ಆಸ್ತಿಯನ್ನು ವರ್ಗಾಯಿಸಿರುವಾಗ ಅಥವಾ ಯಾರಿಗಾದರೂ ಕೊಡುಗೆಯಾಗಿ ನೀಡಿರುವಾಗ ಆಸ್ತಿಯನ್ನು ಪಡೆದವನು, ಆಸ್ತಿ ವರ್ಗಾವಣೆ ಮಾಡಿದವರನ್ನು ನೋಡಿಕೊಳ್ಳಲು ಅಸಮರ್ಥನಾದರೆ, ಸಂಬಂಧಪಟ್ಟ ವ್ಯಕ್ತಿಯು ಕಾಯಿದೆಯ ಸೆಕ್ಷನ್ 23 ರ ಅಡಿಯಲ್ಲಿ, ಆಸ್ತಿಯ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಬೇಡಿಕೆ ಸಲ್ಲಿಸಬಹುದು ಎಂದು ನ್ಯಾಯಮೂರ್ತಿ ಆರ್. ಸುಬ್ರಹ್ಮಣ್ಯಂ ಹೇಳಿದರು. ಸಂಬಂಧಿತ ಕಾನೂನಿನ ಅಡಿಯಲ್ಲಿ ಯಾವುದೇ ಷರತ್ತುಗಳನ್ನು ಪೂರೈಸದ ಕಾರಣ, ನ್ಯಾಯಾಧೀಶರು ಎಸ್. ಸೆಲ್ವರಾಜ ಸಿಂಪ್ಸನ ಅವರ ಅರ್ಜಿಯನ್ನು ವಜಾಗೊಳಿಸಿದರು.