ವೃಂದಾವನ(ಉತ್ತರ ಪ್ರದೇಶ)ದಲ್ಲಿ ನಡೆದ ಧರ್ಮ ಸಂಸತ್ತಿನಲ್ಲಿ ಅಂಗೀಕರಿಸಲಾದ 6 ನಿರ್ಣಯಗಳು !
ಮಥುರಾ (ಉತ್ತರ ಪ್ರದೇಶ) – ಮಥುರಾ ಜಿಲ್ಲೆಯಲ್ಲಿನ ವೃಂದಾವನದಲ್ಲಿ ನಡೆದ ಧರ್ಮ ಸಂಸತ್ತಿನಲ್ಲಿ ಆರು ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಸರಕಾರವು ಈ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸಬೇಕೆಂದು ಸಂತರು ಮನವಿ ಮಾಡಿದ್ದಾರೆ. ಇದರಲ್ಲಿ ವಿಶೇಷವಾಗಿ ದೇಶಿ ಹಸುವನ್ನು ‘ರಾಷ್ಟ್ರಮಾತೆ’ ಎಂದು ಘೋಷಿಸಬೇಕು ಎಂದು ಮನವಿ ಮಾಡಲಾಗಿದೆ. ‘ಶ್ರೀಕೃಷ್ಣ ಸಾಧಕ ಟ್ರಸ್ಟ್’ ಸಭಾಂಗಣದಲ್ಲಿ ನಡೆದ ಧರ್ಮ ಸಂಸತ್ತಿನ ಉದ್ಘಾಟನೆಯಲ್ಲಿ ‘ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭೆ’ಯ ಉಪಾಧ್ಯಕ್ಷರಾದ ಬಿಹಾರಿ ಲಾಲ ವಸಿಷ್ಠರವರು ಇಡೀ ಬ್ರಜ ಮಂಡಲವನ್ನು ‘ತೀರ್ಥಕ್ಷೇತ್ರ’ ಎಂದು ಘೋಷಿಸುವಂತೆ, ಹಾಗೆಯೇ ಮೊಟ್ಟೆ, ಮಾಂಸ ಮತ್ತು ಮದ್ಯದಂತಹ ವಸ್ತುಗಳ ಮಾರಾಟವನ್ನು ನಿಷೇಧಿಸುವಂತೆ ಉತ್ತರ ಪ್ರದೇಶ ಸರಕಾರಕ್ಕೆ ಸಲಹೆ ನೀಡಿದರು.
1. ಸಂತ ಸ್ವಾಮಿ ರಮೇಶಾನಂದ ಗಿರಿಯವರು ರಾಷ್ಟ್ರೀಯ ನಾಗರಿಕ ನೋಂದಣಿ, ಏಕರೂಪ ಶಿಕ್ಷಣ, ಜನಸಂಖ್ಯೆ ನಿಯಂತ್ರಣ, ಲವ್ ಜಿಹಾದ್ ನಿಯಂತ್ರಣ ಇತ್ಯಾದಿ ಕಾನೂನುಗಳನ್ನು ತಕ್ಷಣವೇ ಜಾರಿಗೆ ತರಬೇಕೆಂದು ಕೇಂದ್ರ ಸರಕಾರಕ್ಕೆ ಸಲಹೆ ನೀಡಿದರು.
2. ಧರ್ಮ ಸಂಸತ್ತಿನಲ್ಲಿ ಭಾಗವಹಿಸಿದ್ದ ಜಗನ ದಾಸ ರಾಥೋಡರವರು ಶ್ರೀ ಕೃಷ್ಣಜನ್ಮಭೂಮಿಯ ಪರಿಸರದಿಂದ ಶಾಹಿ ಈದ್ಗಾ ಮತ್ತು ಮೀನಾ ಮಸೀದಿಯನ್ನು ತೆರವುಗೊಳಿಸಲು, ಅಲ್ಲಿನ ದೈನಂದಿನ ನಮಾಜ್ ಪಠಣಗಳನ್ನು ತಕ್ಷಣ ನಿಲ್ಲಿಸಲು, ಹಾಗೆಯೇ ಶಾಹಿ ಈದ್ಗಾದ (ಶ್ರೀ ಕೃಷ್ಣ ಜನ್ಮಭೂಮಿಯಲ್ಲಿರುವ ಮಸೀದಿ) ಸಮೀಕ್ಷೆಯನ್ನು ಶೀಘ್ರಗತಿಯಲ್ಲಿ ನಡೆಸುವಂತೆ ಒತ್ತಾಯಿಸಿದರು.
3. ಆಚಾರ್ಯ ಬಲರಾಮ ದಾಸರವರು ದೇಶಿ ಹಸುವನ್ನು ‘ರಾಷ್ಟ್ರ ಮಾತೆ’ ಎಂದು ಘೋಷಿಸಬೇಕು ಎಂದು ಮನವಿ ಮಾಡಿದರು. ಕನಿಷ್ಠ ಉತ್ತರ ಪ್ರದೇಶ ಸರಕಾರವು ಮಹಾರಾಷ್ಟ್ರದ ನೆಲದಲ್ಲಿ ನಮ್ಮ ರಾಜ್ಯದ ದೇಶಿ ಹಸುವಿಗೆ ‘ರಾಜಮಾತೆ’ಯ ಸ್ಥಾನಮಾನವನ್ನು ನೀಡಬೇಕು ಎಂದು ಮನವಿ ಮಾಡಿದರು.
4. ಶ್ರೀಕೃಷ್ಣಜನ್ಮಭೂಮಿ ಮುಕ್ತಿ ನ್ಯಾಸದ ಅಧ್ಯಕ್ಷರಾದ ದಿನೇಶ ಶರ್ಮಾರವರು ಮಾತನಾಡಿ, ಈ ಎಲ್ಲ ಪ್ರಸ್ತಾವನೆಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಕಳುಹಿಸಲಾಗುವುದು ಮತ್ತು ಅದನ್ನು ಆದಷ್ಟು ಶೀಘ್ರವಾಗಿ ಜಾರಿಗೊಳಿಸುವಂತೆ ಕೋರಲಾಗುವುದು ಎಂದು ಹೇಳಿದರು.
ಸಂಪಾದಕೀಯ ನಿಲುವುಮೂಲದಲ್ಲಿ, ಧರ್ಮ ಸಂಸತ್ತಿಗೆ ಹಾಗೂ ಅದರಲ್ಲಿ ಸಹಭಾಗಿಯಾದ್ದ ಸಂತರು ಮತ್ತು ಧರ್ಮ ಗುರುಗಳಿಗೆ ಇಂತಹ ಬೇಡಿಕೆಯನ್ನು ಮಂಡಿಸುವ ಪ್ರಮೇಯವೇ ಬರಬಾರದು, ಸರಕಾರವೇ ಸ್ವತಃ ಇದನ್ನು ಮಾಡುವುದು ಆವಶ್ಯಕವಾಗಿದೆ! |