ಅಗರ್ತಲಾ (ತ್ರಿಪುರ) – ರೈಲ್ವೆ ಪೊಲೀಸರು ಮತ್ತು ಗಡಿ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ರಾಜ್ಯದ ಖೋವಾಯಿ ಜಿಲ್ಲೆಯ ತೆಲಮುಡಾ ರೈಲು ನಿಲ್ದಾಣದಿಂದ 12 ಬಾಂಗ್ಲಾದೇಶಿ ನುಸುಳುಕೋರರನ್ನು ಬಂಧಿಸಲಾಗಿದೆ. ಇವರೆಲ್ಲರೂ ಈ ನಿಲ್ದಾಣದಿಂದ ಭಾರತದ ಇತರೆ ರಾಜ್ಯಗಳಿಗೆ ಹೋಗಲು ಪ್ರಯತ್ನಿಸುತ್ತಿದ್ದರು.
ಬಂಧಿಸಲಾಗಿರುವ ನುಸುಳುಕೋರರಲ್ಲಿ 4 ಮಹಿಳೆಯರು, 4 ಪುರುಷರು ಮತ್ತು 4 ಮಕ್ಕಳು ಸೇರಿದ್ದಾರೆ. ಇವರೆಲ್ಲರೂ ಬಾಂಗ್ಲಾದೇಶದ ದಲ್ಲಾಳಿಗಳ ಮೂಲಕ ಸಿಲಾಚಾರಿ ಪ್ರದೇಶದ ಮೂಲಕ ಭಾರತದಲ್ಲಿ ನುಸುಳಿದ್ದರು. ಭದ್ರತಾ ಸಿಬ್ಬಂದಿಯನ್ನು ನೋಡಿ ಜೊತೆಯಲ್ಲಿದ್ದ ಸಹಚರನು ಓಡಿ ಹೋದನು. ಈ ರೈಲು ನಿಲ್ದಾಣದಲ್ಲಿ ಈ ಹಿಂದೆಯೂ ಹಲವು ಬಾರಿ ಈ ರೀತಿಯ ಕಾರ್ಯಾಚರಣೆ ನಡೆಸಲಾಗಿದೆ. ಬಾಂಗ್ಲಾದೇಶಿ ನುಸುಳುಕೋರರು ತ್ರಿಪುರಾ ಮೂಲಕ ಭಾರತದ ವಿವಿಧ ನಗರಗಳಲ್ಲಿ ಅಕ್ರಮವಾಗಿ ನೆಲೆಸುತ್ತಾರೆ.
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಅಮಾನವೀಯ ಮತ್ತು ನಿರಂತರ ದೌರ್ಜನ್ಯವನ್ನು ನೋಡಿದರೆ, ಭಾರತೀಯ ಹಿಂದೂಗಳು ಈ ನುಸುಳುಕೋರರಿಗೆ ಗಲ್ಲು ಶಿಕ್ಷೆ ನೀಡುವಂತೆ ಕೋರಿದರೆ ಆಶ್ಚರ್ಯಪಡಬಾರದು ! |