Bangladesh Hindus Protest: ಬಾಂಗ್ಲಾದೇಶದಲ್ಲಿ 1 ಲಕ್ಷಕ್ಕಿಂತಲೂ ಹೆಚ್ಚಿನ ಹಿಂದೂಗಳಿಂದ ರಸ್ತೆಗಿಳಿದು ಪ್ರತಿಭಟನೆ !

ಆದರೂ ಮತಾಂಧ ಮುಸಲ್ಮಾನ ಮತ್ತು ಪೊಲೀಸರಿಂದ ಕೆಲವು ಹಿಂದೂಗಳಿಗೆ ಥಳಿತ

ರಂಗಪುರ (ಬಾಂಗ್ಲಾದೇಶ) – ಇಲ್ಲಿ ಸನಾತನ ಜಾಗರಣ ಮಂಚ್ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯಗಳ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಲಕ್ಷಾಂತರ ಹಿಂದೂಗಳು ಭಾಗವಹಿಸಿ, ಪ್ರತಿಭಟನೆ ನಡೆಸಿದರು. ಹಿಂದೂಗಳು `ಜೈ ಭವಾನಿ’, `ಹರ ಹರ ಮಹಾದೇವ’ ಮತ್ತು `ಜೈ ಶ್ರೀರಾಮ’ ಎನ್ನುವ ಘೋಷಣೆಗಳನ್ನು ಕೂಗಿದರು. ಹಿಂದೂ ಪ್ರತಿಭಟನಾಕಾರರು ಕೇಸರಿ ಧ್ವಜವನ್ನೂ ಹಾರಿಸಿದರು. ಆ ಸಮಯದಲ್ಲಿ ಜಿಹಾದಿ ಮುಸಲ್ಮಾನರು ಕೆಲವು ಹಿಂದೂಗಳನ್ನು ಥಳಿಸಿರುವ ಘಟನೆ ನಡೆದಿದೆ. ಇದರಲ್ಲಿ 20 ಹಿಂದೂ ಯುವಕರು ಗಾಯಗೊಂಡಿದ್ದಾರೆ. ಹಿಂದೂ ಪ್ರತಿಭಟನಾಕಾರರನ್ನು ಪೊಲೀಸರೂ ಥಳಿಸಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರತಿಭಟನೆಯ ಮುಖ್ಯ ಅತಿಥಿಯಾಗಿ ಉಪಸ್ಥಿತರಾಗಿದ್ದ ಚಿನ್ಮಯ ಕೃಷ್ಣ ದಾಸ ಬ್ರಹ್ಮಚಾರಿಯವರು, ದೇಶದಲ್ಲಿ ಹಿಂದೂಗಳಿಗೆ ತಾರತಮ್ಯ ಮಾಡುತ್ತಿದ್ದಾರೆಂದು ಆರೋಪಿಸಿದರು.

1. ಹಿಂದೂಗಳು ಈ ಪ್ರತಿಭಟನೆಯ ಮೂಲಕ ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರರಾದ ಪ್ರಾ. ಮಹ್ಮದ ಯುನೂಸ ಇವರಿಗೆ 8 ಬೇಡಿಕೆಗಳ ಮನವಿ ನೀಡಿದ್ದಾರೆ. ಈ ಮನವಿಯಲ್ಲಿ ಹಿಂದೂಗಳ ಮೇಲಿನ ದಾಳಿಗಳ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಶೀಘ್ರಗತಿ ನ್ಯಾಯಮಂಡಳಿಯನ್ನು ಸ್ಥಾಪಿಸುವುದು, ಅಲ್ಪಸಂಖ್ಯಾತರ ರಕ್ಷಣೆಯ ಕಾನೂನು ಶೀಘ್ರವಾಗಿ ಜಾರಿಗೊಳಿಸುವುದು, ಹಿಂದೂ ಧಾರ್ಮಿಕ ಕಲ್ಯಾಣ ಸ್ಥಾಪಿಸುವುದು, ಪಾಲಿ ಶಿಕ್ಷಣ ಪೀಠವನ್ನು ಆಧುನೀಕರಣಗೊಳಿಸುವುದು, ಅಲ್ಪಸಂಖ್ಯಾತರ ರಕ್ಷಣೆಗಾಗಿ 5 ಅಂಶಗಳ ಕ್ರಿಯಾ ಯೋಜನೆ ಘೋಷಣೆ ಮತ್ತು ರಾಷ್ಟ್ರೀಯ ಅನುಸೂಚಿತ ಜಾತಿ ಆಯೋಗದ ಸ್ಥಾಪನೆ ಮುಂತಾದ ಬೇಡಿಕೆಗಳಿವೆ.

2. ಮಹ್ಮದ ಯುನೂಸ ಇವರು ಈ ಹಿಂದೆ ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ದಾಳಿಯನ್ನು ಖಂಡಿಸಿದ್ದರು. ದಾಳಿಗಳನ್ನು ಅವರು `ಹೇಯ ಕೃತ್ಯ’ ಎಂದು ಹೇಳಿದ್ದರು ಮತ್ತು ಯುವಕರಿಗೆ ಹಿಂದೂ, ಕ್ರೈಸ್ತ ಮತ್ತು ಬೌದ್ಧ ಕುಟುಂಬಗಳನ್ನು ರಕ್ಷಿಸುವಂತೆ ಕರೆ ನೀಡಿದ್ದರು.

ಹಿಂದೂಗಳ ಆಸ್ತಿ ಮತ್ತು ಮನೆಗಳ ಲೂಟಿ ಮುಂದುವರಿದಿದೆ ! – ಚಿನ್ಮಯ ದಾಸ

ಚಿನ್ಮಯ ಕೃಷ್ಣ ದಾಸ ಬ್ರಹ್ಮಚಾರಿಯವರು

1971 ರ ಸ್ವಾತಂತ್ರ್ಯ ಹೋರಾಟದಲ್ಲಿ ಯಾರು ತಮ್ಮ ಜೀವವನ್ನು ಕಾಪಾಡಲು ದೇಶವನ್ನು ತೊರೆದಿದ್ದರೋ ಅವರಲ್ಲಿ ಶೇ. 70 ರಷ್ಟು ಹಿಂದೂಗಳೇ ಆಗಿದ್ದರು. ಅವರ ಮನೆ ಮತ್ತು ವಸ್ತುಗಳನ್ನು ಲೂಟಿ ಮಾಡಿದರು. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಈ ಪ್ರವೃತ್ತಿ ಇನ್ನೂ ಮುಂದುವರಿದಿದೆಯೆಂದು ಚಿನ್ಮಯದಾಸ ಇವರು ಪ್ರತಿಭಟನೆಯ ಸಮಯದಲ್ಲಿ ಮಾರ್ಗದರ್ಶನ ಮಾಡುವಾಗ ಹೇಳಿದರು.

ಅವರು ಮಾತನ್ನುಮುಂದುವರಿಸಿ, ಆಗಸ್ಟ 5ರ ನಂತರ ದೇಶದಲ್ಲಿ ಭಯೋತ್ಪಾದನೆ ಮತ್ತು ಜಿಹಾದಿ ನಾಯಕರು ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಆದರೆ ಒಬ್ಬನೇ ಒಬ್ಬ ಹಿಂದೂ ಬಿಡುಗಡೆಯಾಗಿಲ್ಲ. ಹಿಂದೂ ಯಾವುದೇ ರಾಜಕೀಯ ಪಕ್ಷದ ಬೆಂಬಲಿಗರಲ್ಲ. ಭವಿಷ್ಯದಲ್ಲಿ ಹಿಂದೂಗಳು ಪ್ರಜಾಪ್ರಭುತ್ವವನ್ನು ಕಾಪಾಡುವ ಪಕ್ಷಕ್ಕೆ ಮತ ಹಾಕುತ್ತಾರೆ. ಇಂದು ದೇಶದ 3 ಕೋಟಿ ಸನಾತನರು ಒಂದಾಗಿದ್ದಾರೆ ಎಂದು ಹೇಳಿದರು.

ಚಿನ್ಮಯದಾಸ ಇವರಿಗೆ ರಂಗಪುರ ತೊರೆಯುವಂತೆ ಆದೇಶ

ಚಿನ್ಮಯದಾಸರು ನವೆಂಬರ 21 ರಂದು ರಾತ್ರಿ ಪತ್ರಿಕಾಗೋಷ್ಠಿಯನ್ನು ಕರೆದು, ಅವರನ್ನು ರಂಗಪುರದ ಹೊಟೆಲ ಬಿಡುವಂತೆ ಹೇಳಲಾಗಿದೆಯೆಂದು ತಿಳಿಸಿದರು. `ಅವರನ್ನು ಇಲ್ಲಿ ಇರಿಸಿಕೊಳ್ಳಲಾಗುವುದಿಲ್ಲ’ ಎಂದು ಪೊಲೀಸರು ಅವರಿಗೆ ಹೇಳಿದರು.

ಸಂಪಾದಕೀಯ ನಿಲುವು

  • ಇದರಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಏನಾಗಿದೆಯೆನ್ನುವುದನ್ನು ಗಮನಕ್ಕೆ ತೆಗೆದುಕೊಳ್ಳಬೇಕು !
  • ಇಂತಹ ಹಿಂದೂಗಳನ್ನು ಭಾರತದಲ್ಲಿರುವ ಹಿಂದೂಗಳು ಮತ್ತು ಅವರ ಸಂಘಟನೆಗಳು ಸಹಾಯ ಮಾಡುವುದು ಎಷ್ಟು ಆವಶ್ಯಕವಾಗಿದೆಯೆನ್ನುವುದನ್ನು ಗಮನಕ್ಕೆ ತೆಗೆದುಕೊಂಡು ಸಕ್ರಿಯರಾಗಿರುವುದು ಆವಶ್ಯಕವಾಗಿದೆ !