‘ಕೊರೋನಾ ವಿಷಾಣುವಿನ ಸಂಕಟದಿಂದಾಗಿ ಒಟ್ಟಿಗೆ ಸೇರಿ ಉತ್ಸವವನ್ನು ಆಚರಿಸಲು ಆಗದಿರುವುದರಿಂದ ‘ಶ್ರೀಕೃಷ್ಣ ಜನ್ಮಾಷ್ಟಮಿಯ ಪೂಜೆಯನ್ನು ಮನೆಯಲ್ಲಿಯೇ ಭಕ್ತಿಭಾವದಿಂದ ಹೇಗೆ ಮಾಡಬೇಕು ?

ಪ್ರತಿವರ್ಷ ಭಾರತದಲ್ಲಿ ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯ ಉತ್ಸವವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ. ಈ ವರ್ಷ ೧೧.೮.೨೦೨೦ ಈ ದಿನದಂದು ‘ಶ್ರೀಕೃಷ್ಣ ಜನ್ಮಾಷ್ಟಮಿ ಇದೆ. ಉತ್ಸವವನ್ನು ಆಚರಿಸುವಾಗ ಪ್ರಾಂತಗಳಿಗನುಸಾರ ಉತ್ಸವವನ್ನು ಆಚರಿಸುವ ಪದ್ಧತಿಯಲ್ಲಿ ಭಿನ್ನತೆ ಇರುತ್ತದೆ. ಉತ್ಸವದ ನಿಮಿತ್ತ ಬಹಳಷ್ಟು ಜನರು ಒಟ್ಟು ಸೇರಿ ಭಕ್ತಿಭಾವದಿಂದ ಈ ಉತ್ಸವವನ್ನು ಆಚರಿಸುತ್ತಾರೆ.

೨೭ ಜುಲೈ ಹಾಗೂ ೩, ೧೦ ಮತ್ತು ೧೭ ಆಗಸ್ಟ್ ಈ ದಿನಗಳಂದು ಶ್ರಾವಣ ಸೋಮವಾರದ ವ್ರತವನ್ನು ಆಚರಿಸಲಾಗುತ್ತದೆ. ಆ ನಿಮಿತ್ತದಿಂದ…

ಶ್ರಾವಣ ಸೋಮವಾರದಂದು ಶಿವನ ದೇವಸ್ಥಾನಕ್ಕೆ ಹೋಗಿ  ಶಿವಲಿಂಗಕ್ಕೆ ಅಭಿಷೇಕ ಮಾಡುವ ಪದ್ಧತಿಯಿದೆ. ‘ಲಾಕ್‌ಡೌನ್ ಕಾರಣದಿಂದ ಮನೆಯಿಂದ ಹೊರಗೆ ಶಿವಾಲಯಕ್ಕೆ ಹೋಗಲು ಸಾಧ್ಯವಿಲ್ಲದವರು ‘ಆಪತ್‌ಧರ್ಮದ ಭಾಗವೆಂದು ಮನೆಯಲ್ಲಿಯೇ ಇದ್ದು, ಈ ವ್ರತವನ್ನು ಯಾವ ರೀತಿ ಆಚರಿಸಬೇಕು ಎನ್ನುವ ವಿಷಯದ ಲೇಖನದಲ್ಲಿ ಧರ್ಮಶಾಸ್ತ್ರಾಧಾರಿತ ವಿಶ್ಲೇಷಣೆಯನ್ನು ಮಾಡಲಾಗಿದೆ.

ಚಾತುರ್ಮಾಸ

ಶ್ರಾವಣ, ಭಾದ್ರಪದ, ಆಶ್ವಯುಜ ಮತ್ತು ಕಾರ್ತಿಕ ಈ ನಾಲ್ಕು ತಿಂಗಳುಗಳಲ್ಲಿ (ಚಾತುರ್ಮಾಸದಲ್ಲಿ) ಪೃಥ್ವಿಯ ಮೇಲೆ ಬರುವ ಲಹರಿಗಳಲ್ಲಿ ತಮೋಗುಣವು ಹೆಚ್ಚಿರುವ ಯಮಲಹರಿಗಳ ಪ್ರಮಾಣವು ಅಧಿಕವಾಗಿರುತ್ತದೆ. ಅವುಗಳನ್ನು ಎದುರಿಸಲು ಸಾತ್ತ್ವಿಕತೆಯನ್ನು ಹೆಚ್ಚಿಸುವುದು ಅವಶ್ಯಕವಾಗಿದೆ.