ಎಲ್ಲಾ ೧೫ ಪ್ರಕರಣಗಳು ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಹಿಂದೂ ಪಕ್ಷದಿಂದ ಆಗ್ರಹ
ವಾರಾಣಸಿ (ಉತ್ತರಪ್ರದೇಶ) – ಜ್ಞಾನವಾಪಿಗೆ ಸಂಬಂಧಿತ ಎಲ್ಲಾ ೧೫ ಮೊಕದ್ದಮೆಗಳನ್ನು ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಬೇಕು, ಅದರಿಂದ ಅದರ ವಿಚಾರಣೆ ಒಟ್ಟಿಗೆ ನಡೆಯುವುದು. ಎಂದು ಹಿಂದೂ ಪಕ್ಷವು ಆಗ್ರಹಿಸಿದ್ದರಿಂದ ಸರ್ವೋಚ್ಚ ನ್ಯಾಯಾಲಯವು ಮುಸಲ್ಮಾನ ಪಕ್ಷಕ್ಕೆ ನೋಟಿಸ್ ವಿಧಿಸಿದೆ. ನ್ಯಾಯಾಲಯವು ಮುಸಲ್ಮಾನ ಪಕ್ಷಕ್ಕೆ ಈ ಬಗ್ಗೆ ೨ ವಾರದಲ್ಲಿ ಉತ್ತರಿಸಲು ಹೇಳಿದೆ. ಜ್ಞಾನವಾಪಿಗೆ ಸಂಬಂಧಪಟ್ಟ ೯ ಮೊಕದ್ದಮೆಗಳು ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ಹಾಗೂ ೬ ಮೊಕದ್ದಮೆ ದಿವಾಣಿ ನ್ಯಾಯಾಲಯದಲ್ಲಿ ನಡೆಯುತ್ತಿವೆ. ಕೆಲವು ಪುನರ್ವಿಚಾರಣೆ ಅರ್ಜಿಗಳು ಜಿಲ್ಲಾ ನ್ಯಾಯಾಧೀಶರ ಮುಂದೆ ಇವೆ. ಹಾಗೂ ಜಿಲ್ಲಾ ನ್ಯಾಯಾಧೀಶರು ಕೂಡ ಮೂಲ ಮೊಕದ್ದಮೆಯ ಕುರಿತು ವಿಚಾರಣೆ ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪರಸ್ಪರ ವಿರೋಧಿ ಆದೇಶ ಬರುವ ಸಾಧ್ಯತೆ ಇದೆ, ಆದ್ದರಿಂದ ಎಲ್ಲಾ ಮೊಕದ್ದಮೆಗಳು ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಬೇಕು. ಉಚ್ಚ ನ್ಯಾಯಾಲಯದ ೩ ನ್ಯಾಯಮೂರ್ತಿಗಳ ಖಂಡಪೀಠದಿಂದ ಎಲ್ಲಾ ಪ್ರಕರಣಗಳ ವಿಚಾರಣೆ ನಡೆಸಿ ತೀರ್ಪು ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ಅರ್ಜಿದಾರರ ಪ್ರಕಾರ, ೧೫ ಪ್ರಕರಣಗಳಲ್ಲಿ ಕಾನೂನಿನ ಮಹತ್ವದ ಪ್ರಶ್ನೆಗಳು ಕೂಡ ಇವೆ, ಅದರ ತೀರ್ಪು ಉಚ್ಚ ನ್ಯಾಯಾಲಯವೇ ನೀಡಬೇಕು. ಈ ಪ್ರಶ್ನೆಗಳಲ್ಲಿ ಐತಿಹಾಸಿಕ ತಥ್ಯಗಳು, ಪುರಾತತ್ವ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳು, ಹಿಂದೂ ಮತ್ತು ಮುಸಲ್ಮಾನ ಕಾನೂನು ಮತ್ತು ಸಂವಿದಾನದ ಕಲಂ ‘೩೦೦ ಅ’ ದ ಅರ್ಥ, ಇವುಗಳಂತಹ ಪ್ರಶ್ನೆಗಳು ಕೂಡ ಒಳಗೊಂಡಿವೆ. ಆದ್ದರಿಂದ ಈ ಪ್ರಕರಣದ ವಿಚಾರಣೆ ಉಚ್ಚ ನ್ಯಾಯಾಲಯದಲ್ಲಿ ನಡೆಯಬೇಕು, ಎಂದು ಹೇಳಿಕೆಯಾಗಿದೆ.
ಜ್ಞಾನವಾಪಿಯ ೧೨ ನೆಲಮಾಳಿಗೆಗಳಲ್ಲಿನ ೮ ನೆಲಮಾಳಿಗೆಗಳ ಸಮೀಕ್ಷೆ ಇಲ್ಲಿಯವರೆಗೆ ನಡೆದಿಲ್ಲ ! – ನ್ಯಾಯವಾದಿ ಮದನ ಮೋಹನ ಯಾದವ
ಹಿಂದೂ ಪಕ್ಷದ ನ್ಯಾಯವಾದಿ ಮದನ ಮೋಹನ ಯಾದವ್ ಇವರು, ಹಿಂದೂಗಳಿಂದ ಈ ಪ್ರಕರಣ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿದೆ. ಪುರಾತತ್ವ ಇಲಾಖೆಯಿಂದ ವಜುಖಾನ (ನಮಾಜ್ ಮೊದಲು ಕೈ ಕಾಲು ತೊಳೆಯುವ ಜಾಗ) ಇಲ್ಲಿಯ ಶಿವಲಿಂಗದ ಸಮೀಕ್ಷೆ ಇಲ್ಲಿಯವರೆಗೂ ನಡೆಸಿಲ್ಲ. ಅದರಿಂದ, ಅದು ಶಿವಲಿಂಗವೋ ಅಥವಾ ಕಾರಂಜಿಯೋ ? ಎಂಬುದು ಸ್ಪಷ್ಟವಾಗಲಿದೆ. ಮುಸಲಮಾನ ಪಕ್ಷ ಇದು ಕಾರಂಜಿ ಎಂದು ದಾವೆ ಮಾಡುತ್ತಿದೆ. ಪುರಾತತ್ವ ಇಲಾಖೆಯಿಂದ ಜ್ಞಾನವಾಪಿಯ ೧೨ ನೆಲಮಾಳಿಗೆಯಲ್ಲಿನ ೮ ನೆಲಮಾಳಿಗೆಯಲ್ಲಿ ಸಮೀಕ್ಷೆ ನಡೆಸಿಲ್ಲ. ಇದರ ಜೊತೆಗೆ ಮುಖ್ಯ ಗುಮ್ಮಟದ ಕೆಳಗೆ ಇರುವ ಜ್ಯೋತಿರ್ಲಿಂಗದ ಸಮೀಕ್ಷೆ ಕೂಡ ನಡೆಸಿಲ್ಲ, ಎಂದು ಹೇಳಿದರು.
ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರು, ನಾವು ಮೇ ೧೬, ೨೦೨೨ ರಂದು, ತಥಾಕಥಿತ ವಜುಖಾನಾದಲ್ಲಿ ಒಂದು ಶಿವಲಿಂಗ ದೊರೆತಿದೆ ಎಂದು ದಾವೆ ಮಾಡಿದ್ದೆವು, ಆದರೆ ಮುಸಲ್ಮಾನ ಪಕ್ಷದವರು ಅದನ್ನು ನಿರಾಕರಿಸಿ ಅದು ಕಾರಂಜಿ ಎಂದು ಹೇಳಿದರು. ಇದನ್ನು ಗಮನಿಸುತ್ತಾ ಪುರಾತತ್ವ ಇಲಾಖೆಯಿಂದ ಸಮೀಕ್ಷೆಯನ್ನು ನಡೆಸಲು ಆಗ್ರಹಿಸಿದ್ದೇವೆ. ಈ ಪ್ರಕರಣದಲ್ಲಿ ನಾವು ಈಗ ಮುಸಲ್ಮಾನ ಪಕ್ಷಕ್ಕೆ ನೋಟಿಸ್ ಜಾರಿಗೊಳಿಸಿದ್ದೇವೆ ಎಂದು ಹೇಳಿದರು.