ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಾನೂನಿನ ಮೂಲಪಾಠವೂ ತಿಳಿದಿಲ್ಲ ! – ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಛೀಮಾರಿ

ಕರ್ನಾಟಕದ ಗೋವಿಂದರಾಜ ನಗರದ ಮಸೀದಿಯೊಂದರಲ್ಲಿ ನಮಾಜ್ ವೇಳೆ ಧ್ವನಿವರ್ಧಕದಿಂದ ನಿಗದಿತ ಡೆಸಿಬೆಲ್‌ಗಿಂತ ಹೆಚ್ಚು ಶಬ್ದ ಹೊರ ಹೊಮ್ಮುತ್ತಿರುವು ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸದ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಛೀಮಾರಿ ಹಾಕಿದೆ.

ಸಂಗಾತಿಯನ್ನು ಆರಿಸುವುದು ಯಾವುದೇ ಪ್ರಜ್ಞೆಯುಳ್ಳ ವ್ಯಕ್ತಿಯ ಮೂಲಭೂತ ಅಧಿಕಾರ ! – ಕರ್ನಾಟಕ ಉಚ್ಚ ನ್ಯಾಯಾಲಯ

ಸ್ವೇಚ್ಛೆಯಿಂದ ಸಂಗಾತಿಯನ್ನು ಆರಿಸುವುದು, ಯಾವುದೇ ಪ್ರಜ್ಞಾವಂತ ವ್ಯಕ್ತಿಯ ಮೂಲಭೂತ ಅಧಿಕಾರವಾಗಿದೆ. ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಈ ಅಧಿಕಾರವನ್ನು ನೀಡಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಒಂದು ಅರ್ಜಿಯನ್ನು ಆಲಿಸುವಾಗ ಹೇಳಿದೆ.

ಮಾಸ್ಕ್ ಹಾಕಿಕೊಳ್ಳದವರಿಗೆ ೫ ರಿಂದ ೧೫ ದಿನಗಳವರೆಗೆ ಕೋವಿಡ್ ಕೇಂದ್ರದಲ್ಲಿ ಕೆಲಸ ಮಾಡುವ ಶಿಕ್ಷೆ ನೀಡಿ ! – ಗುಜರಾತ ಉಚ್ಚ ನ್ಯಾಯಾಲಯ

ಕೊರೋನಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ಜನರಿಗೆ ಯಾವುದಾದರೊಂದು ಕೋವಿಡ್ ಕೇಂದ್ರದಲ್ಲಿ ಕನಿಷ್ಠ ೫ ರಿಂದ ಗರಿಷ್ಠ ೧೫ ದಿನಗಳವರೆಗೆ ಸೇವೆ ಸಲ್ಲಿಸುವ ಶಿಕ್ಷೆ ವಿಧಿಸಬೇಕು. ಅವರಿಂದ ದಿನಕ್ಕೆ ೪-೫ ಗಂಟೆಗಳ ಕಾಲ ಕೆಲಸ ಮಾಡಿಸಿಕೊಳ್ಳುವಂತೆ ಗುಜರಾತ ಉಚ್ಚನ್ಯಾಯಾಲಯ ಗುಜರಾತ್ ಸರಕಾರಕ್ಕೆ ಆದೇಶ ನೀಡಿದೆ.

ಬೆಂಗಳೂರಿನ ೨ ಮಸೀದಿಗಳಲ್ಲಿ ಧ್ವನಿವರ್ಧಕಗಳಿಂದ ಉಂಟಾಗುವ ಶಬ್ದಮಾಲಿನ್ಯ ತಡೆದ ಬೆಂಗಳೂರು ಉಚ್ಚನ್ಯಾಯಾಲಯದ ನ್ಯಾಯವಾದಿ ಜಿ. ಎಂ. ನಟರಾಜ!

ನ್ಯಾಯವಾದಿ ನಟರಾಜ ಹಾಗೂ ಅನೇಕ ವಕೀಲರ ಕಚೇರಿಗಳು ಮಲ್ಲೇಶ್ವರಂನಲ್ಲಿದೆ. ಅಲ್ಲಿಂದ ೧ ಕಿ.ಮೀ ದೂರದಲ್ಲಿ ೨ ಮಸೀದಿಗಳಿವೆ. ಈ ಮಸೀದಿಯಲ್ಲಿ ಧ್ವನಿವರ್ಧಕದಿಂದ ಬೆಳಗ್ಗೆ ೫.೩೦ ರಿಂದ ರಾತ್ರಿ ೮.೩೦ ರ ವರೆಗೆ ೫ ಸಲ ಆಜಾನ್ ನೀಡಲಾಗುತ್ತಿದ್ದು ಶಬ್ದ ಮಾಲಿನ್ಯ ಆಗುತ್ತಿತ್ತು.

ಶ್ರೀಕೃಷ್ಣ ಜನ್ಮಭೂಮಿಯಲ್ಲಿರುವ ಈದ್ಗಾ ಮಸೀದಿಯನ್ನು ಹಿಂದೂಗಳಿಗೆ ದೇವಾಲಯಕ್ಕಾಗಿ ನೀಡಬೇಕು ! – ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ

ಶ್ರೀಕೃಷ್ಣ ಜನ್ಮಭೂಮಿಯ ೧೩.೩೭ ಎಕರೆ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ವಕೀಲೆ ಮಹಕ ಮಾಹೇಶ್ವರಿ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಯಾವ ಸ್ಥಳದಲ್ಲಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆಯೋ, ಆ ಸ್ಥಳವನ್ನು ಹಿಂದೂಗಳಿಗೆ ನೀಡಬೇಕು

ಬಂಗಾಲದಲ್ಲಿ ದೀಪಾವಳಿಯಲ್ಲಿ ಪಟಾಕಿ ಹೊಡೆಯುವುದು ಹಾಗೂ ಮಾರಾಟ ಮಾಡಲು ನಿಷೇಧ ! – ಕೋಲಕಾತಾ ಉಚ್ಚ ನ್ಯಾಯಾಲಯ

ಕೋಲಕಾತಾ ಉಚ್ಚ ನ್ಯಾಯಾಲಯವು ಕೊರೋನಾದ ವಿಪತ್ತಿನ ಹಿನ್ನಲೆಯಲ್ಲಿ ರಾಜ್ಯದ ಶ್ರೀ ಮಹಾಕಾಳಿ ಪೂಜೆ, ಛಟ ಪೂಜೆ, ಗುರುನಾನಕ ಜಯಂತಿ ಹಾಗೂ ದೀಪಾವಳಿ ಇಂತಹ ಹಬ್ಬಗಳಲ್ಲಿ ಪಟಾಕಿಯನ್ನು ಹೊಡೆಯುವುದು ಅಥವಾ ಅದರ ಮಾರಾಟ ಮಾಡುವುದರ ಮೇಲೆ ನಿಷೇಧ ಹೇರಿದೆ.

ದೇವಸ್ಥಾನದ ಭೂಮಿಯನ್ನು ಧಾರ್ಮಿಕ ಕಾರ್ಯವನ್ನು ಹೊರತು ಪಡಿಸಿ ಇತರ ಯಾವುದಕ್ಕೂ ಬಳಸಬಾರದು ! – ಮದ್ರಾಸ ಉಚ್ಚ ನ್ಯಾಯಾಲಯ

ಮದ್ರಾಸ ಉಚ್ಚ ನ್ಯಾಯಾಲಯವು ಒಂದು ಖಟ್ಲೆಯ ಆಲಿಕೆಯ ಸಮಯದಲ್ಲಿ ರಾಜ್ಯ ಸರಕಾರಕ್ಕೆ, ಧಾರ್ಮಿಕ ಕಾರ್ಯಕ್ರಮವನ್ನು ಹೊರತು ಪಡಿಸಿ ಇತರ ಯಾವುದೇ ಕಾರ್ಯಕ್ರಮಗಳಿಗೆ ದೇವಸ್ಥಾನದ ಭೂಮಿಯನ್ನು ಬಳಸಬಾರದು, ತಮಿಳುನಾಡಿನ ದೇವಸ್ಥಾನಗಳು ಕೇವಲ ಪ್ರಾಚೀನ ಸಂಸ್ಕೃತಿಯ ಸಂಕೇತವಷ್ಟೇ ಆಗಿರದೇ ಅವು ಕಲೆ, ವಿಜ್ಞಾನ ಹಾಗೂ ಮೂರ್ತಿಕಲೆಯ ಕ್ಷೇತ್ರದಲ್ಲಿಯೂ ಪ್ರತಿಭೆಯ ಗೌರವದ ಹಾಗೂ ಜ್ಞಾನದ ಸಂಕೇತ ಹಾಗೂ ಪ್ರಮಾಣವಾಗಿದೆ, ಎಂದು ಹೇಳಿದೆ

ವಿಶ್ವದ ಅತಿ ಎತ್ತರದ ಯೇಸುಕ್ರಿಸ್ತನ ಮೂರ್ತಿಯ ಕಾಮಗಾರಿಗೆ ಕರ್ನಾಟಕ ಉಚ್ಚನ್ಯಾಯಾಲಯದಿಂದ ಸ್ಥಗಿತ

ಕರ್ನಾಟಕ ಉಚ್ಚನ್ಯಾಯಾಲಯವು ಬೆಂಗಳೂರಿನಿಂದ ೮೦ ಕಿ.ಮೀ ಅಂತರದಲ್ಲಿರುವ ಕಪಾಲಿಬೆಟ್ಟ ಗ್ರಾಮದಲ್ಲಿ ನಡೆಯುತ್ತಿದ್ದ ವಿಶ್ವದ ಅತಿ ಎತ್ತರದ ಯೇಸುಕ್ರಿಸ್ತನ ಮೂರ್ತಿಯ ನಿರ್ಮಿತಿಯ ಕಾರ್ಯಕ್ಕೆ ಸ್ಥಗಿತಿಯನ್ನು ನೀಡಿದೆ. ನ್ಯಾಯಾಲಯದ ಅನುಮತಿಯಿಲ್ಲದೆ ಈ ಗ್ರಾಮದಲ್ಲಿ ‘ಮೂರ್ತಿಯ ಕೆಲಸವನ್ನು ಪುನರಾರಂಭಿಸಬಾರದು’, ಎಂದೂ ನ್ಯಾಯಾಲಯವು ತಿಳಿಸಿದೆ.

ಜಗನಮೋಹನ್ ರೆಡ್ಡಿ, ಇಬ್ಬರು ಮಂತ್ರಿಗಳು, ದೇವಸ್ಥಾನಮ್‌ನ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ

ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಕ್ರೈಸ್ತ ಮುಖ್ಯಮಂತ್ರಿ ವೈ.ಎಸ್. ಜಗನಮೋಹನ ರೆಡ್ಡಿಯವರು ಸೆಪ್ಟೆಂಬರ್ ೨೩ ರಂದು ತಿರುಮಲ ತಿರುಪತಿಯಲ್ಲಿರುವ ವೆಂಕಟೇಶ್ವರನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ನಂತರ ಆಡಳಿತವು ಚಿಕ್ಕಬಳ್ಳಾಪುರದ ಬೆಟ್ಟದ ಮೇಲಿನ ಸರ್ಕಾರಿ ಭೂಮಿಯಲ್ಲಿ ಹಾಕಲಾಗಿದ್ದ ಅಕ್ರಮ ಶಿಲುಬೆ ಮತ್ತು ಯೇಸುವಿನ ಮೂರ್ತಿಯನ್ನು ತೆಗೆದುಹಾಕಿತು !

ಇಲ್ಲಿನ ಸೊಸೇಪಾಳ್ಯ ಬೆಟ್ಟದಲ್ಲಿಯ ಸರಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದ್ದ ಶಿಲುಬೆ ಮತ್ತು ಯೇಸುವಿನ ಬೃಹತ್ ಮೂರ್ತಿಯನ್ನು ಜಿಲ್ಲಾಡಳಿತ ತೆಗೆದುಹಾಕಿದೆ. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಕುರಿತು ಕರ್ನಾಟಕ ಉಚ್ಚನ್ಯಾಯಾಲಯವು ತೀರ್ಪು ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.