ಶಬರಿಮಲೆ ದೇವಸ್ಥಾನ ಪರಿಸರದಲ್ಲಿ ನಟ, ರಾಜಕೀಯ ಮುಖಂಡರು ಮುಂತಾದವರ ಛಾಯಾಚಿತ್ರಗಳನ್ನು ಕೊಂಡೊಯ್ಯುವ ಬಗ್ಗೆ ಕೇರಳ ಉಚ್ಚ ನ್ಯಾಯಾಲಯದ ಆಕ್ಷೇಪ

ತ್ರಾವಣಕೊರ ದೇವಸ್ವಂ ಬೋರ್ಡಿಗೆ ಗಮನ ನೀಡಲು ಆದೇಶ

ತಿರುವನಂತಪುರಂ (ಕೇರಳ) – ಶಬರಿಮಲೆ ದೇವಸ್ಥಾನದ ಯಾತ್ರಿಕರು ದೇವಸ್ಥಾನದ ಪರಿಸರದಲ್ಲಿ ಚಲನಚಿತ್ರ ನಟ, ರಾಜಕೀಯ ಮುಖಂಡರು ಮತ್ತು ಪ್ರತಿಷ್ಠಿತರ ಛಾಯಾಚಿತ್ರಗಳು ಇರುವ ಫಲಕಗಳನ್ನು ಕೊಂಡೊಯ್ಯುತ್ತಾರೆ. ಇದರ ಕಡೆ ಗಮನ ನೀಡಬೇಕೆಂದು ಕೇರಳ ಉಚ್ಚ ನ್ಯಾಯಾಲಯ ತ್ರಾವಣ ಕೋರ್ ದೇವಸ್ವಂ ಬೋರ್ಡಗೆ ಆದೇಶ ನೀಡಿದೆ. ನ್ಯಾಯಾಲಯವು ಆದೇಶದಲ್ಲಿ, “ದೇವಸ್ಥಾನದ ಪರಿಸರದಲ್ಲಿ ಭಕ್ತರು ಯೋಗ್ಯ ರೀತಿಯಲ್ಲಿ ಪೂಜೆ ಮಾಡುತ್ತಾರೆ ಅಲ್ಲವೇ, ಇದರ ಕಡೆಗೆ ದೇವಸ್ಥಾನದ ಆಡಳಿತದವರು ಗಮನ ನೀಡಬೇಕೆಂದು” ಹೇಳಿದೆ. ಈ ಪರಿಸರದಲ್ಲಿ ವಾದ್ಯ ನುಡಿಸುವುದರ ಬಗ್ಗೆ ಕೂಡ ನಿಷೇಧ ಹೇರಲು ನ್ಯಾಯಾಲಯ ಆದೇಶ ನೀಡಿದೆ.

ಸಂಪಾದಕೀಯ ನಿಲುವು

ಹಿಂದುಗಳಿಗೆ ಧರ್ಮ ಶಿಕ್ಷಣ ಇಲ್ಲದ್ದರಿಂದ ಅವರು ದೇವಸ್ಥಾನ ಪರಿಸರದಲ್ಲಿ ಈ ರೀತಿಯ ಕೃತಿಗಳನ್ನು ಮಾಡುತ್ತಾರೆ ! ಇದನ್ನು ತಡೆಯುವುದಕ್ಕಾಗಿ ಪ್ರತಿಯೊಬ್ಬ ಹಿಂದೂವಿಗೆ ಧರ್ಮ ಶಿಕ್ಷಣ ನೀಡಿ ಧರ್ಮಚರಣೆ ಕಲಿಸುವುದು ಅನಿವಾರ್ಯವಾಗಿದೆ !