Elections Results: ಉತ್ತರಪ್ರದೇಶದಲ್ಲಿ ೯ ರಲ್ಲಿ ೭ ಸ್ಥಾನಗಳಲ್ಲಿ ಭಾಜಪ ಮುನ್ನಡೆ

ಸೌಜನ್ಯ : India Today

ನವ ದೆಹಲಿ – ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೇಯ ಜೊತೆಗೆ ೧೫ ರಾಜ್ಯಗಳಲ್ಲಿನ ೪೬ ವಿಧಾನಸಭೆ ಹಾಗೂ ೨ ಲೋಕಸಭೆಯ ಸ್ಥಾನಕ್ಕಾಗಿ ಮತ ಎಣಿಕೆ ನಡೆಯುತ್ತಿದೆ. ಉತ್ತರ ಪ್ರದೇಶದ ವಿಧಾನ ಸಭೆಯ ೯ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದೆ. ಇದರ ಮತ ಎಣಿಕೆ ಕೂಡ ನವೆಂಬರ್ ೨೩ ರಂದು ನಡೆಯಿತು ಅದರಲ್ಲಿ ಭಾಜಪ ೭ ಸ್ಥಾನಗಳಲ್ಲಿ ಮುನ್ನಡೆಯುತ್ತಿದ್ದರೇ ೨ ಸ್ಥಾನದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಲೋಕಸಭೆಯಲ್ಲಿ ಉತ್ತರ ಪ್ರದೇಶದಲ್ಲಿ ಭಾಜಪ ಬಹುದೊಡ್ಡ ಸಂಖ್ಯೆಯ ಸ್ಥಾನಗಳನ್ನು ಕಳೆದುಕೊಂಡಿತ್ತು. ಅದರ ನಂತರ ನಡೆಯುವ ಈ ಉಪಚುನಾವಣೆ ಭಾಜಪಾಗೆ ಮಹತ್ವದ್ದಾಗಿತ್ತು. ಇದರಲ್ಲಿ ಚುನಾವಣೆಯ ಮೊದಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು ‘ಬಟೆಂಗೆ ತೋ ಕಟೆಂಗೆ’ ಯ (ಬೇರೆ ಬೇರೆ ಆದರೆ ನಾಶವಾಗುವಿರಿ) ಘೋಷಣೆ ನೀಡಿದ್ದರು. ಈ ಘೋಷಣೆಯ ಯೋಗ್ಯ ಪರಿಣಾಮ ಆಗಿರುವುದನ್ನು ಈ ಚುನಾವಣೆಯಿಂದ ಕಂಡು ಬರುತ್ತಿದೆ.

ವಾಯನಾಡದಲ್ಲಿ ಪ್ರಿಯಾಂಕಾ ವಾಡ್ರಾ ಮೂರುವರೆ ಲಕ್ಷ ಮತಗಳಿಂದ ಮುನ್ನಡೆ !

ಕೇರಳದ ವಾಯನಾಡ್ ಇಲ್ಲಿಯ ಲೋಕಸಭಾ ಮತದಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ವಾಡ್ರ ಮೂರುವರೆ ಲಕ್ಷ ಕ್ಕಿಂತಲೂ ಹೆಚ್ಚಿನ ಮತಗಳಿಂದ ಮುನ್ನಡೆಯುತ್ತಿದ್ದಾರೆ. ಆದ್ದರಿಂದ ಅವರ ವಿಜಯ ಖಚಿತ ಎಂದು ನಂಬಲಾಗಿದೆ. ಇಲ್ಲಿ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಸತ್ಯನ ಮೂಕೇರಿ ಎರಡನೆ ಹಾಗೂ ಭಾಜಪದ ನವ್ಯ ಹರಿದಾಸ್ ಮೂರನೆಯ ಸ್ಥಾನದಲ್ಲಿ ಇರುವರು. ರಾಹುಲ್ ಗಾಂಧಿ ಇವರು ರಾಯಬರೆಲಿ (ಉತ್ತರ ಪ್ರದೇಶ) ಮತ್ತು ವಾಯನಾಡ್ಡ್ ಈ ೨ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಮತ್ತು ಅವರು ಎರಡೂ ಸ್ಥಾನಗಳಿಂದ ಜಯಗಳಿಸಿದ್ದರು. ಅವರಿಗೆ ಒಂದು ಸ್ಥಾನ ಬಿಡಬೇಕಿತ್ತು. ಆದ್ದರಿಂದ ಅವರು ವಾಯನಾಡ್‌ನ ಸ್ಥಾನ ಬಿಟ್ಟಿದ್ದರು.