ಪಾಕಿಸ್ತಾನಿ ಮೂಲದ ಅಮೆರಿಕೀ ಉದ್ಯಮಿ ಸಾಜಿದ್ ತರಾರ್ ಇವರ ಹೇಳಿಕೆ
ವಾಷಿಂಗ್ಟನ್ (ಅಮೇರಿಕಾ) – ಇಲ್ಲಿ ಆಯೋಜಿಸಿರುವ ‘ಗ್ಲೋಬಲ್ ಇಕ್ವಿಟಿ ಆಲಯನ್ಸ್ ಸಮಿಟ್’ ನಲ್ಲಿ ಪಾಕಿಸ್ತಾನಿ ಉದ್ಯಮಿ ಸಾಜಿದ ತರಾರ್ ಇವರು ಭಾರತ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವರನ್ನು ಶ್ಲಾಘಿಸಿದರು. ‘ಪಾಕಿಸ್ತಾನಕ್ಕೂ ಮೋದಿ ಇವರಂತಹ ರಾಷ್ಟ್ರವಾದಿ ನಾಯಕನ ಅಗತ್ಯವಿದೆ’, ಎಂದು ಅವರು ಹೇಳಿದರು. ಈ ಸಮ್ಮೇಳನದ ಆಯೋಜನೆಯನ್ನು ವಾಷಿಂಗ್ಟನ್ ಡೆವ್ಹೆಟೆಸ್ಟ್ ಯುನಿವರ್ಸಿಟಿಯ ಸಹಯೋಗದೊಂದಿಗೆ ಹೊಸದಾಗಿ ಆರಂಭವಾಗಿರುವ ‘ಅಸೋಸಿಯೇಷನ್ ಆಫ್ ಅಮೇರಿಕನ್ ಇಂಡಿಯನ್ ಮೈನಾರಿಟಿಸ್’ ಮೂಲಕ ಮಾಡಲಾಗಿತ್ತು. ಸಾಜಿದ ತರಾರ್ ಮಾತು ಮುಂದುವರೆಸಿ, ನಾನು ಈ ಸಂಸ್ಥೆಗೆ ಬೆಂಬಲ ನೀಡುವುದಕ್ಕಾಗಿ ಬಂದಿದ್ದೇನೆ; ಕಾರಣ ಅವರು ಅಲ್ಪಸಂಖ್ಯಾತರ ಪ್ರಾತಿನಿಧ್ಯತೆ ಮಾಡುತ್ತಿದೆ. ಅಲ್ಪಸಂಖ್ಯಾತರು ಎಂದರೆ ಹಿಂದೂ, ಮುಸಲ್ಮಾನ್, ಸಿಖ್, ಕ್ರೈಸ್ತ ಮುಂತಾದವರು. ಇಲ್ಲಿ ಬಹಳಷ್ಟು ಭಾರತೀಯರ ನೇತೃತ್ವ ಇದೆ. ಭಾರತ ಜಗತ್ತಿನಲ್ಲಿನ ೫ ನೇ ಎಲ್ಲಕ್ಕಿಂತ ದೊಡ್ಡ ಆರ್ಥಿಕ ವ್ಯವಸ್ಥೆ ಆಗಿದೆ. ಇಷ್ಟೇ ಅಲ್ಲದೆ ಅದು ೩ ನೇ ಎಲ್ಲಕ್ಕಿಂತ ದೊಡ್ಡ ಆರ್ಥಿಕ ವ್ಯವಸ್ಥೆ ಆಗುವತ್ತಾ ವೇಗವಾಗಿ ಮುಂದೆ ಸಾಗುತ್ತಿದೆ. ಇದರ ಯಶೋಗಾಥೆ ಕೇಳುವುದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.
ಸಂಪಾದಕೀಯ ನಿಲುವುಪಾಕಿಸ್ತಾನದಲ್ಲಿ ಮೋದಿ ಇವರಂತಹ ನಾಯಕ ಏಕೆ ಜನಿಸುವುದಿಲ್ಲ, ಇದರ ಅಭ್ಯಾಸ ತರಾರ್ ಇವರು ಮಾಡುವರೆ ? |