|
ಸಂಭಲ (ಉತ್ತರಪ್ರದೇಶ) – ದಿವಾಣಿ ನ್ಯಾಯಾಲಯದ ಆದೇಶದ ಮೇರೆಗೆ ಇಲ್ಲಿಯ ಶಾಹಿ ಜಮಾ ಮಸೀದಿಯ ಸಮೀಕ್ಷೆಯು ನವೆಂಬರ್ ೨೪ ರಂದು ನಡೆಸುತ್ತಿರುವಾಗ ಮತಾಂಧ ಮುಸಲ್ಮಾನರಿಂದ ಹಿಂಸಾಚಾರ ನಡೆದಿದೆ. ಆ ಸಮಯದಲ್ಲಿ ಕಲ್ಲು ತೂರಾಟ ಜೊತೆಗೆ ಬೆಂಕಿ ಅವಘಡ ಕೂಡ ನಡೆಸಿದ್ದಾರೆ. ಇದರಲ್ಲಿ ೨ ಮೃತಪಟ್ಟಿದ್ದು, ೨೦ ಪೊಲೀಸರು ಗಾಯಗೊಂಡಿದ್ದಾರೆ. ಈ ಸಮಯದಲ್ಲಿ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರುವುದಕ್ಕಾಗಿ ಮೊದಲು ಅಶ್ರುವಾಯು ಪ್ರಯೋಗಿಸಿದರು ಮತ್ತು ನಂತರ ಲಾಟಿಚಾರ್ಜ್ ಮಾಡಿ ಮತಾಂಧ ಮುಸಲ್ಮಾನರನ್ನು ಚದುರಿಸಿದರು. ಪ್ರಸ್ತುತ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತು ಮಾಡಲಾಗಿದೆ.
೧. ಬೆಳಗ್ಗೆ ೬ ಗಂಟೆಗೆ ಹಿಂದೂ ಪಕ್ಷದ ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರಕಾರಿ ನ್ಯಾಯವಾದಿ ಪ್ರಿನ್ಸ್ ಶರ್ಮಾ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಪಾನಸಿಯ, ಪೊಲೀಸ ಅಧಿಕಾರಿ ಕೃಷ್ಣ ಬಿಷ್ಣೊಯಿ ಸಹಿತ ಸಮೀಕ್ಷಾ ತಂಡ ಮಸೀದಿಗೆ ತಲುಪಿತು. ಆ ಸಮಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪೊಲೀಸ ಮತ್ತು ಸ್ಟ್ರೈಕ್ ಆಕ್ಷನ್ ಟೀಮ್ ಇವರು ಕೂಡ ಉಪಸ್ಥಿತರಿದ್ದರು. ಇದರ ಮಾಹಿತಿ ದೊರೆಯುತ್ತಲೇ ನೆರೆಯ ಮತಾಂಧ ಮುಸಲ್ಮಾನರು ಸಮೀಕ್ಷೆಗೆ ವಿರೋಧಿಸಲು ಆರಂಭಿಸಿದರು.’ಭಾನುವಾರ ರಜೆಯ ದಿನ ಮತ್ತು ಅದು ಕೂಡ ಬೆಳಿಗ್ಗೆ ಎಂದು ಸಮೀಕ್ಷೆ ನಡೆಸಲಾಗುವುದಿಲ್ಲ ?’, ಎಂದು ಅವರು ಪ್ರಶ್ನಿಸಿದರು. ಅದರ ನಂತರ ಅಲ್ಲಿ ಸಾವಿರಾರು ಮುಸಲ್ಮಾನರು ಸೇರಿ ತಂಡಕ್ಕೆ ವಿರೋಧಿಸಲು ಆರಂಭಿಸಿದರು.
೨. ಮುಸಲ್ಮಾನರ ಗುಂಪು ಮಸೀದಿ ಒಳಗೆ ಹೋಗಲು ಪ್ರಯತ್ನಿಸಿದರು. ಅದಕ್ಕೆ ಪೊಲೀಸರು ತಡೆವೊಡ್ಡಿದರು. ಮಸೀದಿಯಲ್ಲಿ ಸಮೀಕ್ಷಾ ತಂಡದಿಂದ ಸಮೀಕ್ಷೆ ಆರಂಭವಾಗಿತ್ತು. ಅದರ ನಂತರ ಮುಸಲ್ಮಾನರು ಕಲ್ಲುತೂರಾಟ ನಡೆಸಿದರು. ಅನಿರೀಕ್ಷಿತವಾಗಿ ನಡೆದಿರುವ ಕಲ್ಲು ತೂರಾಟದಿಂದ ಪೊಲೀಸರು ಓಡಿ ಹೋಗಬೇಕಾಯಿತು. ಅದರ ನಂತರ ಪೊಲೀಸರು ಹೆಚ್ಚುವರಿ ಪೊಲೀಸ ಪಡೆಯನ್ನು ತರಿಸಿ ಲಾಠಿ ಚಾರ್ಜ್ ಮಾಡಿದರು ಹಾಗೂ ಅಶ್ರುವಾಯು ಪ್ರಯೋಗಿಸಿದರು.
೩. ದಿವಾಣಿ ನ್ಯಾಯಾಲಯವು ೫ ದಿನಗಳ ಹಿಂದೆ ಮಸೀದಿಯ ಸಮೀಕ್ಷೆ ನಡೆಸಿ ೭ ದಿನಗಳಲ್ಲಿ ವರದಿ ಪ್ರಸ್ತುತ ಪಡಿಸಬೇಕೆಂದು ಕೂಡ ಆದೇಶದಲ್ಲಿ ಹೇಳಿತ್ತು. ನವಂಬರ್ ೨೯ ರಂದು ಅದರ ಕುರಿತು ಆಲಿಕೆ ನಡೆಯಲಿದೆ. ಈ ಮಸೀದಿ ಪ್ರಾಚೀನ ಹರಿಹರ ಮಂದಿರ ಎಂದು ಹಿಂದೂಗಳ ಹೇಳಿಕೆ ಆಗಿದೆ. ಬಾಬರನ ಕಾಲದಲ್ಲಿ ಅಂದರೆ ೧೫೨೯ ರಲ್ಲಿ ದೇವಸ್ಥಾನವನ್ನು ಮಸೀದಿಯಾಗಿ ರೂಪಾಂತರಿಸಲಾಯಿತು ಎಂದು ಹಿಂದೂ ಪಕ್ಷ ಹೇಳಿದೆ. ಇದರಿಂದ ಮಸೀದಿಯ ಸಮೀಕ್ಷೆ ನಡೆಸಲಾಗುತ್ತಿದೆ. ನ್ಯಾಯಾಲಯವು ಆದೇಶ ನೀಡಿದ ನಂತರ ಕೇವಲ ೨ ಗಂಟೆಯಲ್ಲಿ ತಂಡದಿಂದ ಛಾಯಚಿತ್ರ ಮತ್ತು ಚಿತ್ರೀಕರಣ ನಡೆಸುತ್ತಾ ಮಸೀದಿಯ ಸಮೀಕ್ಷೆ ನಡೆಸಿತ್ತು. ಅದರ ನಂತರ ಉಳಿದಿರುವ ಸಮೀಕ್ಷೆ ನಡೆಸಲಾಗುತ್ತಿತ್ತು.
ಹಿಂಸಾಚಾರ ನಡೆಸುವವರ ಮೇಲೆ ಜೀವನಪೂರ್ತಿ ನೆನಪಿಡುವಂತೆ ಕ್ರಮ ಕೈಗೊಳ್ಳುವೆವು ! – ಪೊಲೀಸ ಅಧಿಕ್ಷಕ
ಸಂಭಲದ ಪೊಲೀಸ ಅಧಿಕ್ಷಕ ಕೃಷ್ಣ ಕುಮಾರ್ ಬಿಷ್ಣೊಯಿ ಇವರು, ನ್ಯಾಯಾಲಯದ ಆದೇಶದ ನಂತರ ಜಾಮಾ ಮಸೀದಿಯ ಸಮೀಕ್ಷೆ ನಡೆಸಲಾಗಿತ್ತು. ಮಸೀದಿಯ ಒಳಗೆ ಶಾಂತಿಯಿಂದ ಸಮೀಕ್ಷೆ ನಡೆಯುತ್ತಿತ್ತು. ಗುಂಪಿನಲ್ಲಿನ ಕೆಲವರು ಅನಿರೀಕ್ಷಿತ ಕಲ್ಲು ತೂರಾಟ ಆರಂಭಿಸಿದರು. ಪೊಲೀಸರು ತಿಳಿಸಿ ಹೇಳುವ ಪ್ರಯತ್ನ ಮಾಡುತ್ತಿರುವಾಗ ಅವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಪೊಲೀಸರಿಂದ ಸೌಮ್ಯವಾಗಿ ಗುಂಪನ್ನು ಚದರಿಸುವ ಪ್ರಯತ್ನ ಮಾಡಿದರು. ಯಾರು ಕಾನೂನು ಕೈಗೆತ್ತಿಕೊಂಡರೋ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಯಾವ ಜನರನ್ನು ವಶಕ್ಕೆ ಪಡೆಯಲಾಗಿದೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಗುಂಪಿಗೆ ಯಾರು ಪ್ರಚೋದನೆ ನೀಡಿದ್ದಾರೆ ಅದು ಸಿಸಿಟಿವಿಯ ಮೂಲಕ ಗುರುತಿಸಿ, ಅವರ ಮೇಲೆ ಜೀವನಪೂರ್ತಿ ನೆನಪಿಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಮೀಕ್ಷ ತಂಡವನ್ನು ಭದ್ರತೆಯಿಂದ ಹೊರತರಲಾಯಿತು !
ಬೆಳಗ್ಗೆ ಸುಮಾರು ಎರಡೂವರೆ ಗಂಟೆ ಕಥಿತ ಮಸೀದಿಯಲ್ಲಿ ಸಮೀಕ್ಷಾ ತಂಡ ಸಮೀಕ್ಷೆ ಪೂರ್ಣಗೊಳಿಸಿದೆ. ಅದರ ನಂತರ ಪೊಲೀಸರು ಹಿಂದಿನ ಬಾಗಿಲಿನಿಂದ ಪೂರ್ಣ ಭದ್ರತೆಯಲ್ಲಿ ತಂಡವನ್ನು ಹೊರ ಕರೆದುಕೊಂಡು ಹೋದರು.
ಇದು ದೇಶದ ಮೇಲೆ ನಡೆದಿರುವ ದಾಳಿ ! – ಕೇಂದ್ರ ಸಚಿವ ಗಿರಿ ರಾಜಸಿಂಹ
ಕೇಂದ್ರ ಸಚಿವ ಗಿರಿ ರಾಜಸಿಂಹ ಇವರು ಈ ಘಟನೆಯ ನಂತರ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ, ಈಗ ಜಿಹಾದಿಗಳು ದೇಶದಲ್ಲಿ ಶರಿಯಾ ಕಾನೂನು ಜಾರಿಗೊಳಿಸಬೇಕೆಂದಿದ್ದಾರೆ, ಅವರು ಭಾರತದಲ್ಲಿನ ಪ್ರಜಾಪ್ರಭುತ್ವ ನಾಶಗೊಳಿಸಿ ಶರಿಯಾಗಿ ಕಾನೂನು ಜಾರಿಗೊಳಿಸುವರು. ಕಾನೂನಿನ ಪ್ರಕಾರ ಸಮೀಕ್ಷೆ ತಂಡ ಅಲ್ಲಿ ಹೋಗಿರುವಾಗ ಅವರ ಮೇಲೆ ದಾಳಿ ನಡೆಸುವ ಪ್ರಯತ್ನ ಎಂದರೆ ಕಾನೂನಿನ ಮೇಲೆ ನಡೆಸಲಾದ ದಾಳಿ ಆಗಿದೆ. ಇದು ಪ್ರಜಾಪ್ರಭುತ್ವದ ಮೇಲೆಯೂ ದಾಳಿ ಆಗಿದೆ. ದೇಶ ಈ ದಾಳಿ ಸಹಿಸುವುದಿಲ್ಲ ಎಂದು ಹೇಳಿದರು.
ಸಮಾಜವಾದಿ ಪಕ್ಷದ ಸಂಸದ ಅಖಿಲೇಶ್ ಯಾದವ್ ಇವರ ಪ್ರಶ್ನೆ
‘ಪುನಃ ಸಮೀಕ್ಷೆ ಏಕೆ ನಡೆಸಲಾಯಿತು ?'(ಅಂತೆ) – ಅಖಿಲೇಶ್ ಯಾದವ್
ಸಮೀಕ್ಷೆ ನಡೆಸುವ ಆದೇಶ ನ್ಯಾಯಾಲಯ ನೀಡಿದ್ದು ಮತ್ತು ಅದರ ಕಾರ್ಯಾಚರಣೆ ನಡೆಸಲಾಗುತ್ತಿತ್ತು, ಇದು ಸ್ಪಷ್ಟವಾಗಿರುವಾಗ ಈ ರೀತಿಯ ಪ್ರಶ್ನೆ ಕೇಳಿ ಅಖಿಲೇಶ ಯಾದವ ಮತಾಂಧ ಮುಸಲ್ಮಾನರ ಹಿಂಸಾಚಾರವನ್ನು ಮರೆಮಾಚುತ್ತಿದ್ದಾರೆ, ಇದನ್ನು ತಿಳಿದುಕೊಳ್ಳಿ ! ಇಂತಹ ಪಕ್ಷಗಳಿಂದಲೇ ಹಿಂದೂ ಈ ದೇಶದಲ್ಲಿ ಅಸುರಕ್ಷಿತ ಹಾಗೂ ಮತಾಂಧರು ಉದ್ಧಟರಾಗಿದ್ದಾರೆ.
ಸಮಾಜವಾದಿ ಪಕ್ಷದ ಸಂಸದ ಅಖಿಲೇಶ ಯಾದವ್ ಇವರು, ಸಮೀಕ್ಷೆ ನಡೆದಿತ್ತು, ಹಾಗಾದರೆ ಅದು ಮತ್ತೊಮ್ಮೆ ಮತ್ತು ಬೆಳಗ್ಗಿನ ಜಾವ ಏಕೆ ನಡೆಸಲಾಯಿತು ? ಇನ್ನೊಂದು ಪಕ್ಷದ ಮಾತು ಕೇಳಲು ಅಲ್ಲಿ ಯಾರು ಇರಲಿಲ್ಲ. ಚುನಾವಣೆ ಬಿಟ್ಟು ಯಾವುದರ ಚರ್ಚೆ ನಡೆಸಬೇಕು ಇದು ಭಾಜಪ ನಿಶ್ಚಯಿಸಬಹುದು; ಆದ್ದರಿಂದ ಇದು ಮಾಡಲಾಗಿದೆ. ಇದೇನೆಲ್ಲ ನಡೆದಿದೆ ಅದು ಚುನಾವಣೆಯಲ್ಲಿನ ಅಪ್ರಾಮಾಣಿಕತನದ ಚರ್ಚೆ ಆಗಬಾರದು ಎಂದು ಭಾಜಪ ಮತ್ತು ಆಡಳಿತ ಇವರು ಸೇರಿ ಮಾಡಿದ್ದಾರೆ’, ಎಂದು ಹೇಳಿದರು.
ಸಂಪಾದಕೀಯ ನಿಲುವು
|