ಜಮ್ಮು (ಜಮ್ಮು – ಕಾಶ್ಮೀರ್) – ಜಮ್ಮು ಅಭಿವೃದ್ಧಿ ಪ್ರಾಧಿಕಾರವು ನವೆಂಬರ್ ೨೦ ರಂದು ನಗರದಲ್ಲಿನ ಮುಠಿ ಕ್ಯಾಂಪ್ ಹತ್ತಿರದ ನಿರಾಶ್ರಿತ ಕಾಶ್ಮೀರಿ ಹಿಂದುಗಳ ಅಂಗಡಿಗಳನ್ನು ನೆಲೆಸಮ ಮಾಡಿದ್ದರಿಂದ ಇಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪ್ರಾಧಿಕಾರವು ಯಾವುದೇ ಮುನ್ಸೂಚನೆ ನೀಡದೆ ಅಂಗಡಿಗಳನ್ನು ನೆಲೆಸಮ ಮಾಡಿದೆ ಎಂದು ಹೇಳಿದರು. ಈ ಅಂಗಡಿಗಳು ೩ ದಶಕಗಳ ಹಿಂದೆಯೇ ನಿರಾಶ್ರಿತ ಕಾಶ್ಮೀರಿ ಹಿಂದೂಗಳು ಕಟ್ಟಿಕೊಂಡಿದ್ದರು.
೧. ಪ್ರಾಧಿಕಾರದ ಪ್ರಕಾರ, ಈ ಅಂಗಡಿಗಳು ನಮ್ಮ ಜಾಗದಲ್ಲಿ ಕಟ್ಟಿತ್ತು. ಆಯುಕ್ತ ಅರವಿಂದ ಕಾರವಾನಿ ಇವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ, ಅವರಿಗಾಗಿ ಪರಿಸರದಲ್ಲಿ ನೂತನ ಅಂಗಡಿಗಳು ಕಟ್ಟಲಾಗುವುದು. ಈ ಅಂಗಡಿಗಳು ಪ್ರಾಧಿಕಾರಣದ ಜಾಗದಲ್ಲಿ ಇತ್ತು. ಮುಠಿ ಕ್ಯಾಂಪ್ ಫೇಸ್ ೨ ರಲ್ಲಿ ವ್ಯಾಪಾರಿ ಸಂಕೀರ್ಣ ಕಟ್ಟುವುದಕ್ಕಾಗಿ ‘ರಾಹತ’ ಈ ಸಂಸ್ಥೆಯಿಂದ ಸುತ್ತೋಲೆ ಹೊರಡಿಸಿದೆ. ಆದಷ್ಟು ಬೇಗನೆ ೧೦ ಅಂಗಡಿಗಳು ಕಟ್ಟಲಾಗುವುದು ಮತ್ತು ಅವುಗಳನ್ನು ಅಂಗಡಿದಾರರಿಗೆ ಹಂಚಲಾಗುವುದು ಎಂದು ಆಶ್ವಾಸನೆ ನೀಡಿದೆ.
೨. ಅಂಗಡಿ ಮಾಲೀಕ ಕುಲದೀಪ ಕಿಸರು ಇವರು, ನಮಗೆ ಇನ್ನಷ್ಟು ಒಳ್ಳೆಯ ಸೌಲಭ್ಯ ಮತ್ತು ಬದುಕಲು ಆರ್ಥಿಕ ಸಹಾಯ ಮಾಡಿಕೊಡುವ ಬದಲು ಸರಕಾರ ಬುಲ್ಡೋಜರ್ ನಿಂದ ನಮ್ಮ ಅಂಗಡಿಗಳನ್ನು ಧ್ವಂಸಗೊಳಿಸಿ ನಮ್ಮ ಹೊಟ್ಟೆಗೆ ಒದ್ದಿದ್ದಾರೆ, ಎಂದು ಹೇಳಿದರು.
೩. ಅಂಗಡಿ ಮಾಲಿಕ ಜವಾಲಾಲ್ ಭಟ್ ಇವರು, ಈ ಅಂಗಡಿಯಿಂದ ಸಿಗುವ ಆದಾಯದಿಂದಲೇ ಸಂಪೂರ್ಣವಾಗಿ ಅವಲಂಬಿಸಿರುವುದರಿಂದ ಕುಟುಂಬದ ಪೋಷಣೆ ಹೇಗೆ ಮಾಡುವುದು ? ನಾವು ಉಪರಾಜ್ಯಪಾಲ ಮತ್ತು ಮುಖ್ಯಮಂತ್ರಿ ಇವರಿಗೆ ಹಸ್ತಕ್ಷೇಪ ಮಾಡಿ ನಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು ವಿನಂತಿಸುತ್ತೇವೆ, ಎಂದು ಹೇಳಿದರು.
೪. ಜವಾಹರಲಾಲ ಎಂಬ ಇನ್ನೊಬ್ಬ ಅಂಗಡಿಯವರು ಈ ವಿದ್ವಂಸಕ್ಕೆ ‘ಗುಂಡಾಗಿರಿ’ ಎಂದು ಹೇಳಿದ್ದಾರೆ. ಅಂಗಡಿಗಳು ನೆಲಸಮ ಮಾಡುವ ಮೊದಲು ನಮಗೆ ಯಾವುದೇ ನೋಟಿಸ್ ನೀಡಿಲ್ಲ, ಎಂದು ಅವರು ಹೇಳಿದರು.
🚨 10 Hindu-owned shops in Jammu were bulldozed without any prior notice! 🚧🏢
Despite the Supreme Court’s directive that no construction should be demolished without prior notice, the Jammu administration’s actions clearly indicate that Hindus are being deliberately targeted… pic.twitter.com/rmLWRWI3rD
— Sanatan Prabhat (@SanatanPrabhat) November 22, 2024
ಸಂಪಾದಕೀಯ ನಿಲುವು
|