Maulana Arshad Madani criticizes PM Modi : ನಾಳೆ ಮೋದಿಯವರು ‘ನಮಾಜ ಮತ್ತು ಜಕಾತ ಮುಸಲ್ಮಾನರ ಸಂಪ್ರದಾಯವಲ್ಲ’ ಎಂದು ಹೇಳಿ ಅದನ್ನೂ ನಿಲ್ಲಿಸಬಹುದಂತೆ!

‘ವಕ್ಫ್’ ಬಗ್ಗೆ ಸಂವಿಧಾನದಲ್ಲಿ ಯಾವುದೇ ಉಲ್ಲೇಖವಿಲ್ಲ, ಎಂಬ ಪ್ರಧಾನಿ ಮೋದಿಯವರ ಹೇಳಿಕೆ ಕುರಿತು ಉಲೇಮಾ-ಎ-ಹಿಂದ್ ನ ಪ್ರಮುಖರಾದ ಮೌಲಾನಾ ಅರ್ಶದ ಮದನಿಯವರಿಂದ ಟೀಕೆ

ಉಲೇಮಾ-ಎ-ಹಿಂದ್ ನ ಪ್ರಮುಖರಾದ ಮೌಲಾನಾ ಅರ್ಶದ ಮದನಿ

(ಜಕಾತ ಎಂದರೆ ಮುಸಲ್ಮಾನರು ತಮ್ಮ ಆದಾಯದ ಒಂದು ನಿರ್ದಿಷ್ಟ ಮೊತ್ತವನ್ನು ಧರ್ಮಕ್ಕಾಗಿ ದಾನ ಮಾಡುವುದು)

ಪಾಟಲಿಪುತ್ರ (ಬಿಹಾರ) – ನಮ್ಮ ದೇಶದಲ್ಲಿ ಹಿಂದೂಗಳು ಮತ್ತು ಮುಸಲ್ಮಾನರ ಆಚೆಗೆ ಯೋಚಿಸುವ ಅನೇಕ ಜನರಿದ್ದಾರೆ. ನಾವು ವಕ್ಫ್ ಸುಧಾರಣಾ ಮಸೂದೆಯನ್ನು ಧಾರ್ಮಿಕ ವಿಷಯಗಳಲ್ಲಿನ ಹಸ್ತಕ್ಷೇಪ ಎಂದು ಪರಿಗಣಿಸುತ್ತೇವೆ. ವಕ್ಫ್ ನಮ್ಮ ಧಾರ್ಮಿಕ ಅಧಿಕಾರವಾಗಿದೆ. ಸಂವಿಧಾನದಲ್ಲಿ ವಕ್ಫ್ ಎಂಬ ಹೆಸರಿನ ಯಾವುದೇ ಸಂಗತಿಯಿಲ್ಲ ಎಂದು ಮೋದಿ ಹೇಳುತ್ತಾರೆ. ನನಗೆ ಅತ್ಯಂತ ಆಶ್ಚರ್ಯವೆನಿಸಿತು. ಅಲ್ಲಾ ಹೇಳಿದ್ದು ಸರಿಯಾಗಿದೆ. ಮಹಮ್ಮದ ಪೈಗಂಬರರು ಹೇಳಿರುವುದು ಸಂಪ್ರದಾಯವಾಗಿದೆ. ಮೋದಿಯವರು ಅದನ್ನು ಹೇಗೆ ತಪ್ಪು ಎಂದು ಭಾವಿಸುತ್ತಾರೆ? ಎಂಬುದರ ಬಗ್ಗೆ ಆಶ್ಚರ್ಯವಾಗುತ್ತದೆ. ನಾಳೆಗೆ ಅವರು `ಜಕಾತ ಮತ್ತು ನಮಾಜಗಳು ಸಂಪ್ರದಾಯವೇ ಅಲ್ಲ’ ಎಂದು ಹೇಳಬಹುದು, ಅನಂತರ ಅವುಗಳನ್ನೂ ನಿಲ್ಲಿಸಬಹುದು, ಎಂದು ಉಲೇಮಾ-ಎ-ಹಿಂದನ ಮುಖ್ಯ ಮೌಲಾನಾ ಅರ್ಷದ ಮದನಿಯವರು ಪ್ರಧಾನಿ ಮೋದಿಯವರ ಹೇಳಿಕೆಯನ್ನು ಟೀಕಿಸಿದರು. ಇಲ್ಲಿ ಈ ಸಂಘಟನೆಯ ಪರಿಷತ್ತು ನಡೆದಿರುವಾಗ ಮದನಿಯವರು ಈ ಹೇಳಿಕೆಯನ್ನು ನೀಡಿದರು. ಪ್ರಧಾನಿ ಮೋದಿಯವರು ನವೆಂಬರ 23 ರಂದು ದೆಹಲಿಯಲ್ಲಿನ ಭಾಜಪ ಮುಖ್ಯಾಲಯದಲ್ಲಿ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡುವಾಗ ಸಂವಿಧಾನದಲ್ಲಿ ವಕ್ಫ ಬಗ್ಗೆ ಉಲ್ಲೇಖವಿಲ್ಲವೆಂದು ಹೇಳಿದ್ದರು.

ಮೌಲಾನಾ ಮದನಿಯವರು ಮುಂದುವರಿದು,

1. ಯಾರು ಯಾವುದೇ ಧರ್ಮದವರಾಗಿರಲಿ, ಇದು ನಮ್ಮ ದೇಶವಾಗಿದೆ. 5 ಮಕ್ಕಳಿದ್ದರೂ, ಅವರಿಗೆ ಒಂದೇ ತಂದೆ ಮತ್ತು ತಾಯಿ ಇರುತ್ತಾರೆ. ಮೋದಿಜಿಯವರು ಈ ರೀತಿಯಾಗಿ ಉದ್ಧಟವಾಗಿ ಮಾತನಾಡಬಾರದು. ಅವರು ದೇಶದ ಪ್ರಧಾನಿಯಾಗಿದ್ದಾರೆ. ಇಂತಹವರಿಂದ ದೇಶದಲ್ಲಿ ಮುಸಲ್ಮಾನರ ವಿರುದ್ಧ ದ್ವೇಷ ನಿರ್ಮಾಣವಾಗುತ್ತದೆ. (ಪ್ರಧಾನಿಯಾಗಿರುವಾಗ `ದೇಶದ ಸಂಪನ್ಮೂಲಗಳ ಮೇಲೆ ಮೊದಲ ಅಧಿಕಾರ ಮುಸಲ್ಮಾನರದ್ದಾಗಿದೆ’ ಎಂದು ಡಾ. ಮನಮೋಹನ ಸಿಂಗರವರು ಹೇಳಿದ್ದರು. ಅದು ಮುಸಲ್ಮಾನರಿಗೆ ಒಪ್ಪಿಗೆಯಾಗಿದ್ದು ಹೇಗೆ ? ಎಂಬುದನ್ನು ಮದನಿಯವರು ಉತ್ತರಿಸಬೇಕು ! – ಸಂಪಾದಕರು)

2. ಜಮಿಯತ ಉಲಮಾ-ಎ-ಹಿಂದ ಪ್ರೀತಿ ಮತ್ತು ಪೈಗಂಬರರಿಗಾಗಿ ಬಲಿದಾನ ನೀಡುತ್ತ ಬಂದಿದೆ. ನಾವು ದೇಶದಲ್ಲಿ ಶಾಂತಿ ಕಾಪಾಡಲು ಕೆಲಸ ಮಾಡುತ್ತಿದ್ದೇವೆ. (ಇದು ದೇಶದಲ್ಲಿ ಇದುವರೆಗಿನ ದೊಡ್ಡ ಹಾಸ್ಯವೆಂದು ಹೇಳಬೇಕಾಗುವುದು ! ದೇಶದಲ್ಲಿ ಅತಿ ಹೆಚ್ಚು ಹಿಂಸಾಚಾರ, ಭಯೋತ್ಪಾದನೆ ಮತ್ತು ಅಶಾಂತಿಯನ್ನು ಯಾರು ಮಾಡುತ್ತಾ ಬಂದಿದ್ದಾರೆ ಮತ್ತು ಮಾಡುತ್ತಿದ್ದಾರೆ ಎಂಬುದು ಜಗತ್ತಿಗೇ ತಿಳಿದಿದೆ! – ಸಂಪಾದಕರು)

3. ದೇಶವನ್ನು ಸ್ವತಂತ್ರಗೊಳಿಸಲು ನಮ್ಮ ಪೂರ್ವಜರು ಬಲಿದಾನ ಮಾಡಿದ್ದಾರೆ. ನಾವು ಈ ದೇಶದ ಸಂಪ್ರದಾಯವನ್ನು ನಿರ್ಮಿಸಿದ್ದೇವೆ. (ಅವರು ದೇಶವನ್ನು ಸ್ವತಂತ್ರಗೊಳಿಸಲು ಅಲ್ಲ, ಮುಸಲ್ಮಾನರ ರಾಜ್ಯವನ್ನು ಮರುಸ್ಥಾಪಿಸಲು ಹೋರಾಡಿದ್ದರು, ಇದು ಇತಿಹಾಸವಾಗಿದೆ ಮತ್ತು ಇಂದಿಗೂ ಅವರು ಈ ಕಾರಣಕ್ಕಾಗಿಯೇ ಜಿಹಾದ್ ಮಾಡುತ್ತಿದ್ದಾರೆ ! – ಸಂಪಾದಕರು)

4. ದೇಶದ ನೀತಿನಿಯಮವನ್ನು ಹಿಂದೂಗಳೇ ನಿರ್ಮಿಸಿದ್ದಾರೆ ಎಂದು ಯಾರಿಗಾದರೂ ಅನಿಸುತ್ತಿದ್ದರೆ, ಅವರಿಗೆ ಜಗತ್ತಿನ ಬಗ್ಗೆ ಯಾವುದೇ ಅರಿವಿಲ್ಲ. ಈ ದೇಶದೊಂದಿಗಿನ ನಮ್ಮ ಸಂಬಂಧವು 145 ವರ್ಷಗಳಷ್ಟು ಹಳೆಯದಾಗಿದೆ. ಇದನ್ನು ನಿರಾಕರಿಸಲು ಯಾರಿಗೂ ಸಾಧ್ಯವಿಲ್ಲ.

5. ಹಿಮಂತ ಬಿಸ್ವಾ ಸರಮಾರನ್ನು ಟೀಕಿಸುತ್ತಾ, ಮೌಲಾನಾ ಅರ್ಶದ ಮದನಿ ಮಾತನಾಡಿ, ಅಸ್ಸಾಂನ ಮುಖ್ಯಮಂತ್ರಿ ಜಾರ್ಖಂಡಿನಲ್ಲಿ ಹಗಲು ರಾತ್ರಿ ಠಿಕಾಣಿ ಹೂಡಿದ್ದರು. ಆದರೆ ಅಲ್ಲಿನ ಜನರು ಅವರ ಮುಖಕ್ಕೆ ಕಪ್ಪು ಬಳಿದರು. (ಇಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಭಾಜಪ ಸೋತಿದೆ.) ಝಾರ್ಖಂಡನ ಹಿಂದೂಗಳು ಮತ್ತು ಮುಸ್ಲಿಮರು ಇಬ್ಬರೂ ನಾಗರೀಕರಾಗಿದ್ದಾರೆ. ಅವರು ದ್ವೇಷದ ರಾಜಕಾರಣದಲ್ಲಿ ಮುಳುಗಿದ್ದಾರೆ. (ಹಾಗಿದ್ದರೆ, ಮಹಾರಾಷ್ಟ್ರದಲ್ಲಿ ಹಿಂದೂಗಳು `ವೋಟ ಜಿಹಾದ’ ಸೋಲಿಸಿದ್ದಾರೆ. ಈ ಬಗ್ಗೆ ಮದನಿ ಏಕೆ ಮಾತನಾಡುವುದಿಲ್ಲ?- ಸಂಪಾದಕರು)

5. ಒಬ್ಬ ವ್ಯಕ್ತಿಯು ತಪ್ಪು ಮಾಡಿದರೆ, ಅವನ ಶಿಕ್ಷೆಯನ್ನು ಇಡೀ ಕುಟುಂಬ ಅನುಭವಿಸಬೇಕಾಗುತ್ತದೆ. (ಒಬ್ಬ ವ್ಯಕ್ತಿ ಕಳ್ಳತನ ಮಾಡಿದರೆ, ದರೋಡೆ ಮಾಡಿದರೆ, ಹಗರಣ ಮಾಡಿದರೆ, ಆ ಹಣದ ಲಾಭವನ್ನು ಅವನ ಮನೆಯ ಜನರು ಪಡೆಯುತ್ತಾರೆ; ಹೀಗಿರುವಾಗ ಅವರಿಗೂ ಅದರ ಶಿಕ್ಷೆಯಾಗುತ್ತಿದ್ದರೆ, ಅದರಲ್ಲಿ ತಪ್ಪೇನಿದೆ ?- ಸಂಪಾದಕರು) ಅಲ್ಲಾನು ನಮ್ಮ ಅಂಶಗಳನ್ನು ಒಪ್ಪಿದ್ದಾನೆ. ಈಗ ಯಾರಾದರೂ ನಮ್ಮ ಮನೆಯ ಮೇಲೆ ಬುಲ್ಡೋಜರ ನಡೆಸಿ ತೋರಿಸಲಿ. (ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಕಡೆಗಣಿಸಿ ಕಾಶ್ಮೀರದಲ್ಲಿ ಹಿಂದೂಗಳ ಅಂಗಡಿಗಳನ್ನು ತೆರೆವುಗೊಳಿಸಲಾಯಿತು. ಅದರ ಬಗ್ಗೆ ಮದನಿ ಏಕೆ ಮಾತನಾಡುವುದಿಲ್ಲ ? – ಸಂಪಾದಕರು) ಸರ್ವೋಚ್ಚ ನ್ಯಾಯಾಲಯದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರು ಮುಸ್ಲಿಮರಾಗಿರದೇ, ಹಿಂದೂಗಳಾಗಿದ್ದರು. ಸರ್ವೋಚ್ಚ ನ್ಯಾಯಾಲಯದ ತೀರ್ಪಿನಿಂದ ಕೆಲವರ ಮನಸ್ಸಿನಲ್ಲಿ ಗೊಂದಲ ಮೂಡಿದೆ. ನಾವು ಆಗಾಗ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿ ನ್ಯಾಯ ಪಡೆದಿದ್ದೇವೆ.

ಕಾಂಗ್ರೆಸ್ಸಿನ ಗುರಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವುದಾಗಿರಲಿಲ್ಲ !

ಮೌಲಾನಾ ಮದನಿಯವರು ಮಾತನಾಡುತ್ತ, ಕಾಂಗ್ರೆಸ್ ಹುಟ್ಟುವ ಮುನ್ನವೇ ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವುದು ಕಾಂಗ್ರೆಸ್ಸಿನ ಗುರಿಯಾಗಿರಲಿಲ್ಲ. ಬ್ರಿಟೀಷ ಸರಕಾರ ಮತ್ತು ಜನರ ನಡುವೆ ಸಮನ್ವಯ ನಿರ್ಮಾಣವಾಗಬೇಕೆಂದು ಕಾಂಗ್ರೆಸ್ಸಿನ ಸ್ಥಾಪನೆಯಾಗಿತ್ತು, ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಪ್ರಧಾನಿ ಮೋದಿಯವರು ಸಂವಿಧಾನದಲ್ಲಿ ಏನು ಬರೆದಿದೆಯೋ, ಅದನ್ನೇ ಹೇಳಿದ್ದಾರೆ. ಇಲ್ಲಿಯವರೆಗೆ ಮುಸಲ್ಮಾನರು ಮತ್ತು ಢೋಂಗಿ ಜಾತ್ಯತೀತವಾದಿ ರಾಜಕೀಯ ಪಕ್ಷಗಳು ಸಂವಿಧಾನದ ಹೆಸರಿನಡಿಯಲ್ಲಿ ಹಿಂದೂಗಳನ್ನು ದೂರ ತಳ್ಳುವುದು ಹಾಗೂ ಮುಸಲ್ಮಾನರನ್ನು ಓಲೈಸುವ ಕೆಲಸ ಮಾಡುತ್ತ ಬಂದಿದ್ದಾರೆ. ಅವರಿಗೆ ಈ ಹೇಳಿಕೆಯಿಂದ ಮೆಣಸಿನಕಾಯಿ ತುರುಕಿದಂತಾಗಿದ್ದರಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬುದು ಗಮನಕ್ಕೆ ಬರುತ್ತಿದೆ.
  • ಪ್ರಧಾನಿ ಮೋದಿಯವರು ವಕ್ಫ ಕಾನೂನಿನಲ್ಲಿ ಸುಧಾರಣೆಯನ್ನು ಮಾಡುವುದರ ಬದಲು ಅದನ್ನು ರದ್ದುಗೊಳಿಸಬೇಕು ಎಂದು ದೇಶದ ಜನತೆಗೆ ಅನಿಸುತ್ತದೆ !
  • ಕಾಂಗ್ರೆಸ್ಸಿಗೆ ಮುಸಲ್ಮಾನರ ಕಪಾಳಮೋಕ್ಷ ! ಮುಸಲ್ಮಾನರನ್ನು ಓಲೈಸುವ ಕಾಂಗ್ರೆಸ್ಸಿಗೆ ಇದು ಸ್ವೀಕಾರಾರ್ಹವೇ ? ಈ ಬಗ್ಗೆ ಅದು ಬಾಯಿ ತೆರೆಯುವುದೇ?