ತಮಿಳುನಾಡಿನ ಕಾರ್ತಿಕಸ್ವಾಮಿ ಮಂದಿರ ಪ್ರಕರಣದಲ್ಲಿ ಮದ್ರಾಸ ಉಚ್ಚ ನ್ಯಾಯಾಲಯದ ಮದುರೈ ವಿಭಾಗೀಯ ಪೀಠದ ನಿರ್ಣಯ !

ಮದ್ರಾಸ ಉಚ್ಚ ನ್ಯಾಯಾಲಯ

೧. ಕಾರ್ತಿಕಸ್ವಾಮಿ ಮಂದಿರದಲ್ಲಿನ ಸ್ಕಂದಷಷ್ಠಿ ಉತ್ಸವದ ಕಾಲದಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ಪೂಜೆ ಮಾಡುವ ಸಲುವಾಗಿ ಮಂದಿರದಲ್ಲಿ ಉಳಿದುಕೊಳ್ಳಲು ಅನುಮತಿಯನ್ನು ಕೇಳಿದ ಭಕ್ತರ ವಿನಂತಿಯನ್ನು ನಿರಾಕರಿಸುವುದು

‘ಆರ್. ಸಿಧರಂಗಥನ್ ಎಂಬ ಭಕ್ತರು ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಒಂದು ಅರ್ಜಿಯನ್ನು ದಾಖಲಿಸಿದರು. ಈ ಅರ್ಜಿಯ ಆಲಿಕೆಯು ಮದುರೈ ವಿಭಾಗೀಯ ಪೀಠದ ದ್ವಿಸದಸ್ಯರ ಪೀಠದ ಮುಂದೆ ನಡೆಯಿತು. ಈ ಅರ್ಜಿಯಲ್ಲಿ ಅವರು ತುತುಕುಡಿಯ ಜಿಲ್ಲಾಧಿಕಾರಿ ಹಾಗೂ ಚೆನ್ನೈಯ ‘ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ದೇಣಿಗೆ ವಿಭಾಗ’ದ (ಎಚ್.ಆರ್.ಎಂಡ್.ಸಿ.ಇ.) ಆಯುಕ್ತರನ್ನು ಪ್ರತಿವಾದಿಯನ್ನಾಗಿ ಮಾಡಿದರು. ಅವರು ತಿರುಚೆಂದೂರು, ಜಿಲ್ಲೆ ತುತುಕುಡಿ, ತಮಿಳುನಾಡಿನ ಸುಬ್ರಹ್ಮಣ್ಯಮ್ (ಕಾರ್ತಿಕಸ್ವಾಮಿ) ಮಂದಿರದಲ್ಲಿ ‘ಸ್ಕಂದಷಷ್ಠಿ ಉತ್ಸವದ ಕಾಲದಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ಪೂಜೆ ಮಾಡಲು ಅವರಿಗೆ ೬ ದಿನಗಳ ವರೆಗೆ ಅಲ್ಲಿ ಉಳಿಯಲು ಅನುಮತಿ ನೀಡಬೇಕು’, ಎಂದು ಥುಥೂ ಕುಡಿಯ ಜಿಲ್ಲಾಧಿಕಾರಿ ಹಾಗೂ ಹಿಂದೂ ಧಾರ್ಮಿಕ ಹಾಗೂ ಧರ್ಮದಾಯ ದೇಣಿಗೆ ವಿಭಾಗದ ಆಯುಕ್ತರಲ್ಲಿ ವಿನಂತಿಸಿದ್ದರು; ಆದರೆ ಅವರ ವಿನಂತಿಯ ಅರ್ಜಿಯನ್ನು ತಳ್ಳಿಹಾಕಲಾಯಿತು.

೨. ೩ ಸಂತಮಹಾತ್ಮರಿಂದ ನಿರ್ಮಿತ ಕಾರ್ತಿಕಸ್ವಾಮಿ ಮಂದಿರ

ಇಲ್ಲಿ ಕಾರ್ತಿಕಸ್ವಾಮಿಯ ನಿವಾಸವಿರುವುದರಿಂದ ಈ ಮಂದಿರವನ್ನು ಪವಿತ್ರವೆಂದು ತಿಳಿಯಲಾಗುತ್ತದೆ. ಕಾರ್ತಿಕಸ್ವಾಮಿ ಮಂದಿರ (ಲಾರ್ಡ್ ಮುರುಗನ್ ಸ್ವಾಮಿ) ಬಂಗಾಲದ ಉಪಸಾಗರದ ಸಮೀಪ ಹಾಗೂ ಕನ್ಯಾಕುಮಾರಿ ನಗರದಿಂದ ೭೦ ಕಿ.ಮೀ. ದೂರದಲ್ಲಿ ಥಿರೂಥನ್ನಿ ಪರ್ವತದ ಮೇಲಿದೆ. ಶ್ರೀ ದೇಸಿಕಾಮೂರ್ತಿ ಸ್ವಾಮಿ ತಿರುವದೂಥೂರೈ ಮಠ ಇವರು ಅದನ್ನು ಕಟ್ಟಿದ್ದಾರೆ. ಕೆಲವರ ಅಭಿಪ್ರಾಯದಂತೆ ಈ ಮಂದಿರವನ್ನು ೩ ಋಷಿಗಳು ಅಥವಾ ಸಂತರು ಕಟ್ಟಿದ್ದಾರೆ. ಕಾರ್ತಿಕಸ್ವಾಮಿಗಳು ಇಲ್ಲಿ ವಾಸವಾಗಿದ್ದರಿಂದ ಈ ಮಂದಿರವನ್ನು ಪವಿತ್ರವೆಂದು ತಿಳಿಯಲಾಗುತ್ತದೆ. ಈ ನಿರ್ಮಾಣಕಾರ್ಯವನ್ನು ಮಾಡಲು ಅವರಿಗೆ ೭೨ ವರ್ಷಗಳು ತಗಲಿದವು. ಭಾರತದಾದ್ಯಂತ ಕಾರ್ತಿಕ ಸ್ವಾಮಿಯ ೬ ಮಂದಿರಗಳಿವೆ. ಅವುಗಳಲ್ಲಿ ಇದು ಎರಡನೆಯ ಮಂದಿರವಾಗಿದೆ. ತಮಿಳುನಾಡಿನಲ್ಲಿ ಇದು ನಾಲ್ಕನೆ ‘ಐ.ಎಸ್.ಒ.’ (ಅಂತರರಾಷ್ಟ್ರೀಯ ಮಾನ್ಯತೆಯ ಸಂಘಟನೆ) ಮಾನ್ಯತೆಯ ಮಂದಿರವಾಗಿದೆ. ಅದಕ್ಕೆ ೩೬೫ ಮೆಟ್ಟಿಲುಗಳಿವೆ. ಕೆಲವು ಭಕ್ತರು ಆಂಗ್ಲ ಪಂಚಾಂಗದೊಂದಿಗೆ ಇದನ್ನು ಜೋಡಿಸುತ್ತಾರೆ.

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೩. ಕಾರ್ತಿಕಸ್ವಾಮಿ ಮಂದಿರದ ಬಗ್ಗೆ ಮದುರೈ ನ್ಯಾಯಾಲಯವು ಮಾಡಿದ ಸ್ತುತಿ !

ನ್ಯಾಯಾಲಯವು ಭಕ್ತರ ರಿಟ್ ಅರ್ಜಿಯ ನಿರ್ಣಯವನ್ನು ನೀಡಿದರೂ ನ್ಯಾಯಾಧೀಶರು ತಮ್ಮ ತೀರ್ಪುಪತ್ರದಲ್ಲಿ ಕಾರ್ತಿಕ ಸ್ವಾಮಿ ಮಂದಿರವನ್ನು ಬಾಯ್ತುಂಬಾ ಹೊಗಳಿದರು. ಅವರು ಈ ಮಂದಿರದ ವಿಷಯದಲ್ಲಿ ಮುಂದಿನಂತೆ ಹೇಳಿದರು, “ಈ ಮಂದಿರ ಕೇವಲ ಪೂಜೆ ಹಾಗೂ ಪ್ರಾರ್ಥನೆ ಮಾಡುವ ಸ್ಥಾನವಾಗಿರದೆ ಅದು ಮೂರ್ತಿಯ ಶಿಲ್ಪಕಲೆ, ಬಣ್ಣ-ಚಿತ್ರಕಲೆ, ಮೂರ್ತಿಕಲೆ, ಭಿತ್ತಿಚಿತ್ರಕಲೆ ಹಾಗೂ ಸಂಗೀತಕಲೆಯನ್ನು  ವಂಶ ಪಾರಂಪರ್ಯವಾಗಿ ಜೋಪಾನ ಮಾಡುವ ಹಾಗೂ ಈ ಕಲೆಯನ್ನು ಪ್ರೋತ್ಸಾಹಿಸುವ ಸ್ಥಳವಾಗಿದೆ. ತಮಿಳು ನಾಡು ರಾಜ್ಯವು ಪುರಾತನ, ಭವ್ಯ ಹಾಗೂ ಭಕ್ತರನ್ನು ಉಲ್ಲಸಿತಗೊಳಿಸುವ ಸ್ಥಳವಾಗಿದೆ. ತಮಿಳುನಾಡು ರಾಜ್ಯದಲ್ಲಿ ಪುರಾತನ, ಭವ್ಯ ಹಾಗೂ ಭಕ್ತರನ್ನು ಉಲ್ಲಸಿತಗೊಳಿಸುವ ಮಂದಿರಗಳು ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತವೆ. ಅವುಗಳಿಂದ ಹಿಂದೂ ಸಂಸ್ಕೃತಿ ಹಾಗೂ ಹಿಂದೂ ಆಡಳಿತದವರ ಭವ್ಯತೆಯು ಕಂಡುಬರುತ್ತದೆ. ಈ ಮಂದಿರಗಳ ಮೇಲೆ ಅನೇಕ ಬಾರಿ ಮ್ಲೇಂಚ್ಛರ ಮತ್ತು ಕ್ರೈಸ್ತರಿಂದ ಆಕ್ರಮಣವಾಗಿದೆ. ಆದರೂ ಈ ಮಂದಿರಗಳು ಸಮರ್ಥವಾಗಿ ಉಳಿದುಕೊಂಡಿವೆ.”

೪. ಕಾರ್ತಿಕಸ್ವಾಮಿ ಮಂದಿರದಲ್ಲಿ ಆಚರಿಸಲ್ಪಡುವ ಸ್ಕಂದಷಷ್ಠಿ ಉತ್ಸವ

ಈ ಉತ್ಸವವನ್ನು ವರ್ಷಕ್ಕೊಮ್ಮೆ ೬ ದಿನಗಳ ‘ಸುರಸಂಹಾರ ಉತ್ಸವ’ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಕಾರ್ತಿಕಸ್ವಾಮಿಯು ರಾಕ್ಷಸರೊಂದಿಗೆ ೬ ದಿನ ಹೋರಾಡಿ ಯುದ್ಧವನ್ನು ಗೆದ್ದಿದ್ದರು. ಇದರ ಸ್ಮರಣೆಗಾಗಿ ಈ ಉತ್ಸವವನ್ನು ಆಚರಿಸಲಾಗುತ್ತದೆ. ಈ ಉತ್ಸವವು ಆಂಗ್ಲ ಪಂಚಾಂಗಕ್ಕನುಸಾರ ಅಕ್ಟೋಬರ ಮತ್ತು ನವೆಂಬರ ತಿಂಗಳಲ್ಲಿ ಬರುತ್ತದೆ ಹಾಗೂ ಕಾರ್ತಿಕ ಹುಣ್ಣಿಮೆಯಂದು ಕೂಡ ಆಚರಿಸಲಾಗುತ್ತದೆ. ಈ ಉತ್ಸವವನ್ನು ಕಾರ್ತಿಕ ಮಾಸದ ಕಾರ್ತಿಕ ಶುಕ್ಲ ಪಾಡ್ಯದಿಂದ ಷಷ್ಠಿ, ಅಂದರೆ ೨೫ ರಿಂದ ೩೦ ಅಕ್ಟೋಬರ್ ೨೦೨೨ ಈ ದಿನಗಳಲ್ಲಿಯೂ ಆಚರಿಸಲಾಗುತ್ತದೆ. ಈ ಉತ್ಸವದಲ್ಲಿ ಧಾರ್ಮಿಕ ಉಪಕ್ರಮಗಳನ್ನು ಆಚರಿಸಲಾಗುತ್ತದೆ. ಈ ಮಂದಿರದಲ್ಲಿ ಪ್ರಾರ್ಥನೆ ಅಥವಾ ಸ್ತೋತ್ರಗಳನ್ನು ಹೇಳಲು ಹಾಗೂ ಜಾನಪದ ಅಥವಾ ಲೋಕವಿದ್ಯೆ, ನೃತ್ಯ, ನಾಟಕಗಳು, ಸಾರ್ವಜನಿಕ ವೈದಿಕ ಚರ್ಚೆಗಳನ್ನು ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಹಿಂದೂ ಮಂದಿರಗಳು ಮನುಷ್ಯನಿಗೆ ಆಚಾರ-ವಿಚಾರಗಳನ್ನು ನೀಡುತ್ತವೆ. ಅವರಲ್ಲಿನ ಜನ್ಮಜಾತ ಕಲಾಗುಣಗಳಿಗೆ ಅನುವು ಮಾಡಿಕೊಟ್ಟಿವೆ. ಈ ೬ ದಿನಗಳಲ್ಲಿ ಸಾವಿರಾರು ಭಕ್ತರು ದರ್ಶನಕ್ಕಾಗಿ ಬರುತ್ತಾರೆ. ಆಡಳಿತ ಅಥವಾ ನ್ಯಾಯಾಲಯಗಳ ಅಭಿಪ್ರಾಯದಲ್ಲಿ ‘ಯಾವುದಾದರೂ ಧಾರ್ಮಿಕ ಕಾರ್ಯಕ್ರಮಕ್ಕೆ ನಿರ್ಬಂಧ ಹೇರುವುದರಿಂದ ಇತರ ಉಪಕ್ರಮಗಳಿಗೆ ಪರಿಣಾಮವಾಗುವುದಿಲ್ಲ. ಭಕ್ತರ ಜನಸಂದಣಿಯನ್ನು ಗಮನದಲ್ಲಿಟ್ಟು ಆಡಳಿತವು ಅವರಿಗೆ ಮುಖ್ಯ ಗರ್ಭಗುಡಿಗೆ ಪ್ರವೇಶವನ್ನು ನಿರಾಕರಿಸಿತು. ಭಕ್ತರು ತಮ್ಮ ಶ್ರದ್ಧೆಗನುಸಾರ ೬ ದಿನ ಉಪವಾಸ ಮಾಡುತ್ತಾರೆ. ಹೋಮ-ಹವನಗಳಿಂದ ಮಂದಿರದಲ್ಲಿನ ವಾಸ್ತುಶಿಲ್ಪಕ್ಕೆ ಆಪಾಯವಾಗುತ್ತದೆ’, ಎಂಬುದು ಆಡಳಿತದವರ ಅಭಿಪ್ರಾಯವಾಗಿದೆ.

೫. ‘ಭಕ್ತರಿಗೆ ಧಾರ್ಮಿಕ ಸ್ವಾತಂತ್ರ್ಯವಿದ್ದರೂ, ಮಂದಿರದ ಸುವ್ಯವಸ್ಥೆಗಾಗಿ ನಿಯಮಗಳು ಆವಶ್ಯಕವಾಗಿರುತ್ತದೆ’, ಎಂದು ಉಚ್ಚ ನ್ಯಾಯಾಲಯ ಹೇಳಿದೆ

ಅರ್ಜಿದಾರ ಭಕ್ತರ ಅಭಿಪ್ರಾಯದಲ್ಲಿ ‘ಸಂವಿಧಾನದ ಕಲಮ್ ೨೫ ಮತ್ತು ೨೬ ಕ್ಕನುಸಾರ ಅವರಿಗೆ ಕಾರ್ತಿಕಸ್ವಾಮಿಯ ಭಕ್ತಿ ಮಾಡುವ ಮತ್ತು ಆ ಅವಧಿಯಲ್ಲಿ ರೂಢಿಗನುಸಾರ ಆಧ್ಯಾತ್ಮಿಕ ಕಾರ್ಯಕ್ರಮವನ್ನು ಮಾಡುವ ಮೂಲಭೂತ ಅಧಿಕಾರವಿದೆ. ಆದ್ದರಿಂದ ಆಡಳಿತ ಅದಕ್ಕೆ ನಿರ್ಬಂಧ ಹೇರಲು ಸಾಧ್ಯವಿಲ್ಲ’, ಎಂದಿತು. ಅದಕ್ಕಾಗಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಲಾಗಿತ್ತು. ‘ಆಡಳಿತದವರು ಈ ಅಧಿಕಾರವನ್ನು ಸ್ವೀಕರಿಸುತ್ತಾರೆ; ಆದರೆ ಸುರಕ್ಷಿತತೆ ಹಾಗೂ ಮಂದಿರದ ಪಾವಿತ್ರ್ಯವನ್ನು ಕಾಪಾಡಲು ಅದಕ್ಕೆ ನಿರ್ಬಂಧ ಹೇರುವ ಅಧಿಕಾರ ಆಡಳಿತಕ್ಕಿದೆ. ತಮಿಳುನಾಡು ಸರಕಾರ ‘ತಮಿಳುನಾಡು ಟೆಂಪಲ್ ಎಂಟ್ರೀ ಆಥೋರೈಸೇಶನ್ ಏಕ್ಟ್, ೧೯೪೭’ ರ ಕಲಮ್ ೪ ಕ್ಕನುಸಾರ ಇಂತಹ ನಿಯಮಾವಳಿಗಳನ್ನು ಅನ್ವಯಗೊಳಿಸಿದೆ. ಆದರೂ ಇಂತಹ ಬಂಧನಗಳು ಕೇವಲ ಹಿಂದೂ ಧರ್ಮದವರಿಗೆ ಮತ್ತು ಹಿಂದೂ ಮಂದಿರಗಳಿಗೆ ಮಾತ್ರ ಹೇರಲು ಸಾಧ್ಯವಿಲ್ಲ, ಎಂದು ಕಲಮ್ ೪ ಸ್ಪಷ್ಟವಾಗಿ ಹೇಳುತ್ತದೆ.

ಕಲಮ್ ೫ ಕ್ಕನುಸಾರ ಮಂದಿರದ ಪಾವಿತ್ರ್ಯ ಹಾಗೂ ಸ್ವಚ್ಛತೆಯನ್ನು ಭಂಗಗೊಳಿಸುವ ತಂಬಾಕು ಮತ್ತು ಸಿಗರೇಟ್‌ಗಳ ಸೇವನೆಗೆ ನಿರ್ಬಂಧ ಹೇರಲಾಗಿದೆ. ಕಲಮ್ ೬ಕ್ಕನುಸಾರ, ಮಂದಿರದಲ್ಲಿನ ಪೂಜೆ ಧಾರ್ಮಿಕ ಕಾರ್ಯಕ್ರಮಗಳಿಗೆ ಬಾಧೆಯುಂಟಾಗುವ ಕೃತ್ಯಗಳನ್ನು ಮಾಡಲು ಸಾಧ್ಯವಿಲ್ಲ. ಯಾವ ರೂಢಿ-ಪರಂಪರೆಗಳು ಮಂದಿರಗಳಲ್ಲಿ ಈ ಹಿಂದೆ ಇರಲಿಲ್ಲವೊ, ಅವುಗಳ ಅಟ್ಟಹಾಸ ಮಾಡಲು ಸಾಧ್ಯವಿಲ್ಲ. ಇವೆಲ್ಲ ನಿಯಮಗಳು ಭಕ್ತರು ಮತ್ತು ಆಡಳಿತದ ಪರವಾಗಿ ಸಮ ಪ್ರಮಾಣದಲ್ಲಿದೆ; ಆದರೆ ಅದರಲ್ಲಿ ತಾರತಮ್ಯವನ್ನು ತೋರಿಸುವುದು ಆವಶ್ಯಕವಾಗಿದೆ. ಯಾವುದಕ್ಕೆ ಭಕ್ತರು ತಮ್ಮ ಅಧಿಕಾರವೆಂದು ಹೇಳುತ್ತಾರೊ, ಆ ಕಾರ್ಯಕ್ರಮಗಳು ಯೋಗ್ಯ ರೀತಿಯಲ್ಲಿ ನಡೆಯಲು ಕೆಲವು ನಿಯಮಗಳನ್ನು ಅನ್ವಯಗೊಳಿಸುವುದು, ಆಡಳಿತದ ಕರ್ತವ್ಯವಾಗಿದೆ’, ಎಂದು ನ್ಯಾಯಾಲಯ ಪ್ರತಿಪಾದನೆ ಮಾಡಿತ್ತು.

ಅದಕ್ಕಾಗಿ ನ್ಯಾಯಾಲಯವು ೧೯೫೨ ರ ‘ನರಹರಿ ಶಾಸ್ತ್ರಿ ವಿರುದ್ಧ ಬದ್ರಿನಾಥ ಮಂದಿರ ಸಮಿತಿ’, ಈ ಸರ್ವೋಚ್ಚ ತೀರ್ಪಿನ ಸಂದರ್ಭವನ್ನು ನೀಡಿತು. ನ್ಯಾಯಾಲಯಕ್ಕನುಸಾರ ‘ಎಚ್.ಆರ್.ಎಂಡ್.ಸಿ.ಇ. ಆಕ್ಟ್’ (ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ದೇಣಗಿ ಕಾನೂನು) ಕಲಮ್ ೨೩ ರ ಉಲ್ಲೇಖಿಸಲಾಯಿತು. ಅದಕ್ಕನುಸಾರ ಆಯುಕ್ತರಿಗೆ ಇಂತಹ ನಿರ್ಬಂಧವನ್ನು ಹೇರುವ ಅಧಿಕಾರವನ್ನು ನೀಡಲಾಗಿದೆ.

೬. ಕಾರ್ತಿಕಸ್ವಾಮಿ ಮಂದಿರದ ನವೀಕರಣಕ್ಕಾಗಿ ಸರಕಾರದಿಂದ ೩೦೦ ಕೋಟಿ ರೂಪಾಯಿಗಳ ‘ದೊಡ್ಡ ಯೋಜನೆ’ಯ ಘೋಷಣೆ

‘ಮಂದಿರದ ನವೀಕರಣಕ್ಕಾಗಿ ಘೋಷಣೆ ಮಾಡಿದ ಭವ್ಯ ಯೋಜನೆಯನ್ನು ೨೬.೯.೨೦೨೨ ರಂದು ಉದ್ಘಾಟಿಸಲಾಯಿತು. ಹೀಗಿದ್ದರೂ ಆದ್ದರಿಂದ ಭಕ್ತರ ಜನಸಂದಣಿಯನ್ನು ನಿಯಂತ್ರಿಸಿ ನಿರ್ದಿಷ್ಟ ಅವಧಿಯಲ್ಲಿ ಮಂದಿರದ ಭವ್ಯದಿವ್ಯ ನವೀಕರಣ ಮಾಡಲು ಈ ನಿರ್ಬಂಧವನ್ನು ಹೇರಲಾಗಿದೆ.  ಅಭಿವೃದ್ಧಿ ಕಾರ್ಯಕ್ಕಾಗಿ ಕಾರ್ಮಿಕರು ದೊಡ್ಡ ಪ್ರಮಾಣದಲ್ಲಿ ಮಂದಿರಕ್ಕೆ ಬರುತ್ತಾರೆ ಹಾಗೂ ಅದಕ್ಕೂ ಸ್ಥಳದ ಕೊರತೆಯಾಗುತ್ತದೆ. ಈ ಕಾರಣವನ್ನು ಗಮನದಲ್ಲಿಟ್ಟು ಇಂತಹ ಬಂಧನವನ್ನು ಹೇರಲಾಗಿದೆ, ಎಂದು ಸರಕಾರ ಸ್ಪಷ್ಟೀಕರಣ ನೀಡಿದೆ.

ಮಾನ್ಯ ಉಚ್ಚ ನ್ಯಾಯಾಲಯದ ಅಭಿಪ್ರಾಯದಲ್ಲಿ ‘ಆಡಳಿತದವರು ನೀಡಿರುವ ಸ್ಪಷ್ಟೀಕರಣವು ಯೋಗ್ಯವಾಗಿದೆ. ಸರಕಾರ ಮಂದಿರ ಪುನರ್ನಿರ್ಮಾಣಕ್ಕಾಗಿ ೩೦೦ ಕೋಟಿ ರೂಪಾಯಿಗಳನ್ನು ಘೋಷಣೆ ಮಾಡಿದೆ. ಅದು ವಿವೇಕಪೂರ್ಣವಾಗಿ ಖರ್ಚಾಗಬೇಕು’, ಎಂಬ ಇಚ್ಛೆಯನ್ನೂ ನ್ಯಾಯಾಲಯ ವ್ಯಕ್ತಪಡಿಸಿದೆ.

೭. ಭಾರತದಾದ್ಯಂತದ ಮಂದಿರಗಳನ್ನು ಸರಕಾರದ ವಶದಿಂದ ಬಿಡಿಸಿಕೊಳ್ಳಲು ಹಿಂದೂಗಳು ಸಂಘಟಿತರಾಗಿ ಹೋರಾಡುವುದು ಆವಶ್ಯಕವಾಗಿದೆ !

ಹಿಂದೂಗಳ ದುರ್ಭಾಗ್ಯದಿಂದ ಪ್ರಾಚೀನ ಹಿಂದೂ ಆಡಳಿತದ ಶ್ರೇಷ್ಠ ಕಾರ್ಯ, ಹಿಂದೂ ಮಂದಿರಗಳಲ್ಲಿನ ಸಾಂಸ್ಕೃತಿಕ ಭವ್ಯ-ದಿವ್ಯತೆ, ಪಾವಿತ್ರ್ಯ ಹಾಗೂ ಚೈತನ್ಯದ ವಿಷಯಗಳನ್ನು ಧರ್ಮಶಿಕ್ಷಣದ ಮೂಲಕ ನೀಡಲಾಗಿಲ್ಲ. ಈ ವಿಷಯವು ಉಚ್ಚಶಿಕ್ಷಿತ ನ್ಯಾಯಾಧೀಶರಿಗೆ ತಿಳಿಯುತ್ತದೆ; ಆದರೆ ಆಡಳಿತದವರಿಗೆ ತಿಳಿಯುವುದಿಲ್ಲ. ಕಳೆದ ಕೆಲವು ವರ್ಷಗಳಿಂದ ನರೇಂದ್ರ ಮೋದಿ ಇವರು ಭಾರತದಲ್ಲಿನ ಅನೇಕ ಪುರಾತನ ಮಂದಿರಗಳು ಮತ್ತು ಅವುಗಳ ವಿಕಾಸಕ್ಕಾಗಿ ಶ್ರಮಿಸುತ್ತಿದ್ದಾರೆ. ಮೋದಿ ಸರಕಾರ ಕೇವಲ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಕೆಲವು ದೇಶಗಳ ಮಂದಿರಗಳ ಪುನರ್ನಿರ್ಮಾಣಕ್ಕಾಗಿ ಮುಕ್ತವಾಗಿ ಹಣವನ್ನು ನೀಡಿದೆ. ಈ ವಿಷಯದಲ್ಲಿ ಭಾರತದ ವಿದೇಶಮಂತ್ರಿ ಡಾ. ಎಸ್. ಜಯಶಂಕರ ಇವರ ಪ್ರತಿಪಾದನೆಯು ದಿನಪತ್ರಿಕೆಗಳಲ್ಲಿ ಬಂದಿತ್ತು. ಕೇವಲ ಹಿಂದೂಗಳ ಧಾರ್ಮಿಕ ಸ್ಥಳಗಳನ್ನು, ಅಂದರೆ ಮಂದಿರಗಳನ್ನು ಬ್ರಿಟಿಷ ಕಾಲದಿಂದ ಹಾಗೂ ಸ್ವಾತಂತ್ರ್ಯ ಪ್ರಾಪ್ತಿಯ ನಂತರವೂ ವಶಪಡಿಸಿಕೊಳ್ಳಲಾಗುತ್ತಿದೆ. ಆ ಹಣವನ್ನು ಇತರ ಪಂಥೀಯರ ಅಭಿವೃದ್ಧಿಗಾಗಿ ಅಥವಾ ಸರಕಾರಿ ಕಾರ್ಯಕ್ಕಾಗಿ ಅಂದರೆ ಅಧಾರ್ಮಿಕ ಕೃತಿಗಾಗಿ ಖರ್ಚು ಮಾಡಲಾಗುತ್ತದೆ. ದುರ್ಭಾಗ್ಯವೆಂದರೆ ಈ ವಿಷಯದಲ್ಲಿ ಎಲ್ಲ ಪಕ್ಷಗಳ ಆಡಳಿತದವರ ಹಾಗೆಯೆ ನಿದ್ರಿಸ್ತ ಹಿಂದೂಗಳಿಗೂ ಚಿಂತೆಯಿಲ್ಲ.

ಭಾಜಪದ ಮಾಜಿ ಸಂಸದರಾದ ಡಾ. ಸುಬ್ರಮಣಿಯನ್ ಸ್ವಾಮಿಯವರಂತಹ ಕೆಲವು ಜನಪ್ರತಿನಿಧಿಗಳು ಮಂದಿರ ಸರಕಾರಿಕರಣದ ವಿರುದ್ಧ ಸಮರ್ಪಕವಾಗಿ ಹೋರಾಡುತ್ತಿದ್ದಾರೆ. ಭಾರತದಲ್ಲಿ ಎಲ್ಲ ಮಂದಿರಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ಹಿಂದೂ ಬಾಂಧವರು ಒಗ್ಗಟ್ಟಾಗಿ ಕಾನೂನು ಮಾರ್ಗದಲ್ಲಿ ಹೋರಾಡಬೇಕಾಗಿದೆ.’

-(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬೈ ಉಚ್ಚ ನ್ಯಾಯಾಲಯ (೧೬.೧೨.೨೦೨೨)