Canada Food Crisis: ಕೆನಡಾದಲ್ಲಿ ಶೇ. 25 ರಷ್ಟು ಪೋಷಕರು ತಮ್ಮ ಮಕ್ಕಳನ್ನು ಸಾಕಲು ಊಟವನ್ನು ಕಡಿಮೆ ಮಾಡುತ್ತಿದ್ದಾರೆ !

ಪ್ರಧಾನಿ ಟ್ರುಡೋರವರ ಆಡಳಿತದ ಪರಿಣಾಮ !

ಒಟ್ಟಾವಾ(ಕೆನಡಾ)- ಸದ್ಯ ಪ್ರಧಾನಿ ಜಸ್ಟಿನ ಟ್ರುಡೋರವರ ನೇತೃತ್ವದಲ್ಲಿ ಕೆನಡಾವು ದೊಡ್ಡ ಆರ್ಥಿಕ ಸಂಕಟವನ್ನು ಎದುರಿಸುತ್ತಿದೆ. ಕೆನಡಾದಲ್ಲಿ ವಾಸಿಸುವ ಶೇ. 25 ರಷ್ಟು ಪೋಷಕರು ತಮ್ಮ ಮಕ್ಕಳಿಗೆ ಸಾಕಷ್ಟು ಆಹಾರವನ್ನು ಒದಗಿಸಲು ತಮ್ಮ ಆಹಾರ ಊಟವನ್ನು ಕಡಿತಗೊಳಿಸುತ್ತಿದ್ದಾರೆ. ಒಂದು ಸಂಸ್ಥೆಯ ವರದಿಯಲ್ಲಿ ನಾಲ್ವರಲ್ಲಿ 1 ಪೋಷಕರು ತಮ್ಮ ಮಕ್ಕಳ ಹೊಟ್ಟೆ ತುಂಬಿಸಲು ತಾವು ಹಸಿವಿನಿಂದ ಬಳಲುತ್ತಿದ್ದಾರೆ ಎಂಬುದು ಬಹಿರಂಗವಾಗಿದೆ. `ಸಾಲ್ವೇಶನ ಆರ್ಮಿ’ ಎಂಬ ಸಂಸ್ಥೆಯು ಪ್ರಕಟಿಸಿರುವ ವರದಿಯಲ್ಲಿ ಶೇ.90 ಕ್ಕಿಂತ ಹೆಚ್ಚು ಜನರು ಹಣವನ್ನು ಉಳಿಸಲು ದಿನಸಿ ಮೇಲಿನ ಖರ್ಚುಗಳನ್ನು ಕಡಿಮೆ ಮಾಡಿದ್ದಾರೆ ಎಂಬುದು ತಿಳಿದಿದೆ.

ಕೆನಡಾದ ಜನರ ಕೊಂಡುಕೊಳ್ಳುವ ಶಕ್ತಿಯು ಕಡಿಮೆಯಾಗಿದೆ. ಈ ಸಮಸ್ಯೆಯನ್ನು ದೂರಗೊಳಿಸಲು ಟ್ರುಡೊ ಸರಕಾರವು ಕೆಲವು ಅಗತ್ಯ ವಸ್ತುಗಳ ಮೇಲೆ ಸೇವಾ ತೆರಿಗೆಯ (‘ಜಿಎಸ್ಟಿ’) ವಿನಾಯತಿ ಘೋಷಿಸುವ ನಿರೀಕ್ಷೆಯಿದೆ.

ಸಂಪಾದಕೀಯ ನಿಲುವು

ಹೀಗಿರುವಾಗಲೂ ಕೆನಡಾದ ನಾಗರಿಕರು ಪ್ರಧಾನಿ ಟ್ರುಡೊರವರ ನೀತಿಗಳ ವಿರುದ್ಧ ಬೀದಿಗೆ ಇಳಿಯುತ್ತಿಲ್ಲ ಎಂಬುದು ಆಶ್ಚರ್ಯಕರವಾಗಿದೆ!