ಚೀನಾದ ಅತ್ಯಾಧುನಿಕ ಕ್ಷಿಪಣಿಗಳ ಕಾರ್ಯಕ್ರಮವು ಅಮೇರಿಕಾ ಹಾಗೂ ಭಾರತಕ್ಕೆ ಸಂಕಟವಾಗಬಹುದು !

ಚೀನಾವು ಕಾಣಿಸದೇ ದೂರದ ವರೆಗೆ ಹೋಗುವ, ಹಾಗೆಯೇ ಕಡಿಮೆ ಅಂತರದಲ್ಲಿ ಉಪಯೋಗಿಸಬಹುದಾದ ಪಾರಂಪರಿಕ ಕ್ಷಿಪಣಿಗಳನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಾಣ ಮಾಡುತ್ತಿದೆ. ಅಮೇರಿಕಾದ ಸಂರಕ್ಷಣಾ ವಿಭಾಗವು ಪ್ರಸಾರ ಮಾಡಿರುವ ಒಂದು ವರದಿಯಿಂದ ಈ ಮಾಹಿತಿಯು ಬಹಿರಂಗವಾಗಿದೆ.

ವಾರಾಣಸಿಯಂತಹ ಜಾಗ ನಾನು ಜಗತ್ತಿನಲ್ಲಿ ಬೇರೆಲ್ಲೂ ನೋಡಿಲ್ಲ ! – ಜಗತ್ಪ್ರಸಿದ್ಧ ನಟ ಬ್ರಾಡ್ ಪಿಟ್

ನಾನು ಈವರೆಗೆ ಎಷ್ಟೋ ಬಾರಿ ಜಗತ್ತನ್ನು ತಿರುಗಿ ಬಂದಿದ್ದೇನೆ, ಅದರಲ್ಲಿ ಈ ನಗರದ ಬಗ್ಗೆ ನನ್ನ ಮನಸ್ಸಿನಲ್ಲಿ ವಿಶೇಷ ಸ್ಥಾನ ಇದೆ, ಎಂದು ಜಗತ್ಪ್ರಸಿದ್ಧ ನಾಯಕ-ನಟ ಮತ್ತು ಚಲನಚಿತ್ರ ನಿರ್ಮಾಪಕ ಬ್ರಾಡ್ ಪಿಟ್ ಹೇಳಿದರು.

೧೯೨೯ರಲ್ಲಿ ತಮಿಳುನಾಡಿನ ದೇವಸ್ಥಾನದಿಂದ ಕಳ್ಳತನವಾಗಿದ್ದ ದೇವಿಯ ಮೂರ್ತಿ ಅಮೇರಿಕಾದಲ್ಲಿ ಪತ್ತೆ !

ತಮಿಳುನಾಡು ರಾಜ್ಯದ ನಾಗಾಪಟ್ಟಿಣಂ ದೇವಸ್ಥಾನದಿಂದ ೧೯೨೯ ರಲ್ಲಿ ರಾಣಿ ಸೆಂಬಿಯನ್ ಮಹಾದೇವಿಯ ಹಿತ್ತಾಳೆಯ ಮೂರ್ತಿ ಕಳ್ಳತನವಾಗಿತ್ತು. ಈ ಮೂರ್ತಿ ಅಮೇರಿಕಾದ ವಾಶಿಂಗಟನ್‌ನ ‘ಫ್ರೀಯರ ಗ್ಯಾಲರಿ ಆಫ್ ಆರ್ಟ್’ ಸಂಗ್ರಹಾಲಯದಲ್ಲಿ ಪತ್ತೆಯಾಗಿದೆ. ಪೊಲಿಸರು ಅದನ್ನು ಮರಳಿ ತರಲು ಪ್ರಯತ್ನ ಪ್ರಾರಂಭಿಸಿದ್ದಾರೆ.

ಜಿಹಾದಿ ಭಯೋತ್ಪಾದನೆಗಾಗಿ ಚಿಕ್ಕ ಮಕ್ಕಳನ್ನು ಉಪಯೋಗಿಸುವುದು ಖೇದಕರ !

ಭಾರತವು ಸಂಯುಕ್ತ ರಾಷ್ಟ್ರಗಳ ಭದ್ರತಾ ಮಂಡಳಿಯ ಸಭೆಯಲ್ಲಿ ಮಾತನಾಡುವಾಗ ಜಿಹಾದಿ ಭಯೋತ್ಪಾದಕ ಕಾರ್ಯಾಚರಣೆಗಳಲ್ಲಿ ಹೆಚ್ಚುತ್ತಿರುವ ಮಕ್ಕಳ ಸಹಭಾಗದ ಬಗ್ಗೆ ಚಿಂತೆ ವ್ಯಕ್ತಪಡಿಸಿದೆ.

ಆಯೋಗದ ಹೇಳಿಕೆಗಳು ಭಾರತೀಯ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಅಜ್ಞಾನ ತೋರಿಸುತ್ತದೆ ! – ಭಾರತ ಕಟು ಪ್ರತಿಕ್ರಿಯೆ

ಅಮೇರಿಕಾದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಭಾರತದ ವಿಷಯದಲ್ಲಿ ನೀಡಿರುವ ಪಕ್ಷಪಾತಿ ಮತ್ತು ಅಯೋಗ್ಯ ಹೇಳಿಕೆಗಳನ್ನು ನಾವು ಓದಿದ್ದೇವೆ. ಈ ಹೇಳಿಕೆಗಳು ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಅಜ್ಞಾನ ತೋರಿಸುತ್ತವೆ.

ಅಮೇರಿಕಾದ ದೇವಸ್ಥಾನ ಸುರಕ್ಷೆತೆ ಹೆಚ್ಚಿಸಿ ! – ಹಿಂದೂ ಅಮೇರಿಕನ್ ಫೌಂಡೇಶನ್

ಅಮೇರಿಕಾದ ಹಿಂದೂ ಅಮೇರಿಕನ್ ಫೌಂಡೇಶನ್ ಹಿಂದುತ್ವನಿಷ್ಠ ಸಂಘಟನೆ ಅಮೆರಿಕಾದ ಅನೇಕ ರಾಜ್ಯಗಳಲ್ಲಿ ಹಿಂದೂಗಳ ದೇವಸ್ಥಾನದಲ್ಲಿ ಹೆಚ್ಚುತ್ತಿರುವ ಕಳವು ಪ್ರಕರಣ ವಿಷಯವಾಗಿ ಚಿಂತೆ ವ್ಯಕ್ತಪಡಿಸಿದೆ. ಸಂಘಟನೆಯಿಂದ ದೇವಸ್ಥಾನದ ಸುರಕ್ಷೆ ಹೆಚ್ಚಿಸಲು ಒತ್ತಾಯಿಸಲಾಗಿದೆ.

ಪಾಕಿಸ್ತಾನಿ ಭಯೋತ್ಪಾದಕ ಅಬ್ದುಲ ರಹಮಾನ ಮಕ್ಕಿಯನ್ನು ‘ಅಂತರರಾಷ್ಟ್ರೀಯ ಭಯೋತ್ಪಾದಕ’ ಎಂದು ಘೋಷಿಸುವಂತೆ ಭಾರತದ ಪ್ರಸ್ತಾವನೆಗೆ ಚೀನಾದ ಅಡ್ಡಿ

ಪಾಕಿಸ್ತಾನಿ ಭಯೋತ್ಪಾದಕ ಅಬ್ದುಲ ರಹಮಾನ ಮಕ್ಕಿಯನ್ನು ‘ಅಂತರರಾಷ್ಟ್ರೀಯ ಭಯೋತ್ಪಾದಕ’ ಎಂದು ಘೋಷಿಸುವ ಪ್ರಸ್ತಾವನೆಗೆ ಚೀನಾವು ವಿಶ್ವಸಂಸ್ಥೆಯ ಸುರಕ್ಷಾ ಪರಿಷತ್ತಿನಲ್ಲಿ ಅಡ್ಡಿ ಪಡಿಸಿತು. ಭಾರತ ಮತ್ತು ಅಮೇರಿಕಾ ಜಂಟಿಯಾಗಿ ಈ ಪ್ರಸ್ತಾವನೆಯನ್ನು ಮಂಡಿಸಿದ್ದವು.

೨೦೨೧ ರಲ್ಲಿ ವಿಶ್ವದಾದ್ಯಂತ ೧೦ ಕೋಟಿಗಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ – ವಿಶ್ವಸಂಸ್ಥೆ

ವಿಶ್ವಸಂಸ್ಥೆಯ ‘ನಿರಾಶ್ರಿತರ ಏಜೆನ್ಸಿ’ಯ ವಾರ್ಷಿಕ ವರದಿಯಲ್ಲಿ ಆಘಾತಕಾರಿ ಸಂಗತಿಯೊಂದು ಬಯಲಾಗಿದೆ. ಭಾರತದಲ್ಲಿ ಈ ಸಂಖ್ಯೆಯು ೫೦ ಲಕ್ಷದಷ್ಟಿದೆ ಎಂದು ಅಂದಾಜಿಸಲಾಗಿದೆ.

ಚರ್ಚೆಯಲ್ಲಿ ಪಾಲ್ಗೊಂಡ ಮುಸಲ್ಮಾನನು ಮೊದಲಿಗೆ ಅವಮಾನಕರ ಹೇಳಿಕೆ ನೀಡಿದ್ದರಿಂದ ನೂಪುರ ಶರ್ಮ ಇವರು ಪ್ರತ್ಯುತ್ತರ ನೀಡಿದ್ದಾರೆ !

ಮಹಮ್ಮದ್ ಪೈಗಂಬರ್ ಇವರ ವಿಷಯವಾಗಿ (`ಟೈಮ್ಸ್ ನೌ’ ಈ ಆಂಗ್ಲ) ವಾರ್ತಾವಾಹಿನಿಯ ಚರ್ಚಾಕೂಟದಲ್ಲಿ ಭಾಜಪದ ವಕ್ತಾರರು ನೂಪುರ ಶರ್ಮಾ ಇವರು ಅವಮಾನಕಾರಿ ಹೇಳಿಕೆ ನೀಡಿದ್ದಾರೆ ಎನ್ನುತ್ತಾ ಭಾರತದಲ್ಲಿ ಹಾಗೂ ಇಸ್ಲಾಮಿ ದೇಶಗಳಲ್ಲಿ ಅವರನ್ನು ವಿರೋಧಿಸಲಾಗುತ್ತಿದೆ.