ಗುರು, ಸಂತರು ಮತ್ತು ಈಶ್ವರ


ಗುರುಗಳು ಸಾಧಕನಿಗೆ ಸಾಧನೆಯನ್ನು ಮಾಡಲು ಕಲಿಸುತ್ತಾರೆ. ಅವನು ಉತ್ತಮವಾಗಿ ಸಾಧನೆಯನ್ನು ಮಾಡತೊಡಗಿದಾಗ ಈಶ್ವರನು ಅವನಿಗೆ ಅನುಭೂತಿ ನೀಡುತ್ತಾನೆ. ಆಗ ಅವನಿಗೆ, ‘ಗುರುಗಳು ಹೇಳಿದ ಸಾಧನೆಯಿಂದ, ಗುರುಗಳಿಂದ ಅನುಭೂತಿ ಬಂದಿತು ಎಂದೆನಿಸುತ್ತದೆ. ಈ ರೀತಿ ಈಶ್ವರನು ಗುರುಗಳ ಮೇಲಿನ ಶ್ರದ್ಧೆಯನ್ನು ಹೆಚ್ಚಿಸಲು ಸಾಧಕರಿಗೆ ಸಹಾಯ ಮಾಡುತ್ತಾನೆ. ಗುರುಗಳಿಗೆ ಈಶ್ವರನೇ ಅನುಭೂತಿ ನೀಡುವುದು ತಿಳಿದಿರುವುದರಿಂದ ಅವರು ಶಿಷ್ಯನಿಗೆ ಹಾಗೆ ಹೇಳುತ್ತಾರೆ. ಇದರಿಂದ ಸಾಧಕರಿಗೆ ಈಶ್ವರನ ಮೇಲಿನ ಶ್ರದ್ಧೆ ಹೆಚ್ಚಾಗಲು ಸಹಾಯವಾಗುತ್ತದೆ.

ಗುರು ಕಾಣಿಸದಿರುವ ಮತ್ತು ಅರಿವಾಗದಿರುವ ನಿರ್ಗುಣ ಈಶ್ವರನ ಕುರಿತು ಮಾತನಾಡಿ ಸಾಧಕರಲ್ಲಿ ಶ್ರದ್ಧೆಯನ್ನು ನಿರ್ಮಾಣ ಮಾಡುತ್ತಾನೆ. ಈಶ್ವರನು ಸಗುಣ ದೇಹಧಾರಿ ಗುರುಗಳ ಬಗ್ಗೆ ಸಾಧಕರಿಗೆ ಅನುಭೂತಿಯನ್ನು ನೀಡಿ, ಅವರ ಬಗ್ಗೆ ಶ್ರದ್ಧೆಯನ್ನು ನಿರ್ಮಾಣ ಮಾಡುತ್ತಾನೆ.

ಹೆಚ್ಚಿನ ಮಾಹಿತಿಗಾಗಿ ಓದಿ… »


Kannada Weekly | Offline reading | PDF