ಭಾರತದ ಚುನಾವಣೆಯ ಮತ ಎಣಿಕೆಯ ಪ್ರಕ್ರಿಯೆಯನ್ನು ಶ್ಲಾಘಿಸಿದ ಇಲಾನ ಮಸ್ಕ್
ವಾಷಿಂಗ್ಟನ (ಅಮೇರಿಕಾ) – ಅಮೇರಿಕಾದ ಹೆಸರಾಂತ ಉದ್ಯಮಿ ಇಲಾನ ಮಸ್ಕ್ ಇವರು ಭಾರತದ ಚುನಾವಣಾ ಪ್ರಕ್ರಿಯೆಯನ್ನು ಪ್ರಶಂಸಿದ್ದಾರೆ. ಅವರು ಎಕ್ಸ್ ನಲ್ಲಿ, ‘ಭಾರತವು ಒಂದೇ ದಿನದಲ್ಲಿ 64 ಕೋಟಿ ಮತಗಳ ಎಣಿಕೆ ಮಾಡಿದೆ ಮತ್ತು ಕ್ಯಾಲಿಫೋರ್ನಿಯಾ 18 ದಿನಗಳಿಂದ ಒಂದೂವರೆ ಕೋಟಿ ಮತಗಳನ್ನು ಎಣಿಕೆ ಮಾಡುತ್ತಿದೆ’ ಎಂದು ಪೋಸ್ಟ ಮಾಡಿದ್ದಾರೆ. ಅಮೇರಿಕಾದಲ್ಲಿ ನವೆಂಬರ 5 ರಂದು ನಡೆದ ರಾಷ್ಟ್ರಾಧ್ಯಕ್ಷರ ಚುನಾವಣೆಯ ತೀರ್ಪು ಇನ್ನೂ ಹೊರಬಂದಿಲ್ಲ. ಕೆಲವು ಸ್ಥಳಗಳಲ್ಲಿ ಈಗಲೂ ಮತ ಎಣಿಕೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಮಸ್ಕ್ ಇವರು ಮೇಲಿನ ಹೇಳಿಕೆ ನೀಡಿದರು. ಹಾಗೆಯೇ ಭಾರತದಲ್ಲಿ ನಡೆದ ಲೋಕಸಭೆಯ ಚುನಾವಣೆ ಮತ್ತು ಈಗ ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ಹಾಗೆಯೇ ಕೆಲವು ಸ್ಥಾನಗಳಲ್ಲಿ ಉಪಚುನಾವಣೆಗಳ ಮತ ಎಣಿಕೆಯ ಬಳಿಕ ಮಸ್ಕ್ ಈ ಹೇಳಿಕೆ ನೀಡಿದ್ದಾರೆ.
Elon,
That is why India is not just one of the most vibrant but, the greatest democracy!
— Sanatan Prabhat (@SanatanPrabhat) November 24, 2024