ನ್ಯಾಯವಾದಿಗಳ ಕೊರತೆಯಿಂದಾಗಿ ದೇಶದಲ್ಲಿ 63 ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ಬಾಕಿ – ಮುಖ್ಯ ನ್ಯಾಯಮೂರ್ತಿ

ಜಿಲ್ಲಾ ನ್ಯಾಯಾಲಯಗಳನ್ನು ಕನಿಷ್ಟವೆಂದು ತಿಳಿಯುವ ಮಾನಸಿಕತೆಯನ್ನು ಬದಲಾಯಿಸುವಂತೆ ನಾಗರಿಕರಿಗೆ ಕರೆ

ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ

ಅಮರಾವತಿ (ಆಂಧ್ರಪ್ರದೇಶ) – ನ್ಯಾಯವಾದಿಗಳ ಕೊರತೆಯಿಂದಾಗಿ ದೇಶದಲ್ಲಿ 63 ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ ಎಂದು ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ ಇವರು ಮಾಹಿತಿ ನೀಡಿದ್ದಾರೆ. `ಆಂಧ್ರಪ್ರದೇಶ ಕಾನೂನು ಅಕಾಡೆಮಿ’ಯ ಉದ್ಘಾಟನೆಯ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. `ಜಿಲ್ಲಾ ನ್ಯಾಯಾಲಯಗಳು ನ್ಯಾಯವ್ಯವಸ್ಥೆಯ ಬೆನ್ನೆಲುಬಾಗಿದ್ದು, ಅದು ಕನಿಷ್ಠ ಸ್ತರದಲ್ಲಿರುವುದರಿಂದ ಅದನ್ನು ನಗಣ್ಯ ಎಣಿಸುವ ಮಾನಸಿಕತೆಯನ್ನು ನಾಗರಿಕರು ಬದಲಾಯಿಸಬೇಕು’, ಎಂದು ಅವರು ಕರೆ ನೀಡಿದ್ದಾರೆ.

ಮುಖ್ಯ ನ್ಯಾಯಮೂರ್ತಿ ತಮ್ಮ ಮಾತನ್ನು ಮುಂದುವರಿಸುತ್ತಾ,

1. ಅನೇಕ ನ್ಯಾಯಾಲಯಗಳಿಂದ ಇಂದಿಗೂ ಈ ಸಂದರ್ಭದ ಅಂಕಿ-ಅಂಶಗಳು ಸಿಕ್ಕಿಲ್ಲ ಆದ್ದರಿಂದ ಇದರ ಪ್ರಮಾಣ ಹೆಚ್ಚು-ಕಡಿಮೆ ಇರಬಹುದು; ಆದರೆ ನಮ್ಮ ನ್ಯಾಯಾಲಯಗಳು ಸಕ್ಷಮವಾಗಿ ಕಾರ್ಯನಿರತವಾಗಿರಲು ನಮಗೆ ನ್ಯಾಯವಾದಿಗಳ ಸಂಘಟನೆಗಳನ್ನು ಬೆಂಬಲಿಸುವುದು ಮತ್ತು ಅವುಗಳಿಗೆ ಸಹಕಾರ ನೀಡುವ ಆವಶ್ಯಕತೆಯಿದೆ.

2. `ನ್ಯಾಶನಲ ಜ್ಯುಡಿಶಿಯಲ ಡೆಟಾ ಗ್ರಿಡ್’ ಅನುಸಾರ 14 ಲಕ್ಷಕ್ಕಿಂತ ಹೆಚ್ಚು ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ನೊಂದಣಿ ಸಿಗದೇ ಇದ್ದರಿಂದ ಅಥವಾ ಸಂಬಂಧಿಸಿದ ದಾಖಲೆಗಳ ಅಭಾವದಿಂದ ಬಾಕಿ ಉಳಿದಿದೆ. ಇದು ನ್ಯಾಯಾಲಯದ ಕೈಯಲ್ಲಿಲ್ಲ.

3. `ಕಾರಾಗೃಹವಲ್ಲ, ಜಾಮೀನು’ ಈ ಕ್ರಿಮಿನಲ್ ಪ್ರಕರಣ ನ್ಯಾಯವ್ಯವಸ್ಥೆಯು ಎಲ್ಲಕ್ಕಿಂತ ಮೂಲಭೂತ ನಿಯಮಗಳಲ್ಲಿ ಒಂದಾಗಿದೆ. ಭಾರತದ ಸೆರೆಮನೆಯಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿರುವ ಕಚ್ಚಾ(ಶಿಕ್ಷೆ ಆಗುವ ಮೊದಲು) ಕೈದಿಗಳ ಸಂಖ್ಯೆಯನ್ನು ನೋಡಿದರೆ ಇದರ ವಿರೋಧಾಭಾಸ ಚಿತ್ರಣ ಕಂಡು ಬರುತ್ತದೆ. ಹೀಗೆ ದೊಡ್ಡ ಸಂಖ್ಯೆಯಲ್ಲಿ ಕೈದಿಗಳು ಜಾಮೀನಿನ ನಿರೀಕ್ಷೆಯಲ್ಲಿದ್ದಾರೆ.

4. ಕ್ರಿಮಿನಲ್ ಕಾನೂನಿನ ಕಲಂ 438(ಜಾಮೀನು) ಮತ್ತು ಕಲಂ 439(ಜಾಮೀನು ರದ್ದುಗೊಳಿಸುವುದು) ಇದು ನಿರರ್ಥಕ, ಯಾಂತ್ರಿಕ, ಕೇವಲ ಪ್ರಕ್ರಿಯೆಯೆಂದು ಉಪಾಯವೆಂದು ತಿಳಿಯಬಾರದು. ಜಿಲ್ಲಾ ನ್ಯಾಯಾಲಯದಲ್ಲಿ ತಿರಸ್ಕೃತವಾದ ಕೂಡಲೇ ನೇರವಾಗಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುತ್ತದೆ.

5. ಜಿಲ್ಲಾ ನ್ಯಾಯವ್ಯವಸ್ಥೆಯೇ ಇದರ ಮೇಲೆ ಉಪಾಯವನ್ನು ಕಂಡುಹಿಡಿಯಬೇಕು; ಕಾರಣ ದೇಶದಲ್ಲಿರುವ ವಂಚಿತ ಮತ್ತು ಬಡವರು ಜಿಲ್ಲಾ ನ್ಯಾಯಾಲಯವನ್ನು ಆಧಾರವೆಂದು ತಿಳಿಯುತ್ತಾರೆ. ಅವರ ಮೇಲೆ ಇದರ ಬಹುದೊಡ್ಡ ಪ್ರಭಾವವಿರುತ್ತದೆ ಎಂದು ಹೇಳಿದರು.