ನವಂಬರ್ ೨೫ ರಂದು ಸರ್ವೋಚ್ಚ ನ್ಯಾಯಾಲಯದಿಂದ ತೀರ್ಪು
ನವ ದೆಹಲಿ – ಭಾಜಪದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಡಾ. ಸುಬ್ರಹ್ಮಣ್ಯಂ ಸ್ವಾಮಿ, ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ ಜೈನ್ ಮತ್ತು ಇತರರು ಸಂವಿಧಾನದಲ್ಲಿನ ಪ್ರಸ್ತಾವನೆಯಲ್ಲಿರುವ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಈ ಶಬ್ದಗಳನ್ನು ತೆಗೆಯುವಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದಾರೆ. ಈ ಕುರಿತು ನಡೆದಿರುವ ಆಲಿಕೆಯ ನಂತರ ಈಗ ನ್ಯಾಯಾಲಯವು ಬರುವ ನವಂಬರ್ ೨೫ ರಂದು ತೀರ್ಪು ನೀಡಲಿದೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ ಅಂದರೆ ೧೯೭೬ ರಲ್ಲಿ ಇಂದಿರಾಗಾಂಧಿ ಇವರ ನೇತೃತ್ವದ ಸರಕಾರದಿಂದ ೪೨ ನೇ ಸಂವಿಧಾನ ತಿದ್ದುಪಡಿ ಪ್ರಸ್ತಾವನೆಯಲ್ಲಿ ‘ಸಮಾಜವಾದ’, ‘ಜಾತ್ಯತೀತತೆ’ ಮತ್ತು ‘ಅಖಂಡತೆ’ ಈ ಪದಗಳನ್ನು ಸೇರಿಸಲಾಗಿತ್ತು.
ನವಂಬರ್ ೨೨ ರಂದು ನಡೆದಿರುವ ಆಲಿಕೆಯ ಸಮಯದಲ್ಲಿ ನ್ಯಾಯಾಲಯವು, ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂಸತ್ತಿನಲ್ಲಿ ಏನೆಲ್ಲಾ ನಡೆಯಿತು ಅದು ನಿರರ್ಥಕ ಎಂದು ಹೇಳಲು ಆಗುವುದಿಲ್ಲ. ಸಂಬಂಧಪಟ್ಟ ತಿದ್ದುಪಡಿಯ (೪೨ ನೇ ತಿದ್ದುಪಡಿ) ಈ ನ್ಯಾಯಾಲಯದ ಮೂಲಕ ಅನೇಕ ಬಾರಿ ವರದಿ ಪಡೆಯಲಾಗಿದೆ ಎಂದು ಹೇಳಿದೆ.