ಬಂಗಾಲದ ತೃಣಮೂಲ ಕಾಂಗ್ರೆಸ್ ಸರಕಾರದಿಂದ ಪ್ರವಾಸೋದ್ಯಮ ಇಲಾಖೆಯ ಖಾಸಗಿ ಮುಸ್ಲಿಂ ನೌಕರರಿಗೆ ಈದ್‌ನ ಸಂದರ್ಭದಲ್ಲಿ ೪,೮೦೦ ರೂಪಾಯಿಗಳ ಉಡುಗೊರೆ !

ತೃಣಮೂಲ ಕಾಂಗ್ರೆಸ್ ದೀಪಾವಳಿ ಅಥವಾ ಹಿಂದೂ ಇತರ ಹಬ್ಬಗಳ ಸಂದರ್ಭದಲ್ಲಿ ಹಿಂದೂ ನೌಕರರಿಗೆ ಇಂತಹ ಉಡುಗೊರೆಯನ್ನು ನೀಡುತ್ತದೆಯೇ ?

ಬದರಿನಾಥ ಧಾಮದ ದ್ವಾರಗಳನ್ನು ತೆರೆಯಲಾಗಿದೆ !

ಕೊರೋನಾ ಮಹಾಮಾರಿಯಿಂದಾಗಿ ಕಳೆದ ೨ ವರ್ಷಗಳಿಂದ ಮುಚ್ಚಲಾಗಿದ್ದ ಬದ್ರಿನಾಥ ಧಾಮದ ದ್ವಾರಗಳನ್ನು ಮೇ ೮ರ ಮುಂಜಾವಿನಲ್ಲಿ ತೆರೆಯಲಾಯಿತು. ಈಗ ಭಕ್ತರಿಗೆ ಮುಂದಿನ ೬ ತಿಂಗಳ ವರೆಗೆ ಬದ್ರಿವಿಶಾಲನ ದರ್ಶನ ಲಭಿಸಲಿದೆ.

ಸರಕಾರಿ ಶಾಲೆಗಳಲ್ಲಿ ನಡೆಯುವ ಮತಾಂತರದ ಬಗ್ಗೆ ಮಾರ್ಗಸೂಚಿಯನ್ನು ಏಕೆ ಸಿದ್ಧಪಡಿಸಲಿಲ್ಲ ?

ತಮಿಳುನಾಡಿನ ದ್ರಮುಕ ಸರಕಾರವು ಹಿಂದೂ ವಿರೋಧಿಯಾಗಿದ್ದರಿಂದ ಅದು ಎಷ್ಟು ಸತ್ಯವಾದ ಮಾಹಿತಿಯನ್ನು ನೀಡುವುದು ಎಂಬುದರ ಬಗ್ಗೆಯೇ ಸಂದೇಹವಿದೆ. ಆದುದರಿಂದ ಈಗ ಕೇಂದ್ರ ಸರಕಾರವೇ ಈ ಎಲ್ಲವುಗಳ ವಿಚಾರಣೆ ನಡೆಸಿ ಸತ್ಯವನ್ನು ಜನತೆಯ ಎದುರು ತರಬೇಕಿದೆ !

ಸೂರತನಲ್ಲಿ ಒಂದು ಬದಿಯ ಪ್ರೇಮದಿಂದ ತರುಣಿಯ ಹತ್ಯೆ ಮಾಡಿದ ವಿದ್ಯಾರ್ಥಿಗೆ ಗಲ್ಲು !

ಒಂದು ಬದಿಯ ಪ್ರೀತಿಯಿಂದಾಗಿ ತರುಣಿಯ ಹತ್ಯೆ ಮಾಡಿದ ಓರ್ವ ವಿದ್ಯಾರ್ಥಿಗೆ ಸತ್ರ ನ್ಯಾಯಾಲಯವು ಗಲ್ಲುಶಿಕ್ಷೆಯನ್ನು ವಿಧಿಸಿದೆ. ಈ ವಿದ್ಯಾರ್ಥಿಯ ಹೆಸರು ಫೆನಿಲ ಗೋಯಾಣಿ ಎಂದು ಇದೆ. ಶಿಕ್ಷೆಯನ್ನು ವಿಧಿಸುವಾಗ ನ್ಯಾಯಾಲಯವು ಮನುಸ್ಮೃತಿಯಲ್ಲಿನ ಶ್ಲೋಕವನ್ನು ಉಲ್ಲೇಖಿಸಿ ಅದರ ಅರ್ಥವನ್ನೂ ಹೇಳಿದೆ.

ಭಾರತ ಹಿಂದೂ ರಾಷ್ಟ್ರ ಎಂದು ಘೋಷಣೆಯಾದರೆ ವರ್ಷದೊಳಗೆ ೧೫ ದೇಶಗಳು ತಮ್ಮನ್ನು ತಾವು ಹಿಂದೂ ರಾಷ್ಟ್ರವೆಂದು ಘೋಷಿಸುತ್ತಾರೆ ! – ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಭಾರತ ಏನಾದರೂ ತನ್ನನ್ನು ಹಿಂದೂರಾಷ್ಟ್ರ ಘೋಷಿಸಿದರೆ, ವರ್ಷದಲ್ಲಿಯೇ ಇತರ ೧೫ ದೇಶಗಳು ತಮ್ಮನ್ನು ತಾವು ಹಿಂದೂ ರಾಷ್ಟ್ರವೆಂದು ಘೋಷಿಸುವರು ಎಂದು ಪುರಿಯ ಪೂರ್ವಾಮ್ನಾಯ ಗೋವರ್ಧನ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಪ್ರತಿಪಾದಿಸಿದರು.

ಜಾರ್ಖಂಡ್ ನಲ್ಲಿ ಐಎಎಸ್ ಅಧಿಕಾರಿ ಪೂಜಾ ಸಿಂಗಲ್ ಇವರ ಮನೆಯ ಮೇಲೆ ಈಡಿ ದಾಳಿ !

ಜಾರ್ಖಂಡಿನ ಗಣಿ ಮತ್ತು ಉದ್ಯೋಗ ಸಚಿವ ಪೂಜಾ ಸಿಂಗಲ್ ಮತ್ತು ಅವರ ನಿಕಟವರ್ತಿ ಇವರಿಗೆ ಸಂಬಂಧಿಸಿರುವ ೨೪ ಕ್ಕಿಂತಲೂ ಹೆಚ್ಚಿನ ಸ್ಥಳಗಳಲ್ಲಿ ಈಡಿ (ಜಾರಿ ನಿರ್ದೇಶನಾಲಯ) ಒಂದೇ ಸಮಯಕ್ಕೆ ದಾಳಿ ನಡೆಸಿದೆ.

ಮೈಸೂರಿನ ಒಂದು ಉರಿಗೆ ಛೋಟಾ ಪಾಕಿಸ್ತಾನ ಎಂದು ಕರೆಯುವ ಮುಸಲ್ಮಾನರ ವಿಚಾರಣೆಗೆ ಆದೇಶ

ರಾಜ್ಯಾದ್ಯಂತ ಒಂದು ವೀಡಿಯೋ ಪ್ರಸಾರವಾಗಿದೆ. ಇದರಲ್ಲಿ ಇಬ್ಬರು ವ್ಯಕ್ತಿಗಳು ಈದ್ ನಮಾಜ್ ಪಠಣ ನಡೆಸಿ ಹಿಂತಿರುಗುವ ಮುಸಲ್ಮಾನರ ಚಿತ್ರಣವನ್ನು ತೋರಿಸಿ ಅವರ ಊರು ಛೋಟಾ ಪಾಕಿಸ್ತಾನ್ ಎನ್ನುತ್ತಿದ್ದರು. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರು ವಿಚಾರಣೆಯ ಆದೇಶ ನೀಡಿದ್ದಾರೆ.

ಜ್ಞಾನವಾಪಿ ಮಸೀದಿ ಸಮೀಕ್ಷೆಯನ್ನು ತಡೆದ ನೂರಾರು ಮುಸ್ಲಿಮರು !

ಶೃಂಗಾರಗೌರಿ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿಯ ಸಮೀಕ್ಷೆ ಮತ್ತು ಚಿತ್ರೀಕರಣಕ್ಕೆ ನ್ಯಾಯಾಲಯ ಆದೇಶಿಸಿದೆ. ಅದರಂತೆ ಮೇ ೬ರಂದು ಮುಸ್ಲಿಂ ಪಕ್ಷ ಹಾಗೂ ಹಿಂದೂ ಪಕ್ಷದ ನ್ಯಾಯವಾದಿಗಳ ಸಮ್ಮುಖದಲ್ಲಿ ನ್ಯಾಯಾಲಯದ ಆಯುಕ್ತರಿಂದ ಶೃಂಗಾರಗೌರಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಸಮೀಕ್ಷೆ ಹಾಗೂ ಚಿತ್ರೀಕರಣ ನಡೆಸಲಾಯಿತು.

ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಜಾರಿ !

ಶ್ರೀಲಂಕಾದಲ್ಲಿ ರಾಜಕೀಯ ಅಸ್ಥಿರತೆ ನಿರ್ಮಾಣ ಆಗಿದ್ದರಿಂದ ಪರಿಸ್ಥಿತಿ ದಿವಾಳಿಯತ್ತ ಸಾಗುತ್ತಿದೆ. ಅಧ್ಯಕ್ಷ ಗೋಟಾಬಾಯಾ ರಾಜಪಕ್ಷೆ ಮತ್ತು ಪ್ರಧಾನಿ ಮಹಿಂದಾ ರಾಜಪಕ್ಷೆ ರಾಜೀನಾಮೆಗೆ ವಿರೋಧ ಪಕ್ಷದ ನಾಯಕರು ಈಗಾಗಲೇ ಒತ್ತಾಯಿಸಿದ್ದಾರೆ.

ಮೂರು ಐ.ಎ.ಎಸ್. ಅಧಿಕಾರಿಗಳಿಗೆ ೧ ತಿಂಗಳ ಜೈಲು ಶಿಕ್ಷೆ !

ನ್ಯಾಯಾಂಗ ನಿಂದನೆ ಮತ್ತು ನಿಗದಿತ ಅವಧಿಯೊಳಗೆ ಆದೇಶವನ್ನು ಪಾಲಿಸದ ಆರೋಪದಲ್ಲಿ ಮೂವರು ಐಎಎಸ್ ಅಧಿಕಾರಿಗಳಿಗೆ ಆಂಧ್ರಪ್ರದೇಶ ಉಚ್ಚ ನ್ಯಾಯಾಲಯ ಒಂದು ತಿಂಗಳ ಜೈಲು ಶಿಕ್ಷೆ ಮತ್ತು ೨,೦೦೦ ರೂಪಾಯಿ ದಂಡ ವಿಧಿಸಿದೆ.