ಸರ್ವೋಚ್ಚ ನ್ಯಾಯಾಲಯದಿಂದ ಈಡಿ ಬಂಧನದ ಅಧಿಕಾರ ಶಾಶ್ವತ!

ಪ್ರೇವೆಂಶನ್ ಆಫ್ ಮನಿ ಲಾಂಡರಿಂಗ್ ಆಕ್ಟ (ಪಿ.ಎಂ.ಎಲ್.ಎ) ಕಾನೂನಿನಡಿಯಲ್ಲಿ ಆರೋಪಿಗಳನ್ನು ಬಂಧಿಸುವ ಈಡಿಯ ಅಧಿಕಾರವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ. ಈ ಕಾನೂನಿನ ಉಪಬಂಧಗಳನ್ನು ಸಾಂವಿಧಾನಿಕವಾಗಿ ಪ್ರಶ್ನಿಸುವ ಮನವಿಗಳ ಮೇಲೆ ವಿಚಾರಣೆ ನಡೆಸುವಾಗ ನ್ಯಾಯಾಲಯ ಈ ತೀರ್ಪು ನೀಡಿದೆ.

ಬಂಗಾಲದ ಉದ್ಯೋಗ ಸಚಿವ ಪಾರ್ಥ ಚಟರ್ಜಿ ಬಂಧನ

ತೃಣಮೂಲ ಕಾಂಗ್ರೆಸ್ಸಿನ ಮುಖ್ಯಸ್ಥೆ ಮತ್ತು ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ವಿಷಯದಲ್ಲಿ ಮೌನ ಏಕೆ ವಹಿಸಿದ್ದಾರೆ? ಅವರಿಗೆ ಈ ಆವ್ಯವಹಾರದ ಮಾಹಿತಿ ಇರಲಿಲ್ಲ, ಎಂದು ಅವರು ಹೇಳಲು ಸಾಧ್ಯವೇ ? ಈ ಪ್ರಕರಣದಿಂದಾಗಿ ಅವರು ರಾಜೀನಾಮೆ ನೀಡುವುದು ಅಪೇಕ್ಷಿತವಾಗಿದೆ.

ಚೀನ ಸಂಸ್ಥೆಯಾದ ‘ವೀವೋ’ ಕರವನ್ನು ಕಟ್ಟದೇ ಚೀನಾದಲ್ಲಿ ಕಾನೂನು ಬಾಹಿರವಾಗಿ ೬೨ ಸಾವಿರದ ೭೪೬ ಕೋಟಿ ರೂಪಾಯಿಗಳನ್ನು ಕಳುಹಿಸಿದೆ !

ಚೀನಾದ ಸಂಚಾರವಾಣಿ ಸಂಸ್ಥೆಯಾದ ‘ವೀವೋ’ ಕರವನ್ನು ತೆರದೇ ಕಾನೂನುಬಾಹಿರವಾಗಿ ೬೨ ಸಾವಿರದ ೭೪೬ ಕೋಟಿ ರೂಪಾಯಿಗಳನ್ನು ಚೀನಾಗೆ ಕಳುಹಿಸಿರುವ ಮಾಹಿತಿಯು ಬೆಳಕಿಗೆ ಬಂದಿದೆ. ಜ್ಯಾರಿ ನಿರ್ದೇಶನಾಲಯವು (ಇಡಿಯು) ಈ ಮಾಹಿತಿಯನ್ನು ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ನಾಯಿಯಂತೆ ಸಾಯುತ್ತಾರೆ ಎಂದು ನಾಗಪುರದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ಶೇಖ್ ಹುಸೇನ್!

ನ್ಯಾಶನಲ್ ಹೆರಾಲ್ಡ್ ಪತ್ರಿಕೆಯಲ್ಲಾದ ಅವ್ಯವಹಾರದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದೆಹಲಿಯಲ್ಲಿ ಜಾರಿ ನಿರ್ದೇಶನಾಲಯ (ಈಡಿ) ಸತತವಾಗಿ ಮೂರನೇ ದಿನವೂ ವಿಚಾರಣೆಗೊಳಪಡಿಸಿದೆ. ಈ ವೇಳೆಗೆ ಕಾಂಗ್ರೆಸ್ ಕಾರ್ಯಕರ್ತರು ಮೂರು ದಿನಗಳ ಕಾಲ ನಿರ್ದೇಶನಾಲಯದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಾರ್ಖಂಡ್ ನಲ್ಲಿ ಐಎಎಸ್ ಅಧಿಕಾರಿ ಪೂಜಾ ಸಿಂಗಲ್ ಇವರ ಮನೆಯ ಮೇಲೆ ಈಡಿ ದಾಳಿ !

ಜಾರ್ಖಂಡಿನ ಗಣಿ ಮತ್ತು ಉದ್ಯೋಗ ಸಚಿವ ಪೂಜಾ ಸಿಂಗಲ್ ಮತ್ತು ಅವರ ನಿಕಟವರ್ತಿ ಇವರಿಗೆ ಸಂಬಂಧಿಸಿರುವ ೨೪ ಕ್ಕಿಂತಲೂ ಹೆಚ್ಚಿನ ಸ್ಥಳಗಳಲ್ಲಿ ಈಡಿ (ಜಾರಿ ನಿರ್ದೇಶನಾಲಯ) ಒಂದೇ ಸಮಯಕ್ಕೆ ದಾಳಿ ನಡೆಸಿದೆ.

‘ಶಾವೋಮಿ’ನ ಬೆಂಗಳೂರು ಕಚೇರಿಯಲ್ಲಿ ೫೫೫೧ ಕೋಟಿ ರೂಪಾಯಿ ಮೌಲ್ಯದ ನಗದು ವಶ

ಜಾರಿ ನಿರ್ದೇಶನಾಲಯ(ಇಡಿ)ವು ಚೀನಾದ ಸಂಚಾರವಾಣಿ ತಯಾರಿಕಾ ಕಂಪನಿ ಶಾವೋಮಿ ಕಚೇರಿ ಮೇಲೆ ದಾಳಿ ನಡೆಸಿ ೫೫೫೧ ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದೆ. ‘ಶಾವೋಮಿ’ ಭಾರತದಿಂದ ಅಕ್ರಮವಾಗಿ ಹಣವನ್ನು ಕಳುಹಿಸಿದೆ ಎಂದು ಆರೋಪವಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬ್ಯಾನ್ ಮಾಡಲು ಕೇಂದ್ರ ಸರಕಾರ ಸಿದ್ಧತೆಯಲ್ಲಿ !

ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ಯನ್ನು ಕೇಂದ್ರ ಸರಕಾರ ಶೀಘ್ರದಲ್ಲೇ ನಿಷೇಧಿಸಲಿದ್ದು, ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಕೆಲವೆಡೆ ಶ್ರೀರಾಮ ನವಮಿಯ ಮೆರವಣಿಗೆಗಳ ಮೇಲೆ ನಡೆದ ದಾಳಿಯ ಹಿಂದೆ ಇದೇ ಸಂಘಟನೆಯ ಕೈವಾಡವಿದೆ ಎಂಬುದಕ್ಕೆ ಪುರಾವೆಗಳು ಲಭ್ಯವಾಗುತ್ತಿವೆ.

ದೇಶವಿರೋಧಿ ಕಾರ್ಯಾಚರಣೆ ನಡೆಸಲು ಹಣ ಕೂಡಿಸಿದ ಪ್ರಕರಣದಲ್ಲಿ ಪಾಪ್ಯುಲರ ಫ್ರಂಟ ಆಫ್ ಇಂಡಿಯಾದ ಅಧಿಕಾರಿಯ ಬಂಧನ !

ಜಾರಿ ನಿರ್ದೇಶನಾಲು (‘ಈಡಿ’ಯು) ಕೇರಳದ ಕೊಳಿಕೊಡ ವಿಮಾನ ನಿಲ್ದಾಣದಿಂದ ಪಾಪ್ಯುಲರ ಫ್ರಂಟ ಆಫ್ ಇಂಡಿಯಾದ ಅಧಿಕಾರಿ ಅಬ್ದುಲ ರಜ್ಜಾಕ ಬಿಪಿ ಎಂಬುವವನನ್ನು ಬಂಧಿಸಿದೆ. ಆತ ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿರುವಾಗ ಹಿಡಿದುಕೊಳ್ಳಲಾಯಿತು.

೨೦೦ ಕೋಟಿ ರೂಪಾಯಿಗಳ ವಂಚನೆ ಮಾಡಿ ತಿಹಾರ ಕಾರಗೃಹದಲ್ಲಿ ಬಂಧನದಲ್ಲಿರುವ ಸುಕೇಶ ಚಂದ್ರಶೇಕರನಿಗೆ ಪೋಲಿಸರಿಂದ ವಿಶೇಷ ಆತಿಥ್ಯ

೨೦೦ ಕೋಟಿ ರೂಪಾಯಿಗಳ ವಂಚನೆ ಮಾಡಿದ ಪ್ರಕರಣದಲ್ಲಿ ತಿಹಾರ ಕಾರಾಗೃಹದಲ್ಲಿ ಬಂಧನದಲ್ಲಿರುವ ಸುಕೇಶ ಚಂದ್ರಶೇಖರರವರನ್ನು ಭೇಟಿಯಾಗಲು ಜ್ಯಾಕಲಿನ ಫರ್ನಾಂಡಿಸ, ನೊರಾ ಫತೇಹಿ ಸೇರಿದಂತೆ ೧೦ ಚಲನಚಿತ್ರ ನಟಿಯರು ಹಾಗೂ ಅವನ ಸ್ನೇಹಿತೆಯರು ಬಂದು ಹೋದರು.