ಉಗ್ರರು ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಅಮಾನುಷ ಕಿರುಕುಳದ ಬಳಿಕ ಗುಂಡಿಕ್ಕಿ ಹತ್ಯೆ ಮಾಡಿದ್ದರು!

ಶ್ರೀನಗರ (ಜಮ್ಮು-ಕಾಶ್ಮೀರ) – ಕಾಶ್ಮೀರದ ಅನಂತನಾಗ್‌ನ ಹಿಂದೂ ದಾದಿ (ನರ್ಸ್) ಸರಳಾ ಭಟ್ ಅವರ ಮೇಲೆ 36 ವರ್ಷಗಳ ಹಿಂದೆ ನಡೆದ ಅಪಹರಣ, ಸಾಮೂಹಿಕ ಅತ್ಯಾಚಾರ, ಅಮಾನುಷ ಕಿರುಕುಳ ಮತ್ತು ತದನಂತರ ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶ್ಮೀರ ಪೊಲೀಸರು ಆರೋಪಿಗಳ ವಿರುದ್ಧ 737 ಪುಟಗಳ ದೋಷಾರೋಪ ಪಟ್ಟಿಯನ್ನು (ಚಾರ್ಜ್ ಶೀಟ್) ಸಲ್ಲಿಸಿದ್ದಾರೆ. ಈ ಕೃತ್ಯದಲ್ಲಿ ‘ಜಮ್ಮು-ಕಾಶ್ಮೀರ ಲಿಬರೇಶನ್ ಫ್ರಂಟ್’ (ಜೆಕೆಎಲ್‌ಎಫ್) ಮುಖ್ಯಸ್ಥನಾಗಿದ್ದ ಉಗ್ರ ಯಾಸಿನ್ ಮಲಿಕ್ ಕೂಡ ಆರೋಪಿಯಾಗಿದ್ದಾನೆ. ಯಾಸಿನ್ ಮಲಿಕ್ ಸದ್ಯ ಮತ್ತೊಂದು ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ, ಇನ್ನುಳಿದ 4 ಆರೋಪಿಗಳು ಮೃತಪಟ್ಟಿದ್ದಾರೆ. ಖುರ್ಷಿದ್ ಅಹಮದ್ ಚಾಲ್ಕೂ ಎಂಬಾತ ತಲೆಮರೆಸಿಕೊಂಡಿದ್ದು, ಆತ ಪಾಕಿಸ್ತಾನದಲ್ಲಿದ್ದಾನೆ ಎಂದು ಹೇಳಲಾಗುತ್ತಿದೆ.
Chargesheet Filed Against Terrorists 36 Years After the Murder of Sarla Bhatt in Kashmir
The terrorists had abducted her, subjected her to gang rape and inhuman torture, and then shot her dead.
This is a matter of shame for India and for successive governments of all political… pic.twitter.com/GcDCfhNbBw
— Sanatan Prabhat (@SanatanPrabhat) June 29, 2026
‘ಜೆಕೆಎಲ್‌ಎಫ್’ ಉಗ್ರರು ಏಪ್ರಿಲ್ 18, 1990 ರಂದು ‘ಶೇರ್-ಎ-ಕಾಶ್ಮೀರ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್’ ಬಳಿಯಿಂದ ಸರಳಾ ಭಟ್ ಅವರನ್ನು ಅಪಹರಿಸಿದ್ದರು. ಉಗ್ರರು ಆಕೆಯನ್ನು ‘ಪೊಲೀಸರ ಖಬರಿ’ (ಮಾಹಿತಿದಾರರು) ಎಂದು ಬಿಂಬಿಸಿದ್ದರು. ಸದ್ಯ ಕಾಶ್ಮೀರದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ನಂತರ ಪೊಲೀಸರು ಈ ಘಟನೆಯ ತನಿಖೆಯನ್ನು ಪುನರಾರಂಭಿಸಿ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!
ಮಣ್ಣಿನಿಂದ ತಯಾರಿಸಿದ ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ! – ಪ್ರಧಾನಿ
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon
Love Jihad Cases : ಕಳೆದ 24 ಗಂಟೆಗಳಲ್ಲಿ ವಿವಿಧ ರಾಜ್ಯಗಳಲ್ಲಿ ಬೆಳಕಿಗೆ ಬಂದ ಲವ್ ಜಿಹಾದ್ನ 9 ಘಟನೆಗಳು !