ನಿವೃತ್ತಿಯಾಗಲಿರುವ ಸೇನಾ ಪಡೆ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ನೀಡಿದ ಮಾಹಿತಿ

ನವದೆಹಲಿ – ಭಾರತ ಮತ್ತು ಚೀನಾ ಸೇನೆಗಳ ನಡುವೆ ಪ್ರತಿ ವರ್ಷ ೧ ಸಾವಿರದ ೧೦೦ ಕ್ಕೂ ಹೆಚ್ಚು ಬಾರಿ ನೆಲಮಟ್ಟದಲ್ಲಿ ಮಾತುಕತೆಗಳು ನಡೆಯುತ್ತವೆ, ಇದರಿಂದಾಗಿ ಗಡಿಯಲ್ಲಿ ಯಾವುದೇ ರೀತಿಯ ತಪ್ಪು ತಿಳುವಳಿಕೆಯನ್ನು ತಪ್ಪಿಸಬಹುದಾಗಿದೆ. ಈ ಗಡಿಯ ಪರಿಸ್ಥಿತಿ ಸ್ಥಿರವಾಗಿದ್ದರೂ ಸೂಕ್ಷ್ಮವಾಗಿದೆ ಮತ್ತು ಭಾರತೀಯ ಸೇನೆಯು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಂಪೂರ್ಣವಾಗಿ ಸಜ್ಜಾಗಿದೆ, ಎಂದು ನಿವೃತ್ತಿಯಾಗಲಿರುವ ಸೇನಾ ಪಡೆ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಹೇಳಿದ್ದಾರೆ. ಭಾರತೀಯ ಸೇನೆಯು ಮಿಲಿಟರಿ ತಂತ್ರಗಳನ್ನು ವೇಗವಾಗಿ ಬದಲಾಯಿಸುತ್ತಿದ್ದು, ಭವಿಷ್ಯದ ಯುದ್ಧಗಳಿಗಾಗಿ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುತ್ತಿದೆ ಎಂದೂ ಅವರು ಹೇಳಿದ್ದಾರೆ.
ಜನರಲ್ ಉಪೇಂದ್ರ ದ್ವಿವೇದಿ ಅವರು ಮಾತು ಮುಂದುವರೆಸುತ್ತಾ, ಆತ್ಮನಿರ್ಭರತೆಯು ಈಗ ಕೇವಲ ಒಂದು ನೀತಿಯಾಗಿ ಉಳಿದಿಲ್ಲ, ಬದಲಿಗೆ ಅದು ರಾಷ್ಟ್ರೀಯ ಭದ್ರತೆಯ ಮೂಲಭೂತ ಅಗತ್ಯವಾಗಿದೆ. ಯುದ್ಧ ಅಥವಾ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ದೇಶವು ತನ್ನ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಮಿಲಿಟರಿ ತಂತ್ರಜ್ಞಾನಕ್ಕಾಗಿ ಇತರರ ಮೇಲೆ ಅವಲಂಬಿತವಾಗಬಾರದು. ಭಾರತೀಯ ಸೇನೆಯು ಸ್ವದೇಶಿ ತಂತ್ರಜ್ಞಾನ, ಡ್ರೋನ್‌ಗಳು, ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆ, ಸಂವಹನ ನೆಟ್ ವರ್ಕ್ (ಜಾಲಗಳು) ಮತ್ತು ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ವ್ಯವಸ್ಥೆಗಳನ್ನು ವೇಗವಾಗಿ ಅಳವಡಿಸಿಕೊಳ್ಳುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ, ಎಂದು ಹೇಳಿದರು.
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನಲ್ಲಿ ಮುಸ್ಲಿಮರು ಇದ್ದಿದ್ದರೆ, ಕಳ್ಳತನದ ಆರೋಪದ ಮೇಲೆ ಅವರ ‘ಎನ್ಕೌಂಟರ್’ ಮಾಡಲಾಗುತ್ತಿತ್ತು!’
ಅಮರನಾಥ ಯಾತ್ರೆಗೂ ಮುನ್ನ ಉಗ್ರನ ಬಂಧನ
ಸೋಲಾಪುರದಲ್ಲಿ ಅನಧಿಕೃತ ಚರ್ಚ್ ಮತ್ತು ಮಹಾನಗರ ಪಾಲಿಕೆ ನೌಕರನ ಅಕ್ರಮಗಳ ತನಿಖೆ!