ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!

ಹಾವೇರಿ – ಇಲ್ಲಿನ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದಲ್ಲಿ ಕಾರ ಹುಣ್ಣಿಮೆ (ವಟ ಪೂರ್ಣಿಮೆ) ಹಬ್ಬ ಆಚರಿಸುತ್ತಿದ್ದಾಗ, ಸಣ್ಣ ಕಾರಣಕ್ಕಾಗಿ ಮತಾಂಧ ಮುಸ್ಲಿಮರು ಹಿಂದೂ ರೈತನೊಬ್ಬನ ಕೈ ಕತ್ತರಿಸಿದ್ದಾರೆ.

೧. ಕಾರ ಹುಣ್ಣಿಮೆ ಹಬ್ಬದ ಅಂಗವಾಗಿ ಎತ್ತುಗಳ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಯುವಕರು ಮತ್ತು ರೈತರು ಉತ್ಸಾಹದಿಂದ ಭಾಗವಹಿಸಿದ್ದರು. ಎತ್ತುಗಳನ್ನು ಓಡಿಸಿಕೊಂಡು ಹೋಗುವ ದಾರಿಯಲ್ಲಿ ಒಂದು ಮಸೀದಿ ಇತ್ತು. ಮಸೀದಿಯ ಬಳಿ ಕೆಲವರು ಪಟಾಕಿ ಸಿಡಿಸಿದರು ಎಂದು ಹೇಳಲಾಗುತ್ತಿದೆ.

೨. ಇದಕ್ಕೆ ಮತಾಂಧ ಮುಸ್ಲಿಮರ ಗುಂಪೊಂದು ಹಿಂದೂ ರೈತರು ಮತ್ತು ಯುವಕರೊಂದಿಗೆ ಜಗಳವಾಡಲು ಆರಂಭಿಸಿತು. ಆಗ ಮತಾಂಧರ ಗುಂಪು ಮಾರಕಾಸ್ತ್ರಗಳಿಂದ ಹಿಂದೂಗಳ ಮೇಲೆ ದಾಳಿ ಮಾಡಿದೆ. ಈ ಘಟನೆಯಲ್ಲಿ ಶಿವರಾಜ್ ಕುರುಬರ್, ನಾಗಪ್ಪ ಕುರುಬರ್, ಮಲ್ಲಪ್ಪ ರಾಯಪ್ಪ, ಲಿಂಗರಾಜ್ ಮಹಾಂತೇಶ್, ಜಯಪ್ಪ ಸಂಗಪ್ಪ, ಲೋಹಿತ್ ರೇವಣಪ್ಪ ಮುಂತಾದವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮಾರಣಾಂತಿಕ ದಾಳಿಯ ವೇಳೆ ಮತಾಂಧರು ಓರ್ವ ಹಿಂದೂ ರೈತನ ಕೈಯನ್ನೇ ಕತ್ತರಿಸಿದ್ದಾರೆ.

೩. ಈ ಘಟನೆಯಿಂದಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

೪. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಸಂಪಾದಕೀಯ ನಿಲುವು

  • ಮಸೀದಿ ಎದುರು ಪಟಾಕಿ ಸಿಡಿಸಿದ್ದನ್ನು ಒಂದು ದಿನವೂ ಸಹಿಸಿಕೊಳ್ಳದ ಮತಾಂಧ ಮುಸ್ಲಿಮರು, ದಿನಕ್ಕೆ 5 ಬಾರಿ ಮೈಕ್‌ ಶಬ್ದವನ್ನು ಹಿಂದೂಗಳು ಸಹಿಸಿಕೊಳ್ಳುವಂತೆ ಮಾಡುತ್ತಾರೆ!
  • ಮತಾಂಧರು ಯಾವಾಗಲೂ ಶಸ್ತ್ರಸಜ್ಜಿತರಾಗಿರುತ್ತಾರೆ ಮತ್ತು ಅಜಾಗರುಕರಾಗಿರುವ ಹಿಂದೂಗಳನ್ನು ಗುರಿ ಮಾಡುತ್ತಾರೆ, ಆದರೆ ಹಿಂದೂಗಳು ಪ್ರತಿಭಟಿಸುವುದನ್ನು ಬಿಟ್ಟು ಬೇರೇನೂ ಮಾಡುವುದಿಲ್ಲ!