‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’

ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ; ಪಾಕಿಸ್ತಾನದ ಸಚಿವ ಮುಸಾದಿಕ್ ಮಲಿಕ್ ಅವರಿಂದ ಭಾರತಕ್ಕೆ ಟೊಳ್ಳು ಬೆದರಿಕೆ !

​ಇಸ್ಲಾಮಾಬಾದ್ (ಪಾಕಿಸ್ತಾನ) – ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದಡಿ ಪಾಕಿಸ್ತಾನದ ಪಾಲಿಗೆ ಬರುವ ನೀರಿನ ಮೇಲೆ ಹಕ್ಕು ಸಾಧಿಸುವವರ ಕೈಗಳನ್ನು ಕತ್ತರಿಸಲಾಗುವುದು. ಪಾಕಿಸ್ತಾನದ ನೀರಿನ ಹಕ್ಕುಗಳಿಗೆ ಧಕ್ಕೆಯಾದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು, ನೀರಿನ ನಳ ನೆರೆಯ ದೇಶದ ಪ್ರಧಾನಮಂತ್ರಿಯವರ ಕೈಯಲ್ಲಿದೆ. ‘ತಾವು ನೀರಿನ ಒಂದು ಹನಿಯನ್ನೂ ಪಾಕಿಸ್ತಾನಕ್ಕೆ ಹರಿಯಲು ಬಿಡುವುದಿಲ್ಲ’ ಎಂದು ಅವರು ಹೇಳುತ್ತಾರೆ; ಆದರೆ ಪಾಕಿಸ್ತಾನಕ್ಕೆ ನಿಗದಿಪಡಿಸಿದ ನೀರಿನ ಹರಿವಿಗೆ ಯಾರನ್ನೂ ಅಡ್ಡಿಪಡಿಸಲು ಬಿಡುವುದಿಲ್ಲ ಎಂದು ಪಾಕಿಸ್ತಾನದ ಸಚಿವ ಮುಸಾದಿಕ್ ಮಲಿಕ್ ಅವರು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಕುರಿತು ಭಾರತಕ್ಕೆ ಪರೋಕ್ಷವಾಗಿ ಬೆದರಿಕೆ ಹಾಕಿದ್ದಾರೆ. ಅವರ ಈ ಹೇಳಿಕೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.

ಸಂಪಾದಕೀಯ ನಿಲುವು

​ಭಾರತದೊಂದಿಗೆ ಪಾಕಿಸ್ತಾನ ಮಾಡಿದ ೪ ಯುದ್ಧಗಳಲ್ಲಿ, ಹಾಗೂ ‘ಆಪರೇಷನ್ ಸಿಂದೂರ್’ನಲ್ಲಿ ಹೀನಾಯವಾಗಿ ಸೋತ ನಂತರವೂ ತನ್ನದೇ ಜನರನ್ನು ಮೂರ್ಖರನ್ನಾಗಿಸಲು ಪಾಕಿಸ್ತಾನದ ಸಚಿವರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದರಿಂದ, ಅವರ ಹೇಳಿಕೆಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ !