ಸಿಖ್ಖರ ಪ್ರತಿರೋಧದಿಂದಾಗಿ ನಿಂತ ಧ್ವಂಸ ಕಾರ್ಯ!

ಫಾರೂಖಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಫಾರೂಖಾಬಾದ್‌ನಲ್ಲಿರುವ 125 ವರ್ಷ ಹಳೆಯ ಐತಿಹಾಸಿಕ ‘ಗುರುದ್ವಾರ ಶ್ರೀ ಸಿಂಗ್ ಸಭಾ’ ಗುರುದ್ವಾರವನ್ನು ಸ್ಥಳೀಯ ಭೂಮಾಫಿಯಾಗಳು ಸರಕಾರದ ಅಧಿಕಾರಿಗಳೊಂದಿಗೆ ಕೈಜೋಡಿಸಿ ನೆಲಸಮಗೊಳಿಸಲು ಪ್ರಯತ್ನಿಸಿದರು. ಈ ಘಟನೆಯು ಜೂನ್ 24ರ ರಾತ್ರಿ ನಡೆದಿದೆ. ಘಟನೆಯ ಮಾಹಿತಿ ತಿಳಿಯುತ್ತಲೇ ಸ್ಥಳೀಯ ಸಿಖ್ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿ, ತೀವ್ರ ಪ್ರತಿರೋಧ ವ್ಯಕ್ತಪಡಿಸುವ ಮೂಲಕ ಧ್ವಂಸ ಕಾರ್ಯವನ್ನು ತಡೆದರು. ಸಿಖ್ಖರ ಹೆಚ್ಚುತ್ತಿರುವ ಆಕ್ರೋಶ ಮತ್ತು ಒತ್ತಡಕ್ಕೆ ಮಣಿದ ಸ್ಥಳೀಯ ಆಡಳಿತವು ಸದ್ಯಕ್ಕೆ ಈ ಐತಿಹಾಸಿಕ ಸ್ಥಳವನ್ನು ‘ಸೀಲ್’ (ಬೀಗಮುದ್ರೆ) ಮಾಡಿದ್ದು, ಇಲ್ಲಿ ಯಾವುದೇ ರೀತಿಯ ನಿರ್ಮಾಣ ಅಥವಾ ಮುಂದಿನ ಧ್ವಂಸ ಕಾರ್ಯಕ್ಕೆ ನಿಷೇಧ ಹೇರಿದೆ.
4 ವರ್ಷಗಳಿಂದ ನಡೆಯುತ್ತಿತ್ತು ಪಿತೂರಿ!
ಸ್ಥಳೀಯ ಸಿಖ್ ಕಾರ್ಯಕರ್ತರು ಹೇಳುವಂತೆ, ಈ ಐತಿಹಾಸಿಕ ಪರಂಪರೆಯ ಅಸ್ತಿತ್ವವನ್ನು ಅಳಿಸಿಹಾಕಲು ಕಳೆದ 4 ವರ್ಷಗಳಿಂದ ಪಿತೂರಿ ನಡೆಸಲಾಗುತ್ತಿತ್ತು. 4 ವರ್ಷಗಳ ಹಿಂದಿನವರೆಗೂ ಈ ಗುರುದ್ವಾರ ಸಾಹಿಬ್ ನ ಪ್ರಾಚೀನ ಕುರುಹುಗಳು ಸಂಪೂರ್ಣವಾಗಿ ಸುರಕ್ಷಿತವಾಗಿದ್ದವು, ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿತ್ತು. ಆ ನಂತರದ ದಿನಗಳಲ್ಲಿ ಭೂಮಾಫಿಯಾಗಳು ಗುರುದ್ವಾರ ಸಾಹಿಬ್ ನ ಮುಖ್ಯ ಗುಮ್ಮಟವನ್ನು ಒಡೆದು ಅದರ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸಿದ್ದರು.
ಪಿತೂರಿಯಲ್ಲಿ ಭಾಗಿಯಾದವರ ವಿರುದ್ಧ ಕ್ರಮವಾಗಲಿ!
ಸಿಖ್ಖರು, ಆ ಸಮಯದಲ್ಲಿಯೂ ಪೊಲೀಸ್ ಮತ್ತು ಆಡಳಿತದ ಬಳಿ ಲಿಖಿತ ದೂರು ನೀಡಲಾಗಿತ್ತು; ಆದರೆ ಪಾಕಿಸ್ತಾನದ ‘ಇವ್ಯಾಕ್ಯುಯೇಷನ್ ಟ್ರಸ್ಟ್ ಪ್ರಾಪರ್ಟಿ ಬೋರ್ಡ್’ ಮತ್ತು ‘ಪಾಕಿಸ್ತಾನ್ ಸಿಖ್ ಗುರುದ್ವಾರ ಮ್ಯಾನೇಜಮೆಂಟ್ ಕಮಿಟಿ’ ಈ ಅಮೂಲ್ಯ ಪರಂಪರೆಯನ್ನು ರಕ್ಷಿಸಲು ಯಾವುದೇ ಕಠಿಣ ಕ್ರಮ ಕೈಗೊಳ್ಳಲಿಲ್ಲ, ಅದರ ಪರಿಣಾಮವೇ ಇಂದು ಎಲ್ಲರ ಎದುರಿಗಿದೆ, ಎಂದು ಆರೋಪಿಸಿದೆ. ಈ ಪಿತೂರಿಯಲ್ಲಿ ಭಾಗಿಯಾಗಿರುವ ಭೂಮಾಫಿಯಾಗಳು ಮತ್ತು ಭ್ರಷ್ಟ ಸರಕಾರಿ ಅಧಿಕಾರಿಗಳನ್ನು ತಕ್ಷಣವೇ ಬಂಧಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಿಖ್ಖರು ಆಗ್ರಹಿಸಿದ್ದಾರೆ. ಸದ್ಯಕ್ಕೆ ವಕ್ಫ್ ಮಂಡಳಿಯು ಈ ಪ್ರಕರಣದಲ್ಲಿ ಕಾನೂನು ಕ್ರಮಕ್ಕೆ ಸಿದ್ಧತೆ ನಡೆಸುತ್ತಿರುವುದಾಗಿ ತಿಳಿಸಿದೆ; ಆದರೆ ಸಿಖ್ ಸಮುದಾಯದಲ್ಲಿ ಅಪನಂಬಿಕೆಯ ವಾತಾವರಣ ಹಾಗೆಯೇ ಇದೆ.
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation
ಫ್ರಾನ್ಸ್ ನಲ್ಲಿ ಬಿಸಿಲ ಬೇಗೆ; 4 ದಿನಗಳಲ್ಲಿ 1 ಸಾವಿರಕ್ಕೂ ಹೆಚ್ಚು ಜನರ ಸಾವು : France Heatwave
ಚೀನಾ ಸೈನ್ಯದಿಂದ ಅರುಣಾಚಲ ಪ್ರದೇಶಕ್ಕೆ ನುಸುಳಿ ಭೂಮಿ ಕಬಳಿಕೆ ! – ಆದಿವಾಸಿ ಸಮುದಾಯದ ದಾವೆ
ಇರಾನ್ನ ಆತ್ಮರಕ್ಷಣೆಗೆ ಅಣುಬಾಂಬ್ ತಯಾರಿಸುವುದು ಬಿಟ್ಟರೆ ಬೇರೆ ದಾರಿಯಿಲ್ಲ!