ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ

ಭಾಜಪ ನಾಯಕ ಸೇರಿದಂತೆ 20 ಜನರ ವಿರುದ್ಧ ಪ್ರಕರಣ ದಾಖಲು

(ಕಲ್ಮಾ ಎಂದರೆ ಅಲ್ಲಾನನ್ನು ಸ್ತುತಿಸುವ ವಾಕ್ಯಗಳು)

ಭಾಗ್ಯನಗರ (ತೆಲಂಗಾಣ) – ನಿಜಾಮಾಬಾದ್ ಜಿಲ್ಲೆಯ ಆರ್ಮೂರ್‌ನ ಖಾಸಗಿ ಶಾಲೆಯೊಂದರಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ‘ಕಲ್ಮಾ’ ಕಲಿಸುವ ವಿಷಯವಾಗಿ ದೊಡ್ಡ ವಿವಾದ ಸೃಷ್ಟಿಯಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಉಂಟುಮಾಡಿದ ಆರೋಪದ ಮೇಲೆ ಶಾಲೆಯ ಪ್ರತಿನಿಧಿ, ಮುಖ್ಯೋಪಾಧ್ಯಾಯರು ಮತ್ತು ಉರ್ದು ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮತ್ತೊಂದೆಡೆ, ಶಾಲೆಗೆ ನುಗ್ಗಿ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸ್ಥಳೀಯ ಭಾಜಪ ನಾಯಕ ಸೇರಿದಂತೆ ಸುಮಾರು 20 ಜನರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಜೂನ್ 27 ರಂದು ‘ಭಾರತ್ ಚಂದ್ರಾ ಸ್ಕೂಲ್’ನಲ್ಲಿ ಈ ಘಟನೆ ನಡೆದಿದೆ. ಉರ್ದು ತರಗತಿಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ‘ಕಲ್ಮಾ’ವನ್ನು ಕಲಿಸಲಾಗುತ್ತಿದೆ ಎಂದು ಭಾಜಪ ಕಾರ್ಯಕರ್ತರು ಮತ್ತು ಪೋಷಕರು ಶಾಲೆಗೆ ತಲುಪಿ ಆರೋಪಿಸಿದರು. ಇದೇ ವಿಷಯವಾಗಿ ಶಾಲೆಯ ಆವರಣದಲ್ಲಿ ವಿವಾದವಾಯಿತು.

ಶಾಲೆಯ ಮುಖ್ಯೋಪಾಧ್ಯಾಯ ಅಮೀರ್ ಖಾನ್ ಅವರ ಪ್ರಕಾರ, ಕೆಲವು ಮುಸ್ಲಿಂ ಪೋಷಕರು ತಮ್ಮ ಮಕ್ಕಳಿಗೆ ಉರ್ದು ಕಲಿಸುವಂತೆ ವಿನಂತಿಸಿದ್ದರು. ಇದಾದ ನಂತರ ಹೊಸ ಶೈಕ್ಷಣಿಕ ವರ್ಷದಲ್ಲಿ ಉರ್ದು ಶಿಕ್ಷಕಿಯೊಬ್ಬರನ್ನು ನೇಮಿಸಲಾಯಿತು. ಶಾಲೆಯಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಹೆಚ್ಚುವರಿ ತರಗತಿ ಕೊಠಡಿ ಲಭ್ಯವಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಇತರ ಧರ್ಮದ ವಿದ್ಯಾರ್ಥಿಗಳೂ ಕುಳಿತಿದ್ದ ಅದೇ ಕೊಠಡಿಯಲ್ಲಿ ಉರ್ದು ಪಾಠ ಮಾಡಲಾಯಿತು. ಇದರಿಂದಾಗಿ ಕೆಲವು ಹಿಂದೂ ವಿದ್ಯಾರ್ಥಿಗಳೂ ಉರ್ದು ಅಕ್ಷರಗಳನ್ನು ತಮ್ಮ ನೋಟ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ‘ತಮ್ಮ ಮಕ್ಕಳಿಗೆ ನಮಾಜ್ ಮಾಡಲು ಕಲಿಸಲಾಗುತ್ತಿದೆ’ ಎಂಬ ಕೆಲವು ಪೋಷಕರ ಆರೋಪ ತಪ್ಪು. ಮಕ್ಕಳಿಗೆ ಕೇವಲ ಉರ್ದು ವರ್ಣಮಾಲೆಯ ‘ಅಲಿಫ್, ಬೇ, ತೇ’ ಅನ್ನು ಕಲಿಸಲಾಗುತ್ತಿತ್ತೇ ವಿನಃ ಯಾವುದೇ ಧಾರ್ಮಿಕ ಆಚರಣೆ ಅಥವಾ ನಮಾಜ್ ಮಾಡುವ ಶಿಕ್ಷಣ ನೀಡಿಲ್ಲ ಎಂದು ಅವರು ಹೇಳಿದ್ದಾರೆ.

ದೂರು ನೀಡುವ ಸಮಯದಲ್ಲಿ ಸ್ಥಳೀಯ ಭಾಜಪ ನಾಯಕ ವಂದುಲಾ ಬಾಲು ಅವರು ತಮ್ಮ ಬೆಂಬಲಿಗರೊಂದಿಗೆ ಶಾಲೆಗೆ ಬಂದು ಹಲ್ಲೆ ನಡೆಸಿದರು ಎಂದು ಮುಖ್ಯೋಪಾಧ್ಯಾಯರು ಆರೋಪಿಸಿದ್ದಾರೆ. “ನನಗೆ ಕಪಾಳಮೋಕ್ಷ ಮಾಡಲಾಯಿತು ಮತ್ತು ತಳ್ಳಿ ಕೆಳಗೆ ಬೀಳಿಸಲು ಪ್ರಯತ್ನಿಸಲಾಯಿತು. ಪೊಲೀಸರು ಕೂಡ ನನ್ನೊಂದಿಗೆ ಸರಿಯಾಗಿ ನಡೆದುಕೊಳ್ಳಲಿಲ್ಲ ಮತ್ತು ನನ್ನದೇ ಕಚೇರಿಯಲ್ಲಿ ನನ್ನನ್ನು ದೀರ್ಘಕಾಲದವರೆಗೆ ನೆಲದ ಮೇಲೆ ಕೂರಿಸಿದರು” ಎಂದು ಅವರು ಆರೋಪಿಸಿದ್ದಾರೆ.

ಸಂಪಾದಕೀಯ ನಿಲುವು

  • ಹಿಂದೂ ವಿದ್ಯಾರ್ಥಿಗಳಿಗೆ ಕಲ್ಮಾ ಕಲಿಸುವ ಧೈರ್ಯ ಮುಸ್ಲಿಮರಿಗೆ ಬರುತ್ತದೆ ಎಂದರೆ, ಹಿಂದೂಗಳು ನಿದ್ರಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ!
  • ಇಂತಹ ಘಟನೆಗಳನ್ನು ತಡೆಯಲು ಮತ್ತು ಹಿಂದೂಗಳಿಗೆ ಧರ್ಮಶಿಕ್ಷಣ ಸಿಗುವಂತಾಗಲು 'ಹಿಂದೂ ರಾಷ್ಟ್ರ'ದ ಸ್ಥಾಪನೆ ಅನಿವಾರ್ಯವಾಗಿದೆ!