ಕೋಲಾಕಾತಾ (ಬಂಗಾಳ) – ಬಂಗಾಳದ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಆದೇಶವೊಂದು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರವಾಗುತ್ತಿದೆ. ಈ ಆದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು ಒಂದು ಖಾಸಗಿ ಸಂಸ್ಥೆಯಾದ ‘ಫ್ರಂಟ್‌ಲೈನ್ ಎಕ್ಸ್ ಸರ್ವಿಸ್‌ಮನ್ ಬ್ಯೂರೋ’ ಎಂಬ ಖಾಸಗಿ ಸಂಸ್ಥೆಗೆ ರಂಜಾನ್‌ಗಿಂತ ಮೊದಲು ಅವರಲ್ಲಿ ಕೆಲಸ ಮಾಡುವ ಮುಸ್ಲಿಂ ನೌಕರರಿಗೆ ಉಡುಗೊರೆಯಾಗಿ ೪,೮೦೦ ರೂಪಾಯಿಗಳನ್ನು ನೀಡಬೇಕು ಎಂದು ಆದೇಶಿಸಿದೆ. ಈ ನೌಕರರು ಬಂಗಾಳ ಸರಕಾರದ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಅಧಿಕಾರಿಗಳು ಮತ್ತು ಪ್ರವಾಸೋದ್ಯಮ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಾರೆ. ‘ಫ್ರಂಟ್‌ಲೈನ್ ಎಕ್ಸ್ ಸರ್ವಿಸ್‌ಮನ್ ಬ್ಯೂರೋ’ ಇದು ಖಾಸಗಿ ಸಂಸ್ಥೆಯಾಗಿದ್ದು ಇದಕ್ಕೆ ಸರಕಾರವು ಖಾಸಗಿ ಸಂರಕ್ಷಣಾ ಸಂಸ್ಥೆ ಎಂದು ಪರವಾನಗಿ ನೀಡಿದೆ.
ಸಂಪಾದಕೀಯ ನಿಲುವುತೃಣಮೂಲ ಕಾಂಗ್ರೆಸ್ ದೀಪಾವಳಿ ಅಥವಾ ಹಿಂದೂ ಇತರ ಹಬ್ಬಗಳ ಸಂದರ್ಭದಲ್ಲಿ ಹಿಂದೂ ನೌಕರರಿಗೆ ಇಂತಹ ಉಡುಗೊರೆಯನ್ನು ನೀಡುತ್ತದೆಯೇ ? |