ಮದ್ಯಪಾನ ನಿಷೇಧಿತ ಗುಜರಾತಿನಲ್ಲಿ ವಿಷಯುಕ್ತ ಸರಾಯಿ ಸೇವಿಸಿದ 28 ಜನರ ಅಪಮೃತ್ಯು

ಜಿಲ್ಲೆಯ ರೋಜಿದ ಗ್ರಾಮದಲ್ಲಿ ವಿಷಯುಕ್ತ ಸರಾಯಿ ಸೇವಿಸಿದ್ದರಿಂದ ಇಲ್ಲಿಯವರೆಗೆ 28 ಜನರು ಸಾವನ್ನಪ್ಪಿದ್ದಾರೆ, ಮತ್ತು 30 ಜನರು ಈಗಲೂ ಅಸ್ವಸ್ಥರಾಗಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಔಷಧೋಪಚಾರ ನೀಡಲಾಗುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರು 10 ಜನರನ್ನು ವಶಕ್ಕೆ ಪಡೆದಿದ್ದಾರೆ.

ರಾಜ್ಯಸಭೆಯಲ್ಲಿ ಗದ್ದಲವೆಬ್ಬಿಸಿದ 19 ಸಂಸದರು 1 ವಾರದ ಮಟ್ಟಿಗೆ ಅಮಾನತ್ತು.

ಕೇವಲ ಅಮಾನತ್ತು ಬೇಡ, ಅವರಿಂದ ಅಧಿವೇಶನದ ಸಮಯವನ್ನು ವ್ಯರ್ಥಗೊಳಿಸಿದ ಬಗ್ಗೆ ದಂಡವನ್ನು ವಸೂಲು ಮಾಡಬೇಕು. ಇದರೊಂದಿಗೆ ಅವರಿಗೆ ಕೊಡಲಾಗುವ ವೇತನ ಮತ್ತು ಭತ್ಯೆಯನ್ನು ಹಿಂಪಡೆದುಕೊಳ್ಳಬೇಕು.

ಜಾಮತಾಡಾ (ಝಾರಖಂಡ) ಜಿಲ್ಲೆಯಲ್ಲಿನ ೧೦೦ಕ್ಕೂ ಹೆಚ್ಚಿನ ಉರ್ದೂ ಶಾಲೆಗಳಲ್ಲಿ ಕಾನೂನುಬಾಹಿರವಾಗಿ ರವಿವಾರದ ಹೊರತು ಶುಕ್ರವಾರದಂದು ರಜೆ ನೀಡಲಾಗುತ್ತಿದೆ !

ಜಿಲ್ಲೆಯಲ್ಲಿನ ೧೦೦ಕ್ಕೂ ಹೆಚ್ಚಿನ ಶಾಲೆಗಳಲ್ಲಿ ರವಿವಾರದ ಬದಲು ಶುಕ್ರವಾರದಂದು ರಜೆ ನೀಡಲಾಗುತ್ತಿರುವ ವಾರ್ತೆಯನ್ನು ದಿನಪತ್ರಿಕೆಯಾದ ‘ಜಾಗರಣ’ವು ಪ್ರಕಟಿಸಿದೆ. ಶಿಕ್ಷಣ ವಿಭಾಗವು ಹೇಳುವಂತೆ, ಈ ಎಲ್ಲ ಶಾಲೆಗಳು ಉರ್ದೂ ಆಗಿರುವುದರಿಂದ ಶಿಕ್ಷಕರ ಸೌಲಭ್ಯಕ್ಕಾಗಿ ಇಂತಹ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.

ಹರ್ಷನ ಹತ್ಯೆಯ ಆರೋಪಿಗಳಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯ !

ಹಿಜಾಬ್ ನಿಷೇಧ ಪ್ರಕರಣದಲ್ಲಿ ಹತ್ಯೆಗೀಡಾದ ಭಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆಯ ಆರೋಪಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ಪಡೆಯುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹಿಂದಿ ಭಾಷೆಗಿಂತ ಇಂಗ್ಲಿಷ್ ಗೆ ಹೆಚ್ಚು ಬೆಲೆಯಿದೆ ! – ತಮಿಳುನಾಡಿನ ಶಿಕ್ಷಣ ಸಚಿವರು

ಹಿಂದಿ ಭಾಷೆಗಿಂತ ಇಂಗ್ಲಿಷ್ ಭಾಷೆಗೆ ಹೆಚ್ಚು ಬೆಲೆಯಿದೆ, ಆದ್ದರಿಂದ ಹಿಂದಿ ಇದು ಐಚ್ಛಿಕವಾಗಬೇಕು. ಆದರೆ ಅನಿವಾರ್ಯ ಆಗಬಾರದು. ಯಾರು ಹಿಂದಿ ಮಾತನಾಡುತ್ತಾರೆ, ಅವರು ಕ್ಷುಲ್ಲಕ ಕೆಲಸದಲ್ಲಿದ್ದಾರೆ (ನೌಕರಿ). ಹಿಂದಿ ಮಾತನಾಡುವ ಜನರು ನಮ್ಮ ಕಡೆ ಪಾನಿಪುರಿ ಮಾರುತ್ತಾರೆ, ಎಂಬ ಸಂತಾಪಜನಕ ಹೇಳಿಕೆ ತಮಿಳುನಾಡಿನ ಶಿಕ್ಷಣ ಸಚಿವರು ಪೋನಮುಡಿ ನೀಡಿದರು.

ಮುಸಲ್ಮಾನ ಯುವಕನಿಂದ ವಿಹಂಪದ ಮುಖಂಡರ ಮೇಲೆ ಮಾರಣಾಂತಿಕ ಹಲ್ಲೆ

ಇಲ್ಲಿನ ರಾಮದೇವ ದೇವಾಲಯದ ಎದುರಿಗೆ ಕುಳಿತುಕೊಂಡಿದ್ದ ಮುಸಲ್ಮಾನ ಯುವಕನು ದೇವಾಲಯಕ್ಕೆ ಹೋಗುವ ಯುವತಿಯನ್ನು ಚುಡಾಯಿಸಿದ ಬಗ್ಗೆ ಪ್ರಶ್ನಿಸಲು ಹೋದ ವಿಶ್ವ ಹಿಂದು ಪರಿಷತ್ತಿನ ಸ್ಥಳೀಯ ಮುಖಂಡ ಸತವೀರ ಸಹಾರಣರವರ ಮೇಲೆ ಕಬ್ಬಿಣದ ಸಲಾಕೆಯಿಂದ ದಾಳಿ ಮಾಡಿದ್ದರಿಂದ ಸತವೀರರವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ರಾಜಸ್ಥಾನದಲ್ಲಿ ಪರಿಶಿಷ್ಠ ಜಾತಿಯವರಿಗೆ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರದ ಆಯೋಜನೆ !

ರಾಜ್ಯದ ರಾಷ್ಟ್ರೀಯ ಆಯುರ್ವೇದ ಸಂಸ್ಥೆಯು ಮೇ ೨೩ ರಿಂದ ೨೭ರವರೆಗೆ ಪರಿಶಿಷ್ಟ ಜಾತಿಯವರಿಗೆ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಆಯೋಜಿಸಿದೆ. ಸರಕಾರದ ಮಟ್ಟದಲ್ಲಿ ಮಾತ್ರ ಈ ವ್ಯವಸ್ಥೆ ಮಾಡಲಾಗಿದೆ.

ಜಾರ್ಖಂಡ್ ನಲ್ಲಿ ಐಎಎಸ್ ಅಧಿಕಾರಿ ಪೂಜಾ ಸಿಂಗಲ್ ಇವರ ಮನೆಯ ಮೇಲೆ ಈಡಿ ದಾಳಿ !

ಜಾರ್ಖಂಡಿನ ಗಣಿ ಮತ್ತು ಉದ್ಯೋಗ ಸಚಿವ ಪೂಜಾ ಸಿಂಗಲ್ ಮತ್ತು ಅವರ ನಿಕಟವರ್ತಿ ಇವರಿಗೆ ಸಂಬಂಧಿಸಿರುವ ೨೪ ಕ್ಕಿಂತಲೂ ಹೆಚ್ಚಿನ ಸ್ಥಳಗಳಲ್ಲಿ ಈಡಿ (ಜಾರಿ ನಿರ್ದೇಶನಾಲಯ) ಒಂದೇ ಸಮಯಕ್ಕೆ ದಾಳಿ ನಡೆಸಿದೆ.

ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಜಾರಿ !

ಶ್ರೀಲಂಕಾದಲ್ಲಿ ರಾಜಕೀಯ ಅಸ್ಥಿರತೆ ನಿರ್ಮಾಣ ಆಗಿದ್ದರಿಂದ ಪರಿಸ್ಥಿತಿ ದಿವಾಳಿಯತ್ತ ಸಾಗುತ್ತಿದೆ. ಅಧ್ಯಕ್ಷ ಗೋಟಾಬಾಯಾ ರಾಜಪಕ್ಷೆ ಮತ್ತು ಪ್ರಧಾನಿ ಮಹಿಂದಾ ರಾಜಪಕ್ಷೆ ರಾಜೀನಾಮೆಗೆ ವಿರೋಧ ಪಕ್ಷದ ನಾಯಕರು ಈಗಾಗಲೇ ಒತ್ತಾಯಿಸಿದ್ದಾರೆ.

ಅಲವರದ ಶಿವಮಂದಿರ ಧ್ವಂಸ ಪ್ರಕರಣದಲ್ಲಿ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ

ಇಲ್ಲಿನ ರಾಜಗಡದಲ್ಲಿ ೩೦೦ ವರ್ಷಗಳಷ್ಟು ಹಳೆಯದಾದ ಶಿವಮಂದಿರ ಮತ್ತು ಇತರ ಎರಡು ದೇವಾಲಯಗಳನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಗಡ ಆಡಳಿತ ಆಧಿಕಾರಿ ಕೇಶವ ಮೀನಾ ಅವರನ್ನು ಸರಕಾರ ಅಮಾನತುಗೊಳಿಸಿದೆ. ಪಾಲಿಕೆ ಅಧಿಕಾರಿಗಳಾದ ಬನ್ವಾರಿಲಾಲ ಮೀನಾ ಮತ್ತು ಪೌರಾಯುಕ್ತ ಸತೀಶ ದುಹರಿಯಾ ಅವರನ್ನೂ ಕೂಡಾ ಅಮಾನತುಗೊಳಿಸಲಾಗಿದೆ.