ಜಾರ್ಖಂಡ್ ನಲ್ಲಿ ಐಎಎಸ್ ಅಧಿಕಾರಿ ಪೂಜಾ ಸಿಂಗಲ್ ಇವರ ಮನೆಯ ಮೇಲೆ ಈಡಿ ದಾಳಿ !

ಚಾರ್ಟೆಡ್ ಅಕೌಂಟೆಂಟ್ ಮನೆಯಿಂದ ೧೯ ಕೋಟಿ ೩೧ ಲಕ್ಷ ರೂಪಾಯಿ ನಗದು ವಶ

ರಾಂಚಿ (ಜಾರ್ಖಂಡ) – ಜಾರ್ಖಂಡಿನ ಗಣಿ ಮತ್ತು ಉದ್ಯೋಗ ಸಚಿವ ಪೂಜಾ ಸಿಂಗಲ್ ಮತ್ತು ಅವರ ನಿಕಟವರ್ತಿ ಇವರಿಗೆ ಸಂಬಂಧಿಸಿರುವ ೨೪ ಕ್ಕಿಂತಲೂ ಹೆಚ್ಚಿನ ಸ್ಥಳಗಳಲ್ಲಿ ಈಡಿ (ಜಾರಿ ನಿರ್ದೇಶನಾಲಯ) ಒಂದೇ ಸಮಯಕ್ಕೆ ದಾಳಿ ನಡೆಸಿದೆ. ಈ ಸಮಯದಲ್ಲಿ ಪೂಜಾ ಸಿಂಗಲ್ ಇವರ ಪತಿ. ಉದ್ಯೋಗಪತಿ ಅಭಿಷೇಕ ಝಾ ಇವರ ಚಾರ್ಟರ್ಡ್ ಅಕೌಂಟೆಂಟ್ ನಿಂದ ೧೯ ಕೋಟಿ ೩೧ ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ ವಿವಿಧ ಸ್ಥಳಗಳಿಂದ ೧೫೦ ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಹೂಡಿಕೆಯ ಕಾಗದ ಪತ್ರಗಳು ಸಿಕ್ಕಿವೆ. ಆದರೆ ಇದರ ಬಗ್ಗೆ ಈಡಿ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಮೆ ೬ ರಂದು ಬೆಳಿಗ್ಗೆಯಿಂದಲೇ ಈಡಿ ೫ ರಾಜ್ಯಗಳಲ್ಲಿ ಒಂದೇ ಸಮಯದಲ್ಲಿ ಈ ಕ್ರಮ ಕೈಗೊಂಡಿದೆ.

ಭಾರತದ ಸರಕಾರಿ ಸೇವೆಯಲ್ಲಿನ ಐಎಎಸ್ ಅಧಿಕಾರಿ ಪೂಜಾ ಸಿಂಗಲ್ ಇವರ ಕುಂಟೆ ಮತ್ತು ಛತರಾ ಇಲ್ಲಿಯ ಮನರೇಗಾ ಹಗರಣದ ವಿಚಾರಣೆ ನಡೆಯುತ್ತಿದೆ. ಮನರೇಗಾ ಹಗರಣದಲ್ಲಿ ಈಡಿ ಈ ಮೊದಲೇ ಕನಿಷ್ಠ ಇಂಜಿನಿಯರ್ ರಾಮ ವಿನೋದ ಸಿಂಹ ಇವರ ಮೇಲೆ ಕ್ರಮ ಕೈಗೊಂಡಿತ್ತು. ರಾಮ ವಿನೋದ ಇವರ ವಿಚಾರಣೆಯಲ್ಲಿ ಬೆಳಕಿಗೆ ಬಂದಿರುವ ವಿಷಯಗಳ ಆಧಾರದ ಮೇಲೆ ಈಡಿ ಪೂಜಾ ಸಿಂಗಲ್ ಇವರ ಕೈವಾಡದ ತನಿಖೆ ನಡೆಸುತ್ತಿದೆ.

ಸಂಪಾದಕೀಯ ನಿಲುವು

ಸರಕಾರ ಇಂತಹ ಭ್ರಷ್ಟ ಅಧಿಕಾರಿಗಳ ಇಡೀ ಸಂಪತ್ತಿ ವಶಪಡಿಸಿಕೊಂಡು ಅವರನ್ನು ಜೀವನಪರ್ಯಂತ ಕಾರಾಗೃಹಕ್ಕೆ ಆಟ್ಟಬೇಕು.