ಜ್ಞಾನವಾಪಿ ಮಸೀದಿ ಸಮೀಕ್ಷೆಯನ್ನು ತಡೆದ ನೂರಾರು ಮುಸ್ಲಿಮರು !

ನ್ಯಾಯಾಲಯದ ಆದೇಶದ ನಿಂದನೆ !

ವಾರಣಾಸಿ (ಉತ್ತರ ಪ್ರದೇಶ) – ಶೃಂಗಾರಗೌರಿ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿಯ ಸಮೀಕ್ಷೆ ಮತ್ತು ಚಿತ್ರೀಕರಣಕ್ಕೆ ನ್ಯಾಯಾಲಯ ಆದೇಶಿಸಿದೆ. ಅದರಂತೆ ಮೇ ೬ರಂದು ಮುಸ್ಲಿಂ ಪಕ್ಷ ಹಾಗೂ ಹಿಂದೂ ಪಕ್ಷದ ನ್ಯಾಯವಾದಿಗಳ ಸಮ್ಮುಖದಲ್ಲಿ ನ್ಯಾಯಾಲಯದ ಆಯುಕ್ತರಿಂದ ಶೃಂಗಾರಗೌರಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಸಮೀಕ್ಷೆ ಹಾಗೂ ಚಿತ್ರೀಕರಣ ನಡೆಸಲಾಯಿತು. ಮೇ ೭ ರಂದು ಮಧ್ಯಾಹ್ನ ಉಳಿದ ಸಮೀಕ್ಷೆ ನಡೆಸಲು ನ್ಯಾಯಾಲಯದ ಆಯುಕ್ತ ಹಾಗೂ ನ್ಯಾಯವಾದಿಗಳು ತೆರಳಿದಾಗ, ಜ್ಞಾನವಾಪಿ ಮಸೀದಿಯಲ್ಲಿ ನಮಾಜ್‌ಗಾಗಿ ನೆರೆದಿದ್ದ ಅಪಾರ ಸಂಖ್ಯೆಯ ಮುಸ್ಲಿಮರು ಅವರನ್ನು ವಿರೋಧಿಸಿದರು. ಅವರು ಆಯುಕ್ತರನ್ನು ಮತ್ತು ನ್ಯಾಯವಾದಿಗಳನ್ನು ಮಸೀದಿಗೆ ಪ್ರವೇಶಿಸಲು ಬಿಡಲಿಲ್ಲ. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ, ಆಡಳಿತ ಮತ್ತು ಪೊಲೀಸರು ಮಧ್ಯಪ್ರವೇಶಿಸಲು ಪ್ರಯತ್ನಿಸಲಿಲ್ಲ. ಹೀಗಾಗಿ ಸಮೀಕ್ಷೆ ಹಾಗೂ ಚಿತ್ರೀಕರಣ ನಡೆಸದೇ ವಾಪಸ್ ಹೋಗಲು ಆಯುಕ್ತರು ಹಾಗೂ ನ್ಯಾಯವಾದಿಗಳು ನಿರ್ಧರಿಸಿದ್ದಾರೆ. ಈ ಸಂದರ್ಭದಲ್ಲಿ ಹಿಂದೂ ಪಕ್ಷದ ವಕೀಲರಾದ ವಿಷ್ಣು ಶಂಕರ್ ಜೈನ್, ಪೂ. (ನ್ಯಾಯವಾದಿ) ಹರಿ ಶಂಕರ್ ಜೈನ್ ಉಪಸ್ಥಿತರಿದ್ದರು. ಈ ಹಿನ್ನೆಲೆಯಲ್ಲಿ ಮೇ ೯ ರಂದು ನ್ಯಾಯಾಲಯದಲ್ಲಿ ನಡೆಯಲಿರುವ ವಿಚಾರಣೆ ವೇಳೆ ಹಿಂದೂ ಪರ ವಕೀಲರು ವಿಷಯವನ್ನು ಮಂಡಿಸಲಿದ್ದಾರೆ. ಮೇ ೬ ರಂದು ಸಹ ಮುಸ್ಲಿಮರು ಸಮೀಕ್ಷೆಯನ್ನು ವಿರೋಧಿಸಲು ಪ್ರಯತ್ನಿಸಿದಾಗ ಅವರು ಮಸೀದಿಯಿಂದ ಹೊರಗಿದ್ದರು. ಆ ವೇಳೆ ಹಿಂದೂಗಳೂ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಮುಸ್ಲಿಂ ಪಕ್ಷದ ನ್ಯಾಯವಾದಿಗಳಿಗೂ ಇದೇ ಬೇಕಿತ್ತು ! – ನ್ಯಾಯವಾದಿ ವಿಷ್ಣು ಶಂಕರ್ ಜೈನ್

ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರು ಈ ಘಟನೆಯ ಕುರಿತು ಪ್ರಸಾರ ಮಾಧ್ಯಮಗಳೆದುರು ಮಾತನಾಡುತ್ತಾ, ನಾವು ಸಮೀಕ್ಷೆಗಾಗಿ ಜ್ಞಾನವಾಪಿ ಮಸೀದಿಗೆ ಹೋಗಲು ಪ್ರಯತ್ನಿಸಿದಾಗ ಮಧ್ಯಾಹ್ನದ ನಮಾಜಗಾಗಿ ಬಂದಿದ್ದ ಮುಸ್ಲಿಮರು ಅಲ್ಲಿ ಸೇರಿದ್ದರು. ಅವರು ನಮಾಜ ನಂತರ ಹೋಗಬೇಕಿತ್ತು ಎಂದು ನಿರೀಕ್ಷಿಸಲಾಗಿತ್ತು ಮತ್ತು ಸಮೀಕ್ಷೆಯ ಸಮಯದಲ್ಲಿ ಯಾರೂ ಇರದಿರುವುದು ಅಪೇಕ್ಷಿತವಿತ್ತು; ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಹಾಜರಿದ್ದರು. ಅವರು ಮಸೀದಿಯ ಪ್ರವೇಶ ದ್ವಾರದಲ್ಲಿ ನಮ್ಮನ್ನು ತಡೆದರು. ಒಳಗೆ ಹೋಗಲು ಬಿಡಲಿಲ್ಲ. ಈ ವೇಳೆ ಮುಸ್ಲಿಂ ಪಕ್ಷದ ನ್ಯಾಯವಾದಿಗಳೂ ಅವರಿಗೆ ಮನವೊಲಿಸುವ ಪ್ರಯತ್ನ ಮಾಡಲಿಲ್ಲ. ಅವರೂ ಕೂಡ ಅದನ್ನೇ ಬಯಸಿದ್ದರು, ಆದ್ದರಿಂದ ಅವರು ಮೌನವಾಗಿದ್ದರು. ಈ ಕುರಿತು ಮೇ ೯ರಂದು ನ್ಯಾಯಾಲಯಕ್ಕೆ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.

ನ್ಯಾಯಾಲಯದ ಆಯುಕ್ತರ ಬದಲಾವಣೆಗೆ ಮುಸ್ಲಿಂರ ಬೇಡಿಕೆಗೆ ಮೇ ೯ರಂದು ನಿರ್ಧಾರ

ಮೇ ೬ ರಂದು ಶೃಂಗಾರಗೌರಿ ದೇವಸ್ಥಾನ ಮತ್ತು ಪ್ರದೇಶದ ಕೆಲವು ಭಾಗಗಳ ಸಮೀಕ್ಷೆ ಮತ್ತು ಚಿತ್ರೀಕರಣ ಪೂರ್ಣಗೊಂಡಿದೆ. ಇದಕ್ಕೂ ಮುನ್ನ ಮುಸ್ಲಿಂ ಪಕ್ಷವು ಪಕ್ಷಪಾತದ ಆರೋಪ ಹೊರಿಸಿ ನ್ಯಾಯಾಲಯದ ಆಯುಕ್ತರ ಬದಲಾವಣೆಗೆ ಒತ್ತಾಯಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಅದಕ್ಕೆ ಮೇ ೭ರಂದು ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯ, ತಕ್ಷಣ ತೀರ್ಪು ನೀಡದೆ ಸರ್ವೆ ಹಾಗೂ ಚಿತ್ರೀಕರಣ ಮುಗಿಸಿ ಮೇ ೯ರಂದು ಆಯುಕ್ತರನ್ನು ಪದಚ್ಯುತಗೊಳಿಸುವ ಕುರಿತ ನಿರ್ಧರಿಸುವುದಾಗಿ ಹೇಳಿದೆ. ಇದರಿಂದಾಗಿ ಉಳಿದ ಸಮೀಕ್ಷೆ ಹಾಗೂ ಚಿತ್ರೀಕರಣ ಮೇ ೭ರಂದು ನಡೆಯಬೇಕಿತ್ತು; ಆದರೆ, ವಿರೋಧದಿಂದ ಅದು ಸಾಧ್ಯವಾಗಲಿಲ್ಲ.

ಜ್ಞಾನವಾಪಿ ಮಸೀದಿಯ ಒಳಭಾಗದಲ್ಲಿ ಚಿತ್ರೀಕರಣ ನಡೆಸಲು ಯಾವುದೇ ಆದೇಶವಿಲ್ಲ ! – ಮುಸ್ಲಿಮರ ವಾದ

ಮುಸಲ್ಮಾನ ಪಕ್ಷದ ನ್ಯಾಯವಾದಿಯು, ಜ್ಞಾನವಾಪಿ ಮಸೀದಿಯ ಒಳಗಿನ ಸಮೀಕ್ಷೆ ಮಾಡುವ ಆದೇಶ ನೀಡಿಲ್ಲಾ ಎಂದು ಹೇಳಿದರು.

‘ಸಮೀಕ್ಷೆಯ ಆದೇಶವು ಕಾನೂನಿನ ಉಲ್ಲಂಘನೆ !’(ಅಂತೆ) – ಅಸಾದುದ್ದೀನ್ ಓವೈಸಿ

ಈ ಕುತಿರು ಎಂ.ಐ.ಎಂ. ಅಧ್ಯಕ್ಷ ಮತ್ತು ಸಂಸದ ಅಸಾದುದ್ದೀನ್ ಓವೈಸಿ ಅವರು, ಜ್ಞಾನವಾಪಿ ಮಸೀದಿಯ ಸಮೀಕ್ಷೆ ಮಾಡಲು ನ್ಯಾಯಾಲಯದ ಆದೇಶವು ೧೯೯೧ ರ ‘ಧಾರ್ಮಿಕ ಸ್ಥಳಗಳ ಕಾಯಿದೆ’ ಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದರು. (ಒವೈಸಿಗೆ ಹಾಗೆ ಅನಿಸುತ್ತಿದ್ದರೆ, ಅವರು ಈ ಆದೇಶವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಏಕೆ ಪ್ರಶ್ನಿಸಬಾರದು ? – ಸಂಪಾದಕರು) ಈ ಆದೇಶದ ಮೂಲಕ ನ್ಯಾಯಾಲಯವು ೧೯೮೦ ಮತ್ತು ೧೯೯೦ರ ದಶಕಗಳಲ್ಲಿ ನಡೆದ ರಥಯಾತ್ರೆಗಳಿಂದಾಗಿ ದೇಶದಲ್ಲಿ ನಡೆದ ಹಿಂಸಾಚಾರದಂತೆಯೇ ಹಿಂಸಾಚಾರಕ್ಕೆ ಹಾಗೂ ಮುಸಲ್ಮಾನ ವಿರೋಧಿ ಹಿಂಸಾಚಾರಕ್ಕೆ ಅನುಕೂಲ ವಾತಾವರಣ ತಯಾರಿಸುತ್ತಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಜ್ಞಾನವಾಪಿ ಮಸೀದಿಯು ಈ ಹಿಂದೆ ಶ್ರೀ ಕಾಶಿ ವಿಶ್ವನಾಥ ದೇವಾಲಯವಾಗಿತ್ತು ಎಂಬುದು ಎಲ್ಲರಿಗೂ ತಿಳಿದ ವಿಷಯ. ಈ ಸಮೀಕ್ಷೆಯಿಂದ ಅದು ಸಾಬೀತಾಗುವುದು ಎಂಬ ಭಯದಿಂದ ಮುಸ್ಲಿಮರು ಈಗ ಅದನ್ನು ವಿರೋಧಿಸುತ್ತಿರುವುದು ಸ್ಪಷ್ಟವಾಗಿದೆ ! ಸತ್ಯವನ್ನು ಮರೆಮಾಚಲು ಎಷ್ಟೇ ಪ್ರಯತ್ನಿಸಿದರೂ, ಈಗ ನಿಜ ಏನೆಂಬುದು ಅಧಿಕೃತವಾಗಿ ಹೊರಬರಲಿದೆ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು !

ನ್ಯಾಯಾಲಯದ ಆದೇಶವನ್ನು ಬಹಿರಂಗವಾಗಿ ಉಲ್ಲಂಘಿಸುವ ಮತ್ತು ಅದನ್ನು ಅವಮಾನಿಸುವ ಪ್ರತಿಯೊಬ್ಬರಿಗೂ ಕಠಿಣ ಶಿಕ್ಷೆಯಾಗಬೇಕು ! ಇದಕ್ಕಾಗಿ ಪೊಲೀಸರಿಗೆ ನ್ಯಾಯಾಲಯ ಆದೇಶ ನೀಡಬೇಕು !

ಉತ್ತರಪ್ರದೇಶದಲ್ಲಿ ಭಾಜಪ ಸರಕಾರವಿದ್ದಾಗ, ನ್ಯಾಯಾಲಯದ ಆದೇಶದ ಅವಹೇಳನ, ಅದೂ ಕೂಡ ಹಿಂದೂಗಳ ಧಾರ್ಮಿಕ ವಿಷಯಗಳ ಸಂದರ್ಭದಲ್ಲಿ ಆಗುತ್ತಿರುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !