Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ

  • ‘ಜಿಹಾದ್ ಅಲ್ ಅಕ್ಬರ್’ ಎಂಬ ಆನ್‌ಲೈನ್ ಪಿತೂರಿಯ ಮೂಲಕ ಹಿಂದೂ ಮಹಿಳೆಯರೇ ಟಾರ್ಗೆಟ್!

  • ಹಿಂದೂ ಹುಡುಗಿಯರನ್ನು ಜಾಲಕ್ಕೆ ಬೀಳಿಸಿ, ನಿಕಾಹ್‌ಗಿಂತ ಮುಂಚೆ ಗರ್ಭಿಣಿ ಮಾಡಿ ಮಗುವನ್ನು ವಶಕ್ಕೆ ಪಡೆಯಿರಿ ಎಂಬ ಆದೇಶ!

ಕೋಟಾ (ರಾಜಸ್ಥಾನ) – ಇಲ್ಲಿ ಮತಾಂತರ ಮತ್ತು ಮಹಿಳೆಯರ ಲೈಂಗಿಕ ಶೋಷಣೆಗೆ ಸಂಬಂಧಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬಜರಂಗದಳದ ದೂರಿನ ಮೇರೆಗೆ ಪೊಲೀಸರು ಮುಖ್ಯ ಆರೋಪಿ ಮನೀಶ್ ಶರ್ಮಾ ಅಲಿಯಾಸ್ ಮೊಯಿನ್ ಖಾನ್‌ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯ ಬಳಿ ಹಿಂದೂ ಹುಡುಗಿಯರು ಮತ್ತು ಮಹಿಳೆಯರ ಆಕ್ಷೇಪಾರ್ಹ ವೀಡಿಯೊಗಳು ಪತ್ತೆಯಾಗಿವೆ.

1.ಪೊಲೀಸ್ ಮತ್ತು ಗುಪ್ತಚರ ಇಲಾಖೆಗೆ ಮೊಯಿನ್ ಖಾನ್‌ ಮೊಬೈಲ್‌ನಲ್ಲಿ ಪಾಕಿಸ್ತಾನದಿಂದ ಬಂದಿದ್ದ ೩ ರಹಸ್ಯ ‘ಆಡಿಯೋ ಕ್ಲಿಪ್‌ಗಳು’ ಸಿಕ್ಕಿವೆ. ಅಲ್ಲದೇ ಪಾಕಿಸ್ತಾನದಿಂದ ನಿಯಂತ್ರಿಸಲ್ಪಡುವ ‘ಜಿಹಾದ್ ಅಲ್ ಅಕ್ಬರ್’ ಎಂಬ ಹೆಸರಿನ ಅಪಾಯಕಾರಿ ಆನ್‌ಲೈನ್ ಪಿತೂರಿ ಮುನ್ನೆಲೆಗೆ ಬಂದಿದೆ. ಆಡಿಯೋದಲ್ಲಿರುವ ಪಾಕಿಸ್ತಾನಿ ವ್ಯಕ್ತಿಯು, ತಾವು ಈ ಆನ್‌ಲೈನ್ ಅಭಿಯಾನವನ್ನು ೧೯೯೨ ರಿಂದ ನಡೆಸುತ್ತಿರುವುದಾಗಿ ಹೇಳಿದ್ದಾನೆ.

2.ಈ ಅಭಿಯಾನ ನಡೆಸುವ ಪಾಕಿಸ್ತಾನದ ಕಟ್ಟರಪಂಥೀಯ ಜಿಹಾದಿ ಮುಖ್ಯಸ್ಥರು ಸ್ವತಃ ಎಂದಿಗೂ ನೇರವಾಗಿ ಮುಂದೆ ಬರುವುದಿಲ್ಲ. ಅವರು ಭಾರತದಲ್ಲಿರುವ ತಮ್ಮ ದಲ್ಲಾಳಿಗಳಿಗೆ (ಏಜೆಂಟರಿಗೆ) ಟೆಲಿಗ್ರಾಮ್, ಸ್ನ್ಯಾಪ್‌ಚಾಟ್ ಮತ್ತು ಡಿಸ್ಕಾರ್ಡ್‌ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ಸೂಚನೆಗಳನ್ನು ನೀಡುತ್ತಾರೆ. ಇದಕ್ಕಾಗಿ ವ್ಯವಸ್ಥಿತವಾದ ರಹಸ್ಯ ಗ್ರೂಪ್‌ಗಳನ್ನು ರಚಿಸಲಾಗಿದೆ.

3.ಭಾರತದಲ್ಲಿ ಹಿಂದೂ ಮಹಿಳೆಯರನ್ನು ಬಲವಂತವಾಗಿ ಮತಾಂತರ ಮಾಡುವುದು ಮತ್ತು ಧರ್ಮನಿಂದನೆ (ಶ್ರದ್ಧಾಕೇಂದ್ರಗಳ ಅಪಮಾನ) ಮಾಡಿಸುವುದೇ ಈ ಪಿತೂರಿಯ ಮುಖ್ಯ ಉದ್ದೇಶವಾಗಿದೆ. ಈ ಮೂಲಕ ಭಾರತೀಯ ಹಿಂದೂಗಳ ಮನಸ್ಸಿನಲ್ಲಿ ಹಿಂದೂ ಧರ್ಮದ ಬಗ್ಗೆ ದ್ವೇಷದ ಬೀಜ ಬಿತ್ತಲು ಪ್ರಯತ್ನಿಸಲಾಗುತ್ತಿದೆ.

4.ಈ ಆಡಿಯೋದಲ್ಲಿ ಪಾಕಿಸ್ತಾನಿ ಮುಖ್ಯಸ್ಥನು ಭಾರತದಲ್ಲಿರುವ ‘ವಕಾಸ್’ ಎಂಬ ಹೆಸರಿನ ಮುಸ್ಲಿಂ ಯುವಕನಿಗೆ, “ನಿನ್ನ ಕಾಲೇಜಿನಲ್ಲಿರುವ ಮುಸ್ಲಿಂ ಯುವಕರನ್ನು ಜಾಗೃತಗೊಳಿಸು ಮತ್ತು ಅವರೊಂದಿಗೆ ರಹಸ್ಯ ಸಭೆಗಳನ್ನು ನಡೆಸು” ಎಂದು ಹೇಳುತ್ತಿದ್ದಾನೆ. ಈ ಯುವಕರನ್ನು ಪ್ರಚೋದಿಸಲು ಮೊದಲು ಧಾರ್ಮಿಕ ವಿಷಯಗಳನ್ನು ತೋರಿಸಿ ಅರ್ಥೈಸಲಾಗುತ್ತದೆ. ನಂತರ ಅವರಿಗೆ ತಮ್ಮ ರಹಸ್ಯ ಗ್ರೂಪ್ ಬಗ್ಗೆ ತಿಳಿಸಲಾಗುತ್ತದೆ. ಕ್ರಮೇಣ ಮತ್ತು ವ್ಯವಸ್ಥಿತವಾಗಿ ಮುಂದಿನ ಕೆಲಸಕ್ಕಾಗಿ ತರಬೇತಿ ನೀಡಲಾಗುತ್ತದೆ.

5.ಈ ಇಡೀ ಪಿತೂರಿಯ ಅಡಿಯಲ್ಲಿ ವಿವಾಹಿತ ಹಿಂದೂ ಮಹಿಳೆಯರು ಮತ್ತು ಅಪ್ರಾಪ್ತ ಹಿಂದೂ ಹುಡುಗಿಯರನ್ನು ಪ್ರಮುಖವಾಗಿ ಜಾಲಕ್ಕೆ ಬೀಳಿಸಲಾಗುತ್ತದೆ. ಈ ರಹಸ್ಯ ಗ್ರೂಪ್‌ನಲ್ಲಿ, ‘ಯಾವುದೇ ಹಿಂದೂ ಹುಡುಗಿ ಅಥವಾ ಮಹಿಳೆಯನ್ನು ಪ್ರೇಮದ ಜಾಲಕ್ಕೆ ಬೀಳಿಸಿ, ನಿಕಾಹ್‌ಗಿಂತ ಮುಂಚೆಯೇ ಗರ್ಭಿಣಿ ಮಾಡಿ ಮತ್ತು ೯ ತಿಂಗಳ ನಂತರ ಮಗುವನ್ನು ಸ್ವಂತ ವಶಕ್ಕೆ ತೆಗೆದುಕೊಳ್ಳಿ. ಮಗು ಹುಟ್ಟಿದ ನಂತರ ಆ ಹಿಂದೂ ಮಹಿಳೆ ಮುಸ್ಲಿಂ ಆಗಿರುತ್ತಾಳೆ’ ಎಂದು ಬರೆಯಲಾಗಿದೆ.

6.ಪೊಲೀಸರಿಂದ ದೊರೆತ ಮಾಹಿತಿಯ ಪ್ರಕಾರ, ಆರೋಪಿ ಮನೀಶ್ ಶರ್ಮಾ ಮೂಲತಃ ಹಿಂದೂ ಆಗಿದ್ದನು, ನಂತರ ಮತಾಂತರಗೊಂಡು ತನ್ನ ಹೆಸರನ್ನು ಮೊಯಿನ್ ಖಾನ್ ಎಂದು ಬದಲಾಯಿಸಿಕೊಂಡಿದ್ದನು. (ಇದರಿಂದ ‘ಹೊಸದಾಗಿ ಮತಾಂತರಗೊಂಡವರು ಹೆಚ್ಚು ಕಟ್ಟರವಾದಿಗಳಾಗಿರುತ್ತಾರೆ’ ಎಂಬುದು ಸಾಬೀತಾಗುತ್ತದೆ! – ಸಂಪಾದಕರು) ಆತ ಕೋಟಾದ ವಿಜ್ಞಾನನಗರದ ನಿವಾಸಿಯಾಗಿದ್ದಾನೆ. ಮೊಯಿನ್ ಖಾನ್ ಕಳೆದ ಹಲವು ವರ್ಷಗಳಿಂದ ಪಾಕಿಸ್ತಾನಿ ಸಂಘಟನೆಗಳ ಸಂಪರ್ಕದಲ್ಲಿದ್ದನು.

7.ಬಜರಂಗದಳದ ಕಾರ್ಯಕರ್ತ ಯೋಗೇಶ್ ರೇನ್‌ವಾಲ್ ಅವರ ದೂರಿನ ಮೇರೆಗೆ ೧೫ ಜೂನ್ ೨೦೨೬ ರಂದು ಕೋಟಾದ ವಿಜಯನಗರ ಮತ್ತು ಉದ್ಯೋಗನಗರ ಪೊಲೀಸ್ ಠಾಣೆಗಳಲ್ಲಿ ಆರೋಪಿ ಮನೀಶ್ ಶರ್ಮಾ ಅಲಿಯಾಸ್ ಮೊಯಿನ್ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೊಯಿನ್ ಖಾನ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

8.ಈ ಪ್ರಕರಣದಲ್ಲಿ ಬಿಜೆಪಿ ಸಚಿವ ಮದನ್ ದಿಲಾವರ್ ಅವರು ದೋಷಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಸಂಪಾದಕೀಯ ನಿಲುವು

  • ಈ ಬಗ್ಗೆ ಜಾತ್ಯತೀತವಾದಿಗಳು , ಕಮ್ಯುನಿಸ್ಟರು ಹಾಗೂ ಕಾಂಗ್ರೆಸ್‌ನವರು ಎಂದಿಗೂ ಒಂದು ಮಾತನ್ನೂ ಆಡುವುದಿಲ್ಲ ಎಂಬುದನ್ನು ತಿಳಿಯಿರಿ !
  • ಲವ್ ಜಿಹಾದ್ ತಡೆಯಲು ಹಿಂದೂ ಮಹಿಳೆಯರಿಗೆ ಆತ್ಮರಕ್ಷಣೆ ಕಲಿಸುವುದರ ಜೊತೆಗೆ ಧರ್ಮಶಿಕ್ಷಣ ನೀಡಿ ಅವರಲ್ಲಿ ಧರ್ಮಾಭಿಮಾನ ಬೆಳೆಸುವುದೇ ಪರಿಣಾಮಕಾರಿ ಉಪಾಯ!