ಮದ್ರಾಸ ಉಚ್ಚ ನ್ಯಾಯಾಲಯವು ತಮಿಳುನಾಡಿನಲ್ಲಿರುವ ದ್ರವಿಡ ಮುನ್ನೇತ್ರ ಕಳಘಮ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ !
(ದ್ರವಿಡ ಮುನ್ನೇತ್ರ ಕಳಘಮ ಅಂದರೆ ದ್ರವಿಡ ಪ್ರಗತಿ ಸಂಘ)
ಚೆನ್ನೈ (ತಮಿಳುನಾಡು) – ಮದ್ರಾಸ ಉಚ್ಚ ನ್ಯಾಯಾಲಯವು ಸರಕಾರಿ ಶಾಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಮತಾಂತರದ ಬಗ್ಗೆ ರಾಜ್ಯದಲ್ಲಿನ ದ್ರವಿಡ ಮುನ್ನೇತ್ರ ಕಳಘಮ (ದ್ರಮುಕ) ಸರಕಾರವನ್ನು ಗದರಿಸಿದೆ. ನ್ಯಾಯಾಲಯವು, ‘ಸಂವಿಧಾನವು ಧಾರ್ಮಿಕ ಸ್ವಾತಂತ್ರ‍್ಯದ ಅಧಿಕಾರವನ್ನು ನೀಡುತ್ತದೆ; ಬಲವಂತದ ಮತಾಂತರಕ್ಕೆ ಅಲ್ಲ. ತಮಿಳುನಾಡು ಸರಕಾರದ ಬಲವಂತದ ಮತಾಂತರದ ವಿರುದ್ಧ ಮಾರ್ಗಸೂಚಿಯನ್ನು ಸಿದ್ಧಪಡಿಸಲು ಇರುವ ಅಡಚಣೆಯಾದರೂ ಏನು ?’ ಎಂದು ತಮಿಳುನಾಡಿನಲ್ಲಿರುವ ದ್ರಮುಕ ಸರಕಾರವನ್ನು ಪ್ರಶ್ನಿಸಿದೆ. ನ್ಯಾಯವಾದಿ ಬಿ. ಜಗನ್ನಾಥರವರು ದಾಖಲಿಸಿದ ಜನಹಿತ ಅರ್ಜಿಯ ಮೇಲೆ ಆಲಿಕೆ ನಡೆಯುತ್ತಿರುವಾಗ ನ್ಯಾಯಾಲಯವು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
[Forced Religious Conversions In Govt Schools] What Is The Harm In Framing Guidelines? Madras High Court Asks TN Govt @UpasanaSajeev https://t.co/L7AXGBO9bC
— Live Law (@LiveLawIndia) May 5, 2022
ಈ ಅರ್ಜಿಯಲ್ಲಿ ಸರಕಾರಿ ಮತ್ತು ಸರಕಾರಿ ಅನುದಾನವನ್ನು ಪಡೆದ ಶಾಲೆಗಳಲ್ಲಿ ಬಲವಂತವಾಗಿ ನಡೆಯುವ ಮತಾಂತರವನ್ನು ತಡೆಯಬೇಕು ಮತ್ತು ಶಾಲೆಗಳಲ್ಲಿ ಸುಧಾರಣೆಗಳನ್ನು ನಡೆಸುವ ಸಂದರ್ಭದಲ್ಲಿ ಮಾರ್ಗಸೂಚಿಗಳನ್ನು ಹೊರಡಿಸುವ ಆದೇಶವನ್ನು ನೀಡಬೇಕು, ಎಂದು ಮನವಿ ಮಾಡಲಾಗಿದೆ. ಇದರೊಂದಿಗೆ ಮತಾಂತರದ ಪ್ರಕರಣದಲ್ಲಿ ಸಂಬಂಧಿತರ ಮೇಲೆ ಕಠೋರ ಕಾರ್ಯಾಚರಣೆಯ ಬೇಡಿಕೆಯನ್ನೂ ಮಾಡಲಾಗಿದೆ.
ಕ್ರೈಸ್ತ ಮಿಶನರಿಗಳಿಗೆ ರಾಜ್ಯ ಸರಕಾರದಿಂದ ಬೆಂಬಲ ! – ಅರ್ಜಿದಾರರುಈ ಅರ್ಜಿಯಲ್ಲಿ ನ್ಯಾಯವಾದಿ ಬಿ. ಜಗನ್ನಾಥರವರು ‘ ಕ್ರೈಸ್ತ ಮಿಶನರಿಗಳಿಗೆ ರಾಜ್ಯ ಸರಕಾರದ ಬೆಂಬಲವಿದ್ದು ಅವರು ಶಿಕ್ಷಣ ಸಂಸ್ಥೆಗಳಲ್ಲಿ ಹಿಂದೂ ಹುಡುಗಿಯರನ್ನು ಗುರಿಯಾಗಿಸುತ್ತಿದ್ದಾರೆ. ಅವರು ಹಿಂದೂ ವಿದ್ಯಾರ್ಥಿಗಳಿಗೆ ಅಪಮಾನ ಮಾಡುತ್ತಾರೆ. ಅವರನ್ನು ನಿಂದಿಸಲಾಗುತ್ತದೆ. ಧರ್ಮದ ಆಧಾರದಲ್ಲಿ ಭೇದಭಾವ ಮಾಡಲಾಗುತ್ತಿದೆ, ಹಾಗೆಯೇ ಹಿಂದೂ ಹುಡುಗಿಯರು ಮತಾಂತರ ಮಾಡದಿದ್ದರೆ ಅವರಿಗೆ ಚಿತ್ರಹಿಂಸೆ ನೀಡಲಾಗುತ್ತದೆ. ತಂಜಾವರದಲ್ಲಿನ ವಿದ್ಯಾರ್ಥಿನಿಯಾದ ಲಾವಣ್ಯಾಳಿಗೆ ಇದೇ ಕಾರಣದಿಂದಾಗಿ ಚಿತ್ರಹಿಂಸೆ ನೀಡಿದ್ದರಿಂದ ಆಕೆಯು ಆತ್ಮಹತ್ಯೆ ಮಾಡಿದ್ದಳು. ನ್ಯಾಯಾಲಯವು ಈ ಘಟನೆಯ ಸಿಬಿಐ ತನಿಖೆಗೆ ಆದೇಶಿಸಿದೆ. ಕನ್ಯಾಕುಮಾರಿಯಲ್ಲಿ ಸರಕಾರಿ ಶಾಲೆಗಳಲ್ಲಿ ಮತಾಂತರವಾಗಲು ನಿರಾಕರಿಸುವ ವಿದ್ಯಾರ್ಥಿಗಳಿಗೆ ಚಿತ್ರಹಿಂಸೆ ನೀಡಲಾಗಿತ್ತು. ಆದುದರಿಂದ ನ್ಯಾಯಾಲಯವು ಮತಾಂತರದ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಆವಶ್ಯಕವಾಗಿದೆ’ ಎಂದು ಹೇಳಿದ್ದಾರೆ. ತಮಿಳುನಾಡು ಸರಕಾರವು ಈ ಅರ್ಜಿಯನ್ನು ವಿರೋಧಿಸುತ್ತ ಈ ಅರ್ಜಿಯನ್ನು ಯಾವುದೇ ಆಧಾರದ ಹೊರತು ದಾಖಲಿಸಿದ್ದರಿಂದ ಅದರ ಬಗ್ಗೆ ವಿಚಾರ ಮಾಡಬಾರದು, ಎಂದು ಹೇಳಿದೆ. |
ಸಂಪಾದಕೀಯ ನಿಲುವುಶಾಲೆಯಲ್ಲಿ ಶ್ರೀಮದ್ಭಗವದ್ಗೀತೆ ಕಲಿಸುವುದನ್ನು ತೀವೃವಾಗಿ ವಿರೋಧಿಸುವ ಪುರೋಗಾಮಿಗಳ ಗುಂಪು ತಮಿಳುನಾಡಿನ ಶಾಲೆಗಳಲ್ಲಿ ನಡೆಯುತ್ತಿರುವ ಹಿಂದೂಗಳ ಮತಾಂತರದ ಬಗ್ಗೆ ಏನೂ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಡಿ ! ತಮಿಳುನಾಡಿನ ದ್ರಮುಕ ಸರಕಾರವು ಹಿಂದೂ ವಿರೋಧಿಯಾಗಿದ್ದರಿಂದ ಅದು ಎಷ್ಟು ಸತ್ಯವಾದ ಮಾಹಿತಿಯನ್ನು ನೀಡುವುದು ಎಂಬುದರ ಬಗ್ಗೆಯೇ ಸಂದೇಹವಿದೆ. ಆದುದರಿಂದ ಈಗ ಕೇಂದ್ರ ಸರಕಾರವೇ ಈ ಎಲ್ಲವುಗಳ ವಿಚಾರಣೆ ನಡೆಸಿ ಸತ್ಯವನ್ನು ಜನತೆಯ ಎದುರು ತರಬೇಕಿದೆ ! |