ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!

ಪೊಲೀಸರಿಂದ ಪ್ರಕರಣ ಮುಚ್ಚಿಹಾಕಲಾಗುತ್ತಿದೆ ಎಂದು ಮೃತ ಯುವಕನ ಸಂಬಂಧಿಕರ ಆರೋಪ

ಸಾಂಗ್ಲಿ – ಮೂಲತಃ ಸಾಂಗ್ಲಿಯವನಾಗಿದ್ದು ಪುಣೆಯಲ್ಲಿ ಉದ್ಯೋಗದಲ್ಲಿದ್ದ ದುರ್ವಾಂಕ ಶೇವಾಳೆ ಎಂಬ 19 ವರ್ಷದ ಹಿಂದು ಯುವಕ ಕೊಲ್ಲಾಪುರದ ಮುಸ್ಲಿಂ ತರುಣಿಯೊಬ್ಬಳನ್ನು ಪ್ರೀತಿಸಿದ್ದನು. ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದರು; ಆದರೆ ಮುಸ್ಲಿಂ ಯುವತಿಯು ವಿವಾಹಕ್ಕಾಗಿ ‘ನಮ್ಮ ಧರ್ಮವನ್ನು ಸ್ವೀಕರಿಸಬೇಕು’ ಎಂಬ ಷರತ್ತನ್ನು ವಿಧಿಸಿದ್ದಳು. ಈ ಷರತ್ತಿನಿಂದಾಗಿ ದುರ್ವಾಂಕ ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಇದರಿಂದಲೇ ‘ದುರ್ವಾಂಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಆತನ ಸಂಬಂಧಿಕರು ಆರೋಪಿಸಿದ್ದಾರೆ.

1. ದುರ್ವಾಂಕ ಕೆಲವು ದಿನಗಳ ಹಿಂದೆ ಸಾಂಗ್ಲಿಗೆ ಬಂದಿದ್ದನು. ಆತನ ಮನೆಯ ಹತ್ತಿರ ವಾಸವಿರುವ ವೃದ್ಧ ಮಹಿಳೆಯೊಬ್ಬರ ಮನೆಗೆ ಕೊಲ್ಲಾಪುರದ ಮುಸ್ಲಿಂ ಯುವತಿಯೊಬ್ಬಳು ಆಗಾಗ್ಗೆ ಬರುತ್ತಿದ್ದಳು. ಆಕೆ ಆ ಮಹಿಳೆಯ ಸಂಬಂಧಿಯಾಗಿದ್ದಳು. ದುರ್ವಾಂಕ್‌ ನಿಗೆ ಆ ಯುವತಿಯ ಪರಿಚಯವಾಗಿ, ಅವರ ಮಧ್ಯೆ ಪ್ರೇಮಸಂಬಂಧ ಏರ್ಪಟ್ಟಿತ್ತು.

2. ತನ್ನ ಮೊಬೈಲ್‌ ನಲ್ಲಿ ‘ಬ್ಯಾಲೆನ್ಸ್’ (ಹಣ) ಖಾಲಿಯಾಗಿದ್ದರಿಂದ, ದುರ್ವಾಂಕ್ ತನ್ನ ತಾಯಿಯ ಮೊಬೈಲ್‌ ನಿಂದ ಆ ಯುವತಿಯನ್ನು ಸಂಪರ್ಕಿಸಿದ್ದನು.

3. ಆ ಇಬ್ಬರ ನಡುವಿನ ಸಂಭಾಷಣೆಯನ್ನು ಪೊಲೀಸರಿಗೆ ತೋರಿಸಿದರೂ, ಪೊಲೀಸರು ಇದುವರೆಗೆ ಯಾವುದೇ ದೃಢವಾದ ಕ್ರಮ ಅಥವಾ ತನಿಖೆಯನ್ನು ಕೈಗೊಂಡಿಲ್ಲ. ಪೊಲೀಸರಿಂದ ಈ ಪ್ರಕರಣವನ್ನು ಮುಚ್ಚಿಹಾಕಲಾಗುತ್ತಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

4. ಈ ಪ್ರಕರಣದಲ್ಲಿ ಸಂಬಂಧಪಟ್ಟ ಯುವಕನ ಸಂಬಂಧಿಕರು ಇದುವರೆಗೆ ಯಾವುದೇ ದೂರು ನೀಡಿಲ್ಲ.

ಸಂಪಾದಕೀಯ ನಿಲುವು

  • ಲವ್ ಜಿಹಾದ್ ಮಾಡುವುದರಲ್ಲಿ ಮುಸ್ಲಿಂ ಯುವತಿಯರೂ ಹಿಂದೆ ಬಿದ್ದಿಲ್ಲ ಎಂಬುದೇ ಈ ಘಟನೆಯಿಂದ ಸಿದ್ಧವಾಗುತ್ತದೆ!
  • ಸರಕಾರವು ಮೃತನ ಸಂಬಂಧಿಕರು ಮಾಡಿರುವ ಗಂಭೀರ ಆರೋಪದ ಬಗ್ಗೆ ತನಿಖೆ ನಡೆಸಿ, ಅದರಲ್ಲಿ ತಪ್ಪಿತಸ್ಥರೆಂದು ಕಂಡುಬರುವ ಪೊಲೀಸರ ಹೆಸರುಗಳನ್ನು ಸಾರ್ವಜನಿಕರೆದುರಿಗೆ ಬಹಿರಂಗಪಡಿಸಬೇಕು!